Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಗತ್ಯ ಇದ್ದರೆ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದಿದ್ದೆ. ಆದರೆ ಈಗ ಚುನಾವಣೆ ಮುಗಿದಿದೆ, ಹೀಗಾಗಿ ದಾಖಲೆ ಬಿಡುಗಡೆಯ ಅಗತ್ಯ ಇಲ್ಲ. ಈಗ ನಾವು ದಾಖಲೆ ಬಿಡುಗಡೆ ಮಾಡಲ್ಲ ಎಂದರು.
Related Articles
Advertisement
ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನ ವಿಚಾರದ ಬಗ್ಗೆ ಮಾತನಾಡಿದ ಅವರು, ವಿನಯ್ ಕುಲರ್ಣಿಗೆ ತೊಂದರೆ ಕೊಡಲು ಬಂಧನ ಮಾಡಲಾಗಿದೆ. ಆ ಭಾಗದಲ್ಲಿ ವಿನಯ್ ಪ್ರಭಾವಿ ವೀರಶೈವ ನಾಯಕ, ಅವರಿಂದ ಸಮಸ್ಯೆ ಆಗುತ್ತದೆ ಎಂದು ದುರುದ್ದೇಶದಿಂದ ಬಂಧನ ಮಾಡಲಾಗಿದೆ. ವಿನಯ್ ಕುಲಕರ್ಣಿ ತಪ್ಪು ಮಾಡಿಲ್ಲ. ಆರೋಪ ಮುಕ್ತರಾಗಿ ಹೊರಗೆ ಬರುತ್ತಾರೆ ಎಂದರು.
ಶಾಲೆಗಳ ಆರಂಭ ವಿಚಾರವಾಗಿ ಮಾತನಾಡಿದ ಡಿಕೆ ಸುರೇಶ್, ಬೇರೆ ಬೇರೆ ದೇಶಗಳಲ್ಲಿ ಶಾಲಾರಂಭಕ್ಕೆ ವೈಜ್ಞಾನಿಕ ಮಾನದಂಡಗಳನ್ನು ಅನುಸರಿಸುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಸರ್ಕಾರಕ್ಕೆ ಶಾಲಾ ಮಕ್ಕಳ ಸುರಕ್ಷತೆಯ ಚಿಂತೆ ಇಲ್ಲ. ಎಂಟು ತಿಂಗಳಿಂದ ಮಕ್ಕಳ ಸುರಕ್ಷತೆ ಬಗ್ಗೆ ಪ್ಲಾನ್ ಮಾಡಬೇಕಿತ್ತು. ಆದರೆ ಈಗ ಜನಾಭಿಪ್ರಾಯ ಪಡೆಯುತ್ತೇವೆ ಎನ್ನುತ್ತಿದ್ದಾರೆ. ಸಚಿವರು, ಶಾಸಕರಿಗೆ, ಅಧಿಕಾರಿಗಳಿಗೆ ಸುರಕ್ಷತೆ ಕೊಡಲು ಸರ್ಕಾರಕ್ಕೆ ಗೊತ್ತು, ಆದರೆ ಅದೇ ಸುರಕ್ಷತೆ ಮಕ್ಕಳಿಗೆ ಯಾಕೆ ಕೊಡಲ್ಲ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ನಮ್ಮನ್ನು ಎದುರಿಸಲಾಗದ ಬಿಜೆಪಿ ಸುಳ್ಳು ಆರೋಪಗಳಿಂದ ಹೇಡಿಗಳ ರಾಜಕೀಯ ಮಾಡುತ್ತಿದೆ: ಕಾಂಗ್ರೆಸ್
ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಆಗುತ್ತೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು, ಬಿಹಾರ ಚುನಾವಣೆ ಬಳಿಕ ನೋಡಿ ಗೊತ್ತಾಗುತ್ತದೆ. ಬಿಜೆಪಿಯಲ್ಲಿ ದೊಡ್ಡ ಬದಲಾವಣೆ ಆಗ ಆಗಬಹುದು. ಯತ್ನಾಳ್ ವಿರುದ್ಧ ಇನ್ನೂ ಬಿಜೆಪಿ ಕ್ರಮ ತಗೊಂಡಿಲ್ಲ, ಯಾಕೆ ? ಅದರರ್ಥ, ಯತ್ನಾಳ್ ಗೆ ಸುಮ್ನಿರಪ್ಪ ಅಂದಿರಬೇಕು. ಬಿಜೆಪಿ ಒಳಗೆ ಏನೋ ನಡೆಯುತ್ತಿದೆ ಎನ್ನುವುದು ಇದು ತೋರಿಸ್ತಿದೆ, ಈ ತಿಂಗಳಲ್ಲಿ ಏನೇನು ಬದಲಾವಣೆ ಆಗುತ್ತೋ ಕಾದು ನೋಡಿ ಎಂದರು.