ಕೆ.ಆರ್.ಪೇಟೆ: ತಾಲೂಕಿನ ರೈತರ ಕೆಲಸ ಕಾರ್ಯಗಳು ನಿಗದಿತ ಕಾಲಮಿತಿಯೊಳ ಗೆಮಾಡಿಕೊಡಲು ಅಧಿಕಾರಿಗಳು ಮತ್ತು ನೌಕರರು ಸತಾಯಿಸುತ್ತಿದ್ದು ದಾಖಲೆಗಳನ್ನು ಸಲ್ಲಿಸಿದರೂ ಸಬೂಬು ಹೇಳಿಕೊಂಡು ಬರುತ್ತಿದ್ದಾರೆ ಎಂದು ಕಂದಾಯ ಇಲಾಖೆ ನೌಕರರ ವಿರುದ್ಧ ರೈತರು ದೂರು ನೀಡಿದ್ದಾರೆ. ಇನ್ನು ಮುಂದೆ ಕಡ್ಡಾಯವಾಗಿನಿಗದಿತ ಕಾಲಮಿತಿಯೊಳಗೆ ರೈತರ ಕೆಲಸಕಾರ್ಯ ಮಾಡಿಕೊಡಲು ತಹಶೀಲ್ದಾರ್‌ರೂಪಾ ಅವರಿಗೆ ಜಿಲ್ಲಾಧಿಕಾರಿ ಎಸ್. ಅಶ್ವಥಿ ಸೂಚನೆ ನೀಡಿದರು.
ಸೂಕ್ತ ಕ್ರಮ: ಮಿನಿ ವಿಧಾನಸೌಧದ ಆವರಣದಲ್ಲಿ ನಡೆದ ಕುಂದುಕೊರತೆ ಸಭೆಯಲ್ಲಿ ರೈತರು ಹಾಗೂ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಹೆಲ್ಪ್ ಡೆಸ್ಕ್ ಸ್ಥಾಪಿಸಿ ಜನರಿಗೆ ಅನುಕೂಲಮಾಡಿಕೊಡಿ ಎಂದು ಸೂಚನೆ ನೀಡಿದರು.
ರೈತರು ಹಾಗೂ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸಿ, ಲಂಚದ ಹಣಕ್ಕಾಗಿ ಒತ್ತಾಯಿಸುವ ನೌಕರರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿ. ಅಂತಹವರ ವಿರುದ್ಧ ಸೂಕ್ತ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಕಂದಾಯ ಇಲಾಖೆಯ ಆಡಳಿತದ ವೇಗ ಚುರುಕುಗೊಳಿಸಿ, ಆರು ತಿಂಗಳ ಒಳಗೆ ರೈತರ ಮನವಿಗಳಿಗೆ ಶಾಶ್ವತ ಪರಿಹಾರನೀಡಿ, ಕೋರ್ಟು ಕಚೇರಿಗಳಿಗೆ ಅಲೆಸ ದಂತೆ ಕ್ರಮಕೈಗೊಳ್ಳಬೇಕು ಎಂದುಪಾಂಡವಪುರ ಎಸಿ ಶಿವಾನಂದಮೂರ್ತಿ ಅವರಿಗೆ ನಿರ್ದೇಶನ ನೀಡಿದರು.
ಜಿಪಂ ಸಿಇಒ ದಿವ್ಯಪ್ರಭು, ಡಿಡಿಪಿಐಜವರೇಗೌಡ, ಹೇಮಾವತಿ ಜಲಾಶಯ ಯೋಜನೆ ಸೂಪರಿಂಟೆಂಡೆಂಟ್‌ಎಂಜಿನಿಯರ್ ಚಂದ್ರಶೇಖರ್, ಇಇಶಿಲ್ಪಾ, ಭೂ ದಾಖಲೆಗಳ ಸಹಾಯಕನಿರ್ದೇಶಕ ಪರಶಿವನಾಯಕ್, ರೈತಮುಖಂಡ ರಾದ ಮುದುಗೆರೆ ರಾಜೇಗೌಡ,ಮಂದ ಗೆರೆ ಜಯರಾಂ, ಪಿಬಿ ಮಂಚನಹಳ್ಳಿ ನಾಗಣ್ಣಗೌಡ, ಮರುವನಹಳ್ಳಿಶಂಕರ್, ಮುದ್ದುಕುಮಾರ್, ಬೂಕನಕೆರೆನಾಗರಾಜು, ಚೌಡೇನಹಳ್ಳಿ ನಾರಾಯಣ ಸ್ವಾಮಿ, ತಾಲೂಕು ರೈತಸಂಘದ ಅಧ್ಯಕ್ಷಕಾರಿಗನಹಳ್ಳಿ ಪುಟ್ಟೇಗೌಡ ಇದ್ದರು.