Advertisement
ಸ್ಥಳೀಯರು ತಮಗೆ ಮೂಲ ಸೌಕರ್ಯ ನೀಡಬೇಕು, ಇಲ್ಲದೇ ಇದ್ದಲ್ಲಿ ಚುನಾವಣೆ ಬಹಿಷ್ಕರಿಸುವುದಾಗಿ ಕಳೆದ ಎ. 6ರಂದು ಪ್ರತಿಭಟನೆ ನಡೆಸಿದ್ದರು. ಆ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ನಿವಾಸಿಗಳನ್ನು ಸಮಾಧಾನಿಸಿ ಚುನಾವಣೆಯಲ್ಲಿ ಪಾಲ್ಗೊಳ್ಳುವಂತೆ ಮನವೊಲಿಸಿದ್ದರು.
ನೆರಿಯ ಗ್ರಾಮದ ಬಂಜಾರುಮಲೆ ಪ್ರದೇಶದ ಅಭಿವೃದ್ಧಿಗೆ ಸಲ್ಲಿಕೆಯಾದ ಒಟ್ಟು 2.75 ಕೋ.ರೂ. ಪ್ರಸ್ತಾವನೆಯಲ್ಲಿ 5 ಕಿ.ಮೀ.ಗಳ ರಸ್ತೆ ನಿರ್ಮಾಣಕ್ಕೆ 100 ಲಕ್ಷ ರೂ., ಒಟ್ಟು 2 ಕಿರು ಸೇತುವೆಗಳ ನಿರ್ಮಾಣಕ್ಕೆ 100 ಲಕ್ಷ ರೂ., ಒಟ್ಟು 4 ಮೋರಿಗಳ ನಿರ್ಮಾಣಕ್ಕೆ 50 ಲಕ್ಷ ರೂ. ಒಳಗೊಂಡಿದೆ.
Related Articles
Advertisement
2 ಕೋ.ರೂ. ಗೊಂದಲಬಂಜಾರು ಪ್ರದೇಶಕ್ಕೆ ತೆರಳಬೇಕಾದರೆ ಚಾರ್ಮಾಡಿ ಘಾಟಿ ರಸ್ತೆಯ 9ನೇ ತಿರುವಿನಿಂದ 9 ಕಿ.ಮೀ. ಸಾಗಬೇಕಿದೆ. ಈ 9 ಕಿ.ಮೀ. ರಸ್ತೆ ಅವ್ಯವಸ್ಥೆಯಿಂದ ಕೂಡಿದ್ದು, ರಸ್ತೆಯ ಒಂದು ಭಾಗಕ್ಕೆ ಕಾಂಕ್ರೀಟ್ ಹಾಕಲಾಗಿದೆ. ಇದರ ಅನುದಾನಕ್ಕೆ ಸಂಬಂಧಪಟ್ಟು ಒಂದು ಪತ್ರದಲ್ಲಿ 2 ಕೋ.ರೂ. ಮೀಸಲಿಡಲಾಗಿದೆ ಎಂದು ತಿಳಿಸಲಾಗಿತ್ತು. ಇಲ್ಲಿ 1 ಕೋ.ರೂ. ರಸ್ತೆ ಕಾಂಕ್ರೀಟ್ ಕಾರ್ಯ ನಡೆಯುತ್ತಿರುವ ವೇಳೆ, ಹಾಲಿ ಕಾಮಗಾರಿ ಬಳಿಕ 2 ಕೋ.ರೂ.ಗಳ ಕಾಮಗಾರಿ ನಡೆಯಲಿದೆ ಎಂದು ನಂಬಿದ್ದರು. ಆದರೆ ಅದರಲ್ಲಿ 1 ಕೋ. ರೂ.ಆಗಲೇ ನಡೆಯುತ್ತಿದ್ದ ಕಾಮಗಾರಿಯ ಅನುದಾನವಾಗಿದ್ದು, ಮತ್ತೂಂದು ಕೋ. ರೂ ಅನ್ನು ಕೋಲೋಡಿಗೆ ನೀಡಲಾಗಿತ್ತು. ಹೀಗಾಗಿ ಹಿಂದಿನ 2 ಕೋ. ರೂ.ಗಳ ಗೊಂದಲದಂತೆ 2.75 ಕೋ. ರೂ. ಪ್ರಸ್ತಾವನೆಯೂ ಗೊಂದಲ ಸೃಷ್ಟಿಸದಿರಲಿ ಎಂದು ಸ್ಥಳೀಯರು ಅಭಿಪ್ರಾಯಿಸಿದ್ದಾರೆ. ಅನುದಾನದ ಮಾಹಿತಿ ಇಲ್ಲ
ಬಾಂಜಾರು ಮಲೆಕುಡಿಯ ಪರಿಶಿಷ್ಟ ವರ್ಗದ ಮೂಲ ಸೌಕರ್ಯದ ಬೇಡಿಕೆ ಹಿನ್ನೆಲೆಯಲ್ಲಿ ಜಿಲ್ಲಾ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ವತಿಯಿಂದ 2.75 ಕೋ.ರೂ. ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಕೆಯಾಗಿದೆ. ಆದರೆ ಅನುದಾನ ಈವರೆಗೆ ಮಂಜೂರಾಗಿಲ್ಲ. ಯಾವಾಗ ಮಂಜೂರಾಗುತ್ತದೆ ಎಂಬುದರ ಕುರಿತು ಮಾಹಿತಿ ಇಲ್ಲ.
– ಡಾ| ಹೇಮಲತಾ
ಯೋಜನ ಸಮನ್ವಯಾಧಿಕಾರಿ, ಐಟಿಡಿಪಿ, ದ.ಕ. ಜಿಲ್ಲೆ ಕಿರಣ್ ಸರಪಾಡಿ