Advertisement
ಅಚ್ಚರಿಯ ಅಂಶವೆಂದರೆ ಈ ಮಧ್ಯೆಯೂ ಕೆಲವು ದೇಶಗಳ ಬಾಗಿಲ ಬಳಿಯೂ ಕೊರೊನಾ ಹೋಗಿಲ್ಲ. ಆ ದೇಶಗಳು ಹಾಗೆಯೇ ಆರೋಗ್ಯಕರವಾಗಿರಲಿ ಎಂದು ಆಶಿಸೋಣ. ಆದರೆ ಇಂಥ ರಾಷ್ಟ್ರಗಳಲ್ಲಿ ಕೆಲವು ಪ್ರಕರಣಗಳು ಕಂಡು ಬಂದರೂ ಅವೆಲ್ಲವೂ ನೆಗೆಟಿವ್. ಇನ್ನು ಕೆಲವೆಡೆ ಸೋಂಕೇ ಇಲ್ಲ. ಅವುಗಳನ್ನು ಅಭಿನಂದಿಸೋಣ. ಅಂಥ ದೇಶಗಳಾವುವು ಎಂಬ ಕುತೂಹಲದ ಮಾಹಿತಿ ಇಲ್ಲಿದೆ.
Related Articles
Advertisement
ಲಾವೊ ಪೀಪಲ್ಸ್ ಡೆಮಾಕ್ರಟಿಕ್ ರಿಪಬ್ಲಿಕ್ : ಈ ದೇಶದಲ್ಲಿ 50 ಜನರು ಕೋವಿಡ್ 19 ಸೋಂಕಿಗೆ ಒಳಗಾಗಿದ್ದಾರೆ ಎಂದು ವರದಿಯಾಗಿತ್ತು. ಆದರೆ ತದನಂತರದ ದಿನಗಳಲ್ಲಿ ಎಲ್ಲರ ಕುರಿತೂ ವರದಿ ಬಂದಿತು. ಆ ಪೈಕಿ ಇವರದ್ದು ನೆಗೆಟಿವ್ ಎಂದು ವರದಿಯಾಯಿತು. ಇಲ್ಲಿನ ಸರಕಾರ ಶಂಕಿತ ಪ್ರಕರಣಗಳು ಎಂದು ಗುರುತಿಸಲ್ಪಟ್ಟ ಅಷ್ಟು ಜನರ ಪರೀಕ್ಷಾ ಮಾದರಿಗಳನ್ನು ರಾಷ್ಟ್ರೀಯ ಪ್ರಯೋಗಾಲಯ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರ ಕೇಂದ್ರ, ಪಾಶ್ಚರ್ ಸಂಸ್ಥೆ (ಇನ್‌ಸ್ಟಿಟ್ಯೂಟ್ ಪಾಶ್ಚರ್ ಡು ಲಾವೋಸ್) ಮತ್ತು ಮಹೋಸೊಟ್ ಆಸ್ಪತ್ರೆಯ ಮೈಕ್ರೋಬಯಾಲಜಿ ಪ್ರಯೋಗಾಲಯದಲ್ಲಿ ಮೂರು ಬಾರಿ ಪರೀಕ್ಷಿಸಿದ್ದು, ಹೆಚ್ಚುವರಿಯಾಗಿ ಆಸ್ಟ್ರೇಲಿಯಾದ ಪ್ರಯೋಗಾಲಯಕ್ಕೂ ಕಳುಹಿಸಲಾಗಿದೆ. (ವೋಸ್ ಲ್ಯಾಬ್ ಗಳಲ್ಲಿ ಪರೀಕ್ಷಿಸಲ್ಪಟ್ಟ ಶಂಕಿತ ಪ್ರಕರಣಗಳ ಮಾದರಿಗಳನ್ನು ಹೆಚ್ಚಾಗಿ ಆಸ್ಟ್ರೇಲಿಯಾದ ಪ್ರಯೋಗಾಲಯಗಳಿಗೆ ಕಳುಹಿಸಲಾಗುತ್ತದೆ)
ರಿಪಬ್ಲಿಕ್ ಆಫ್ ಮಾರ್ಷಲ್ ಐಲ್ಯಾಂಡ್ಸ್ : ಮಾರ್ಚ್ 9 ರಂದು 66 ವರ್ಷದ ವ್ಯಕ್ತಿಯಲ್ಲಿ ಕೋವಿಡ್ 19 ಲಕ್ಷಣ ಕಂಡು ಬಂದ ಕಾರಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ವರದಿಯಲ್ಲಿ ಸೋಂಕು ಇಲ್ಲದಿರುವುದು ಖಚಿತವಾಗಿದ್ದು, ವ್ಯಕ್ತಿಯಿಂದ ತೆಗೆದ ಪರೀಕ್ಷಾ ಮಾದರಿಯನ್ನು ಹವಾಯಿ ಸ್ಟೇಟ್ ಲ್ಯಾಬ್‌ನಲ್ಲಿ ಪರೀಕ್ಷಿಸಲಾಗಿದೆ. ಇನ್ನೂ ಅಲ್ಲಿನ ಸರಕಾರ ಚೀನ, ಹಾಂಗ್ ಕಾಂಗ್, ಮಕಾವು, ಜಪಾನ್, ದ.ಕೊರಿಯಾ, ಇಟಲಿ, ಜರ್ಮನಿ ಮತ್ತು ಇರಾನ್ ಸೇರಿದಂತೆ ಹಲವಾರು ದೇಶಗಳ ಪ್ರಯಾಣ ಮೇಲೆ ನಿರ್ಬಂಧ ಹೇರಿದೆ. ಇಲ್ಲಿ ಒಟ್ಟು ಐದು ಶಂಕಿತ ಕೊರೊನವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ. ಫೆಬ್ರವರಿ 05 ರಂದು ಬೋಸ್ವಾನ ಸರಕಾರ ವರದಿ ಮಾಡಿದಂತೆ ಎಲ್ಲಾ ಪ್ರಕರಣಗಳು ನೆಗೆಟಿವ್ ಆಗಿವೆ.
ಶಂಕಿತ ಪ್ರಕರಣವೂ ಇಲ್ಲದ ರಾಷ್ಟ್ರ ಗಳು : ಬುರುಂಡಿ, ಕೊಮೊರೊಸ್, ಫೆಡರೇಟೆಡ್ ಸ್ಟೇಟ್ಸ್ ಆಫ್ ಮೈಕ್ರೋನೇಶಿಯಾ, ಕಿರಿಬಾಟಿ, ಮಲಾವಿ, ನೌರು, ಯೆಮೆನ್ ಗಣರಾಜ್ಯ, ಪಶ್ಚಿಮ ಸಹಾರಾ, ಸಮೋವಾ, ಸಿಯೆರಾ ಲಿಯೋನ್, ಸಾವೊ ಟೋಮೆ ಮತ್ತು ಪ್ರಿನ್ಸಿಪೆ, ತಜಿಕಿಸ್ಥಾನ್, ತುರ್ಕಮೆನಿಸ್ಥಾನ್, ತುವಾಲು, ವನವಾಟು.