ಅಡುಗೆ ಅನಿಲ ಸಂಪರ್ಕ ಹೊಂದಿದವರು ಡಿ. 31ರ ಒಳಗೆ ಇ-ಕೆವೈಸಿ ಮಾಡಿಸಬೇಕು. ಇಲ್ಲದಿದ್ದರೆ ಸಬ್ಸಿಡಿ ರದ್ದಾಗಲಿದೆ ಎಂಬ ವದಂತಿ ಕೆಲವು ದಿನಗಳಿಂದ ಹರಿದಾಡುತ್ತಿತ್ತು. ಇದರಿಂದ ಆತಂಕಗೊಂಡ ಜನ ರಾಜ್ಯದ ಹಲವು ಭಾಗಗಳಲ್ಲಿ ಗ್ಯಾಸ್ ಏಜೆನ್ಸಿಗಳಿಗೆ ಮುಗಿಬೀಳುತ್ತಿದ್ದಾರೆ. ಇದನ್ನು ಗಮನಿಸಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
“ತೈಲ ನಿಗಮಗಳಿಂದ ಆಧಾರ್ ಲಿಂಕ್ ಮೂಲಕ ಇ-ಕೆವೈಸಿ ಬಗ್ಗೆ ಜಾಗೃತಿ, ಕೆವೈಸಿ ಅಭಿಯಾನ ನಡೆದಿರುವುದು ನಿಜ.
Advertisement
ಇದಕ್ಕೆ ಯಾವುದೇ ಗಡುವು ವಿಧಿಸಿಲ್ಲ. ಇದಕ್ಕೂ ಸಬ್ಸಿಡಿಗೂ ಸಂಬಂಧ ಇಲ್ಲ’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.
ಇದಲ್ಲದೆ ತೈಲ ನಿಗಮಕ್ಕೆ ಇಲಾಖೆ ಯಿಂದ ಪತ್ರವನ್ನೂ ಬರೆಯಲಾಗಿದೆ. ಇ-ಕೆವೈಸಿ ಸೇರಿದಂತೆ ಯಾವುದೇ ಚಟುವಟಿಕೆಗಳನ್ನು ಕೈಗೊಳ್ಳುವ ಮುನ್ನ ಇಲಾಖೆ ಗಮನಕ್ಕೆ ತರಬೇಕು. ಇದರಿಂದ ಪೂರಕ ಮಾಹಿತಿ ಜತೆಗೆ ಅಗತ್ಯ ನೆರವು ನೀಡಬಹುದು. ಜತೆಗೆ ಪ್ರಸ್ತುತ ಉಂಟಾಗಿರುವ ಗೊಂದಲವನ್ನೂ ತಪ್ಪಿಸಬಹುದು. ಮುಂಬರುವ ದಿನಗಳಲ್ಲಿ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ. ಈ ಸಂಬಂಧ ಭಾರತೀಯ ತೈಲ ನಿಗಮದ ರಾಜ್ಯ ಸಮನ್ವಯ ಅಧಿಕಾರಿಯನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದರೂ ಸಂಪರ್ಕಕ್ಕೆ ಸಿಕ್ಕಿಲ್ಲ.
Related Articles
Advertisement
ಈಗಾಗಲೇ ಬಹುತೇಕ ಗ್ರಾಹಕರು ಇ-ಕೆವೈಸಿ ಮಾಡಿಕೊಂಡಿದ್ದಾರೆ. ಆ ಪೈಕಿ ಕೆಲವರ ಆಧಾರ್ ಸಂಖ್ಯೆ ಮತ್ತಿತರ ದಾಖಲಾತಿಗಳ ಅಪ್‌ಡೇಟ್ ಆಗುವುದು ಬಾಕಿ ಇರುತ್ತದೆ. ಅದು ಸೇರಿದಂತೆ ಉಜ್ವಲ ಯೋಜನೆ ಫಲಾನುಭವಿಗಳು, ಇನ್ನೂ ಕೆವೈಸಿ ಮಾಡಿಕೊಳ್ಳದವರನ್ನು ವ್ಯವಸ್ಥೆಯ ವ್ಯಾಪ್ತಿಗೆ ತರಲು ತೈಲ ನಿಗಮಗಳಿಂದ ಆಯಾ ಏಜೆನ್ಸಿಗಳ ಮೂಲಕ ಅಭಿಯಾನದ ರೀತಿಯಲ್ಲಿ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಆದರೆ ಇದಕ್ಕೆ ಯಾವುದೇ ಗಡುವು ವಿಧಿಸಿಲ್ಲ. ಈ ಸಂಬಂಧ ಸ್ವತಃ ಇಲಾಖೆ ಭಾರತೀಯ ತೈಲ ನಿಗಮದ ಕರ್ನಾಟಕ ವಲಯದ ಮುಖ್ಯಸ್ಥರೊಂದಿಗೂ ಚರ್ಚಿಸಲಾಗಿದ್ದು, ಕೆವೈಸಿಗೆ ಯಾವುದೇ ಗಡುವು ನಿಗದಿಪಡಿಸಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ನಿಗಮಗಳಿಗೆ ಇಲಾಖೆ ಪತ್ರಇದಲ್ಲದೆ ತೈಲ ನಿಗಮಕ್ಕೆ ಇಲಾಖೆ ಯಿಂದ ಪತ್ರವನ್ನೂ ಬರೆಯಲಾಗಿದೆ. ಇ-ಕೆವೈಸಿ ಸೇರಿದಂತೆ ಯಾವುದೇ ಚಟುವಟಿಕೆಗಳನ್ನು ಕೈಗೊಳ್ಳುವ ಮುನ್ನ ಇಲಾಖೆ ಗಮನಕ್ಕೆ ತರಬೇಕು. ಇದರಿಂದ ಪೂರಕ ಮಾಹಿತಿ ಜತೆಗೆ ಅಗತ್ಯ ನೆರವು ನೀಡಬಹುದು. ಜತೆಗೆ ಪ್ರಸ್ತುತ ಉಂಟಾಗಿರುವ ಗೊಂದಲವನ್ನೂ ತಪ್ಪಿಸಬಹುದು. ಮುಂಬರುವ ದಿನಗಳಲ್ಲಿ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ. ಈ ಸಂಬಂಧ ಭಾರತೀಯ ತೈಲ ನಿಗಮದ ರಾಜ್ಯ ಸಮನ್ವಯ ಅಧಿಕಾರಿಯನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದರೂ ಸಂಪರ್ಕಕ್ಕೆ ಸಿಕ್ಕಿಲ್ಲ.