Advertisement
ಆದರೆ ಹೊಸ ಮಸೂದೆ ಮೋಟಾರು ವಾಹನ ವಲಯದಲ್ಲಿ ಭಾರೀ ಸುಧಾರಣೆಯ ಕ್ರಮಗಳನ್ನು ಒಳಗೊಂಡಿದೆ ಎಂದು ಈ ಕುರಿತಾಗಿ ನಡೆದ ಸರ್ವಪಕ್ಷ ಸಭೆಯ ಬಳಿಕ ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಹೇಳಿದರು. ನೂತನ ಮಸೂದೆಯಲ್ಲಿರುವ ಅಂಶಗಳು ಅತಿ ಕಠಿನವಾಗಿದ್ದು, ಮರುಪರಿಶೀಲನೆ ನಡೆಸಬೇಕು. ಈ ಸಂಬಂಧ ರಾಜ್ಯಸಭೆಯ ಆಯ್ಕೆ ಸಮಿತಿಗೆ ನೀಡಬೇಕು ಎಂಬುದು ವಿಪಕ್ಷಗಳ ಬೇಡಿಕೆಯಾಗಿದೆ. ‘ವಾರ್ಷಿಕ ದೇಶಾದ್ಯಂತ ರಸ್ತೆಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಜೀವಹಾನಿಯಾಗುತ್ತದೆ. ಇದನ್ನು ತಡೆಯುವುದು ಅಗತ್ಯವಿದ್ದು, ಕಾನೂನು ಜಾರಿಯಲ್ಲಿನ ವಿಳಂಬ ಮತ್ತಷ್ಟು ಜೀವ ಹಾನಿಗೆ ಕಾರಣವಾಗುತ್ತದೆ’ ಎಂದು ಗಡ್ಕರಿ ಹೇಳಿದರು. ಹೊಸ ಕಾಯ್ದೆ 1988ರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿಯಾಗಿದೆ. ಕಳೆದ ವರ್ಷ ಈ ಮಸೂದೆ ಲೋಕಸಭೆಯಲ್ಲಿ ಪಾಸಾಗಿದ್ದರೂ ಈಗ ರಾಜ್ಯಸಭೆಯಲ್ಲಿ ಪಾಸಾಗದೆ ಉಳಿದಿದೆ. Advertisement
ಮೋಟಾರು ವಾಹನ ಮಸೂದೆಗೆ ಸರ್ವಪಕ್ಷ ಆಕ್ಷೇಪ
08:30 AM Jul 28, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.