Advertisement

ಸಂವಿಧಾನಕ್ಕೆ ಕೈ ಹಾಕುವ ಕೆಲಸ ಬೇಡ: ಸಿ.ಎಂ. ಇಬ್ರಾಹಿಂ

01:43 AM Jan 18, 2020 | mahesh |

ಮಂಗಳೂರು: ಮೋದಿ ಮತ್ತು ಅಮಿತ್‌ ಶಾ ಇನ್ನೂ 20 ವರ್ಷ ಅಧಿಕಾರದಲ್ಲಿರಿ. ಆದರೆ ಸಂವಿಧಾನಕ್ಕೆ ಕೈ ಹಾಕುವ ಕೆಲಸಕ್ಕೆ ಹೋಗಬಾರದು ಎಂದು ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.

Advertisement

ದ.ಕ. ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಬಿಜೆಪಿ-ಸಂಘ ಪರಿವಾರದವರೇ ರಾಜ್ಯಭಾರ ಮಾಡಲಿ. ಆದರೆ ಎನ್‌ಆರ್‌ಸಿ, ಸಿಎಎಯಂಥವನ್ನು ತಂದು ಸಾಮಾನ್ಯ ಜನರ ನಡುವೆ ವಿಷ ಬೆರೆಸಬೇಡಿ. ಎಲ್ಲ ವರ್ಗಗಳ ಜನರನ್ನು ಅಣ್ಣ ತಮ್ಮಂದಿರಂತೆ ಬಾಳಲು ಅವಕಾಶ ಮಾಡಿ ಕೊಡಿ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಭಾವುಕರಾಗಿ ಕಣ್ಣೀರು ಹಾಕಿದರು.

ಈಗ ಜಾತಿ ಆಧಾರದ ಮೇಲೆ ಸಿಎಎ ಮಾಡಿದ್ದೀರಿ. ಪೌರತ್ವ ಸಾಬೀತುಪಡಿಸುವ ದಾಖಲೆಗಳಿಲ್ಲದ 60 ಕೋಟಿ ಜನರನ್ನು ಬಂಧನ ಶಿಬಿರಗಳಲ್ಲಿ ಇಡಲು ನಿಮಗೆ ಸಾಧ್ಯವೇ? ಇಷ್ಟು ಜನರನ್ನು ಮತದಾರರ ಪಟ್ಟಿಯಿಂದ ಹೊರಗಿಟ್ಟರೆ ಚುನಾವಣೆ ಗೆಲ್ಲಬಹುದು ಎನ್ನುವ ಹುನ್ನಾರ ಇದರಲ್ಲಿ ಅಡಗಿದೆಯೇ ಎಂದು ಪ್ರಶ್ನಿಸಿದರು.

ಮಾಲಕರೇ ಸಾಯುತ್ತಿದ್ದಾರೆ
ನಾಲ್ಕೈದು ವರ್ಷಗಳಿಗೊಮ್ಮೆ ಅಧಿಕಾರಕ್ಕೆ ಬರುವ ರಾಜಕೀಯ ಪಕ್ಷದವರೆಲ್ಲ ಬಾಡಿಗೆದಾರರೇ ಹೊರತು ದೇಶದ ಮಾಲಕರಲ್ಲ. ಜನರೇ ಮಾಲಕರು. ಆದರೆ ದೇಶದಲ್ಲೀಗ ಮಾಲಕರೇ ಸಾಯುವಂತಾಗಿದೆ. ಇಂತಹ ಪರಿಸ್ಥಿತಿಗೆ ದೇಶ ವನ್ನು ಕೊಂಡೊಯ್ಯುವುದು ಸರಿಯಲ್ಲ ಎಂದು ಕಳಕಳಿ ವ್ಯಕ್ತಪಡಿಸಿದರು.

ಪತಿ-ಪತ್ನಿ ದಾಖಲೆ ತರುವುದು ಹೇಗೆ? ತಾಳಿ
ಕಟ್ಟಿ ವಿವಾಹ ಆದವರು ದಾಖಲೆಗಳನ್ನು ಮಾಡಿ ರುತ್ತಾರೆಯೇ? ಸ್ವತಃ ಶಾ, ಮೋದಿ ಅವರಿಗೆ ತಮ್ಮ ಮದುವೆ ಸರ್ಟಿಫಿಕೇಟ್‌ ಸಿಗಬಹುದಾ ಎಂದು ಪ್ರಶ್ನಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕ ಯು.ಟಿ. ಖಾದರ್‌, ವಿ.ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ, ಕಾರ್ಪೊರೇಟರ್‌ ನವೀನ್‌ ಡಿ’ಸೋಜಾ, ಪಕ್ಷದ ನಾಯಕರಾದ ಸದಾಶಿವ ಉಳ್ಳಾಲ್‌, ಟಿ.ಕೆ. ಸುಧೀರ್‌, ನಝೀರ್‌ ಬಜಾಲ್‌, ಆಲ್ವಿನ್‌ ಡಿ’ಸೋಜಾ ಉಪಸ್ಥಿತರಿದ್ದರು.

Advertisement

ಡಿಎನ್‌ಎ ಪರೀಕ್ಷೆ ನಡೆಸಿ
ದೇಶದ ಇತಿಹಾಸದಲ್ಲಿ ಅದೆಷ್ಟೋ ಮಂದಿ ಹಿಂದೂಗಳು ಮುಸಲ್ಮಾನರಾಗಿದ್ದಾರೆ. ಮುಸಲ್ಮಾನರು ಹಿಂದೂಗಳಾಗಿದ್ದಾರೆ. ಕ್ರೈಸ್ತರು ಮುಸಲ್ಮಾನರೂ ಹಿಂದೂಗಳೂ ಆಗಿದ್ದಾರೆ. ಹೀಗಿರುವಾಗ ನಾವು ಭಾರತೀಯರು ಎನ್ನುವುದಕ್ಕೆ ನನ್ನನ್ನೂ ಸೇರಿದಂತೆ ಮೋದಿ, ಶಾ ಅವರದ್ದೂ ಡಿಎನ್‌ಎ ಪರೀಕ್ಷೆ ಮಾಡಿಸಿ. ನಾನು ಭಾರತೀಯನಲ್ಲದಿದ್ದರೆ ಹೊರಹೋಗಲು ತಯಾರಾಗಿದ್ದೇನೆ ಎಂದು ಸಿ.ಎಂ. ಇಬ್ರಾಹಿಂ ಸವಾಲು ಹಾಕಿದರು.

ಇಂಡಿಯಾ ಗೇಟ್‌ ನೋಡಿ
ಚೀನ ಯುದ್ಧದಲ್ಲಿ ಶೇ.20ರಿಂದ 30ರಷ್ಟು ಮುಸ್ಲಿಮರು ಹೋರಾಡಿರುವುದು ವಾರ್‌ ಬುಕ್‌ನಲ್ಲಿ ದಾಖಲಾಗಿದೆ. ಪಾಕಿಸ್ಥಾನಕ್ಕೆ ಹೋಗದೆ ದೇಶದ ಮುಸ್ಲಿಮರು ದೇಶ ಪ್ರೇಮ ಮೆರೆದಿ¨ªಾರೆ. ಇಂಡಿಯಾ ಗೇಟ್‌ನಲ್ಲಿ ಎಷ್ಟು ಮುಸ್ಲಿಮರ ಹೆಸರುಗಳಿವೆ ಗೊತ್ತಿದೆಯೇ? ಇವೆಲ್ಲವನ್ನು ಬಿಜೆಪಿಯವರು ನೋಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next