Advertisement
ಮಳೆಯಿಂದ ಅನಾಹುತಕ್ಕೆ ಒಳಗಾಗುವ ಪ್ರದೇಶಗಳನ್ನು ಗುರುತಿಸಿ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಕೆಯ ಅಧಿಕಾರಿಗಳು ಕೈಗೆತ್ತಿಕೊಳ್ಳಬೇಕು. ಆದರೆ, ಅಧಿಕಾರಿಗಳು ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗದ ಹಿನ್ನೆಲೆಯಲ್ಲಿ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತಗೊಂಡು ಜನರು ಸಮಸ್ಯೆ ಅನುಭವಿಸುವಂತಾಗಿದೆ. ಇದರೊಂದಿಗೆ ರಸ್ತೆಗಳು ಗುಂಡಿಮಯವಾಗುತ್ತಿರುವುದರಿಂದ ವಾಹನ ಸವಾರರು ಕಷ್ಟಪಡಬೇಕಾಗಿದೆ.
Related Articles
ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 842 ಕಿ.ಮೀ ಉದ್ದದ ರಾಜಕಾಲುವೆ ಜಾಲವಿದೆ. ಆದರೆ, ರಾಜಕಾಲುವೆಗಳ ನಿರ್ವಹಣೆಗೆ ಪಾಲಿಕೆಯಿಂದ ಆದ್ಯತೆ ನೀಡದ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ನೀರು ಉಕ್ಕಿ ಹರಿದು ವಸತಿ ಪ್ರದೇಶಗಳಿಗೆ ನುಗ್ಗುತ್ತಿದೆ. ಅನಾಹುತ ಸಂಭವಿಸುವ ಮಾಹಿತಿ ಪಡೆದರೂ ಪಾಲಿಕೆಯ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ. ಹಲವಾರು ಭಾಗಗಳಲ್ಲಿ ತಡೆಗೋಡೆಗಳು ಕುಸಿದಿರುವುದರಿಂದ ನೀರು ರಸ್ತೆ ಬರುತ್ತಿದ್ದು, ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ.
Advertisement
ಮಾಹಿತಿ ನೀಡಿದರೂ ಪ್ರಯೋಜನವಿಲ್ಲಬಿಬಿಎಂಪಿ ವ್ಯಾಪ್ತಿಯ ಯಾವ ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತದೆ ಎಂಬ ಮಾಹಿತಿಯನ್ನು ಪಾಲಿಕೆಯ ಎಲ್ಲ ಹಿರಿಯ ಅಧಿಕಾರಿಗಳಿಗೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವರಿ ಕೇಂದ್ರದ ವತಿಯಿಂದ ಮಾಹಿತಿ ರವಾನೆ ಮಾಡಲಾಗುತ್ತದೆ. ಇತ್ತೀಚೆಗೆ ನಗರದಲ್ಲಿ ಕೆಲವೊಂದು ಭಾಗಗಳಲ್ಲಿ ಭಾರಿ ಮಳೆಯಾಗುವ ಮಾಹಿತಿ ನೀಡಿದರೂ ಪಾಲಿಕೆಯ ಅಧಿಕಾರಿಗಲು ಗಂಭೀರವಾಗಿ ಪರಿಗಣಿಸಿದ ಹಿನ್ನೆಲೆಯಲ್ಲಿ ಹಲವಾರು ಪ್ರದೇಶಗಳು ಜಲಾವೃತಗೊಂಡಿದ್ದವು. ಗುಂಡಿ ಮುಚ್ಚಲು ಮುಂದಾದ ಪಾಲಿಕೆ
