Advertisement
ಶುಕ್ರವಾರ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಅವರು, “ನಾನು ಯಾವುದೇ ದುರುದ್ದೇಶದಿಂದ ಟ್ವೀಟ್ ಮಾಡಿಲ್ಲ. ಆದರೆ, ಕೋರ್ಟ್ ಇದನ್ನು ಗಂಭೀರವಾಗಿ ಸ್ವೀಕರಿಸಿರುವುದೇ ನನಗೆ ಅಚ್ಚರಿ. ಕಾಮಿಡಿಯನ್ನರು ತಮ್ಮದೇ ಗ್ರಹಿಕೆಗಳಿಂದ ಹಾಸ್ಯ ಸೃಷ್ಟಿಸಿ ಜನರನ್ನು ನಗಿಸುತ್ತಾರಷ್ಟೇ. ಇವು ಯಾವತ್ತೂ ವಾಸ್ತವವಾಗಿರುವುದಿಲ್ಲ. ಅದನ್ನು ಸತ್ಯ ಎಂದೂ ಪ್ರತಿಪಾದಿಸಲಾಗದು. ದೇಶದಲ್ಲಿ ಇಂದು ಅಸಹಿಷ್ಣುತೆ ಸಂಸ್ಕೃತಿ ಹೆಚ್ಚುತ್ತಿದ್ದು, ಏನು ಹೇಳಿದರೂ ತಪ್ಪು ಕಾಣಿಸುವಂತಾಗಿದೆ’ ಎಂದು ವಿಷಾದಿಸಿದ್ದಾರೆ. “ಜಗತ್ತಿನ ಶಕ್ತಿಶಾಲಿ ಕೋರ್ಟ್‌ನ ಅಡಿಪಾಯ ನನ್ನ ಟೀಕೆಯಿಂದ ಅಲುಗಾಡಿದೆ ಎನ್ನುವುದು ನನಗೆ ನಂಬಲಾಗದ ಸಂಗತಿ’ ಎಂದಿದ್ದಾರೆ.ತನೇಜಾಗೆ ಬುದ್ಧಿವಾದ: ಕುನಾಲ್‌ನಂತೆ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುತ್ತಿರುವ ಕಾಮಿಕ್ ಆರ್ಟಿಸ್ಟ್ ರಚಿತಾ ತನೇಜಾ ಕೂಡ ಸುಪ್ರೀಂಗೆ ತಮ್ಮ ನಿಂದನಾತ್ಮಕ ಟ್ವೀಟ್ ಸಮರ್ಥಿಸಿ, ಸ್ಪಷ್ಟನೆ ರವಾನಿಸಿದ್ದರು. ಇದಕ್ಕೆ ಉತ್ತರಿಸಿದ ನ್ಯಾಯಪೀಠ “ನಿಮ್ಮ ಅಭಿಪ್ರಾಯ ಒಪ್ಪುತ್ತೇವೆ. ಆದರೆ, ಈ ದಿನಗಳಲ್ಲಿ ಟೀಕಾಸಂಸ್ಕೃತಿ ಬೆಳೆಯುತ್ತಿದೆ. ಎಲ್ಲರೂ ಇದನ್ನು ಮಾಡುತ್ತಿದ್ದಾರೆ’ ಎಂದು ವಿಷಾದಿಸಿದೆ.