ಮಳೆಗಾಲ ಆರಂಭದೊಳಗೆ ನಗರದಲ್ಲಿನ ರಸ್ತೆಗುಂಡಿಗಳನ್ನು ಮುಚ್ಚಲು ಹಾಗೂ ಸ್ವತ್ಛತೆ ಕಾಪಾಡಲು ಪಾಲಿಕೆಯಿಂದ ಪ್ರತಿಯೊಂದು ವಾರ್ಡ್ಗೆ ಅನುದಾನ ನೀಡಲಾಗಿದೆ. ಆದರೆ, ರಸ್ತೆಗಳ ಗುಂಡಿಗಳಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಕೇಳಿಬಂದಿವೆ. ಆ ಹಿನ್ನೆಲೆಯಲ್ಲಿ ಖುದ್ದು ಬಿಬಿಎಂಪಿ ಅಯುಕ್ತರೇ ಎಲ್ಲ ವಲಯಗಳಲ್ಲಿ ರಸ್ತೆಗಳ ಪರಿಶೀಲನೆ ಮುಂದಾಗಿದ್ದು, ನಗರದ ರಸ್ತೆಗಳನ್ನು ಗುಂಡಿಮುಕ್ತಗೊಳಿಸುವ ಭರವಸೆ ನೀಡಿದ್ದಾರೆ. ಒತ್ತುವರಿ ತೆರವಿಗೆ ನಿರಾಸಕ್ತಿ
ಪಾಲಿಕೆಯ ವ್ಯಾಪ್ತಿಯಲ್ಲಿ ರಾಜಕಾಲುವೆ ಒತ್ತುವರಿಯಾಗಿರುವ ಭಾಗಗಳನ್ನು ಗುರುತಿಸಿ ನಾಲ್ಕು ವರ್ಷ ಕಳೆದಿದೆ. ನಗರದಲ್ಲಿ ಪಾಲಿಕೆ ಅಧಿಕಾರಿಗಳ ಮಾಹಿತಿಯಂತೆ 1953 ಪ್ರಕರಣಗಳಲ್ಲಿ ರಾಜಕಾಲುವೆ ಒತ್ತುವರಿಯಾಗಿದ್ದು, ಕಳೆದ ವರ್ಷದ ಕಾರ್ಯಾಚರಣೆಗೆ ಮೊದಲೇ 820 ಕಡೆ ಒತ್ತುವರಿ ತೆರವುಗೊಳಿಸಲಾಗಿತ್ತು. ಉಳಿದ 1,133 ಕಡೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕಳೆದ ವರ್ಷ ಆರಂಭಿಸಿದ ಅಧಿಕಾರಿಗಳು ಈವರೆಗೆ ಕೇವಲ 405 ಕಡೆಗಳಲ್ಲಿ ಮಾತ್ರ ಒತ್ತುವರಿ ತೆರವುಗೊಳಿಸಿದ್ದು, ಇನ್ನೂ 728 ಕಡೆಗಳಲ್ಲಿ ತೆರವುಗೊಳಿಸುವುದು ಬಾಕಿ ಉಳಿದಿವೆ. ಒತ್ತುವರಿ ತೆರವು ಕಾರ್ಯಾಚರಣೆ ಅಧಿಕಾರಿಗಳು ನಿರಾಸಕ್ತಿ ವಹಿಸಿರುವುದು ಸಮಸ್ಯೆಗೆ ಕಾರಣವಾಗಿದೆ. ಮಳೆಯಿಂದ ಆಗುವ ಅನಾಹುತಗಳ ತಡೆಗೆ ಪಾಲಿಕೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಆದರೆ, ನಗರದಲ್ಲಿ ದಾಖಲೆ ಪ್ರಮಾಣ ಮಳೆಯಾದ ಪರಿಣಾಮ ತೊಂದರೆಯಾಗಿದೆ. ಮುಂದೆ ಯಾವುದೇ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗಿದ್ದು, ರಾಜಕಾಲುವೆಗೆ ತಡೆಗೋಡೆ ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ. ನಗರದ ರಸ್ತೆಗಳನ್ನು ಗುಂಡಿಮುಕ್ತಗೊಳಿಸುವ ಉದ್ದೇಶದಿಂದ ಪರಿಶೀಲನೆ ನಡೆಸಲಾಗುತ್ತಿದೆ.
-ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ ಹೆಚ್ಚಿನ ಮಳೆಯಿಂದಾಗಿ ಕೆಲವೊಂದು ಪ್ರದೇಶಗಳು ಜಲಾವೃತಗೊಂಡಾಗ ಮ್ಯಾನ್ಹೋಲ್ಗಳು ತುಂಬಿವುದು ಸಾಮಾನ್ಯ. ಉಳಿದಂತೆ ಜಲಮಂಡಳಿಯಿಂದ ಯಾವುದೇ ರೀತಿಯ ಸಮಸ್ಯೆಯಿಲ್ಲ. ಯಾವುದೇ ಭಾಗದಲ್ಲಿ ಅಂತಹ ಸಮಸ್ಯೆಗಳಿದ್ದರೆ ಕೂಡಲೇ ಅವುಗಳನ್ನು ಬಗೆಹರಿಸುವಂತಹ ಕೆಲಸ ಮಾಡಲಾಗುವುದು.
-ಕೆಂಪರಾಮಯ್ಯ, ಪ್ರಧಾನ ಎಂಜಿನಿಯರ್ ಜಲಮಂಡಳಿ