ಬೆಂಗಳೂರು: ಯಡಿಯೂರಪ್ಪ ಚುನಾವಣೆ ನಿಲ್ಲುವುದಿಲ್ಲ ಎಂದಿದ್ದಾರೆ. ಆದರೆ ಸಕ್ರಿಯ ರಾಜಕೀಯದಿಂದ ದೂರ ಹೋಗುತ್ತೇನೆಂದು ಎಂದು ಹೇಳಿಲ್ಲ. ಅವರು ಮಾಸ್ ಲೀಡರ್, ಸಿಎಂ ಆಗಿ ಕೆಲಸ ಮಾಡಿದ್ದಾರೆ. ಉತ್ತಮ ಕಾರ್ಯ ಮಾಡಿದ್ದಾರೆ. ಪಾರ್ಟಿ ಕಟ್ಟಿದವರಲ್ಲಿ ಅವರು ಕೂಡ ಒಬ್ಬರು. ಅವರ ಹೇಳಿಕೆ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಪ್ರಧಾನಿಗೂ ಪಾರ್ಲಿಮೆಂಟರಿ ಬೋರ್ಡ್ ನಲ್ಲೇ ಟಿಕೆಟ್ ಅಂತಿಮಗೊಳಿಸುವುದು. ಅದೇ ಸರ್ವೋಚ್ಚ. ಯಾರಿಗೆ ಎಲ್ಲಿ ಟಿಕೆಟ್ ಕೊಡಬೇಕು ಎಂಬ ಅಂತಿಮ ತೀರ್ಮಾನ ಪಾರ್ಲಿಮೆಂಟರಿ ಬೋರ್ಡ್ ಮಾಡುತ್ತದೆ. ನಮ್ಮ ಪಕ್ಷದ ವ್ಯವಸ್ಥೆ ಹೇಗಿದೆ ಎಂದು ಹಿರಿಯ ನಾಯಕ ಆಗಿರುವ ಯಡಿಯೂರಪ್ಪರಿಗೆ ಗೊತ್ತಿದೆ. ಅವರು ಕೇವಲ ಸಲಹೆ ನೀಡಿದ್ದಾರೆ. ಅವರ ಸಲಹೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಇಲ್ಲಿ ಯಾವುದೇ ಗೊಂದಲವಿಲ್ಲ ಎಂದರು.
ಕಾಂಗ್ರೆಸ್ ನಲ್ಲಿ ಸಿಎಂ ರೇಸ್ ಕುರಿತಾಗಿ ಪ್ರತಿಕ್ರಿಯೆ ನೀಡಿದ ಸಿಟಿ ರವಿ , ‘ಸಿಎಂ ಪೋಸ್ಟ್ ಯಾರ ಫಾದರ್ ಪ್ರಾಪರ್ಟಿ ಅಲ್ಲ. ಇಲ್ಲಿದ ಕುರ್ಚಿಗೆ ಕಾಂಗ್ರೆಸ್ ನಾಯಕರು ಹೋರಾಟ ಮಾಡುತ್ತಿದ್ದಾರೆ. ಆದರೆ ಅದು ಅವರಿಗೆ ಸಿಗುವುದಿಲ್ಲ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರತ್ತದೆ. ಕಾಂಗ್ರೆಸ್ ಗೆ ಅಧಿಕಾರ ನೀಡಿದಾಗ ಏನಾಗಿದೆ ಎನ್ನುವುದು ಗೊತ್ತಿದೆ. ಒಬ್ಬರು ಜೈಲಿಗೆ ಹೋಗಿ ಬಂದವರು (ಡಿಕೆಶಿ) ಇನ್ನು ಕೆಲವರು ಜೈಲಿಗೆ ಹೋಗುವ ದಾರಿಯಲ್ಲಿ ಇರುವವರು ಎಂದರು.
ಇದನ್ನೂ ಓದಿ:ದೆಹಲಿಯಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆ: ನಾಲ್ಕಕ್ಕೇರಿದ ಪ್ರಕರಣಗಳ ಸಂಖ್ಯೆ
ಒಕ್ಕಲಿಗ ಈ ಬಾರಿ ಸಿಎಂ ಆಗುತ್ತಾರೆ ಎಂದ ಡಿಕೆಶಿಗೆ ಟಾಂಗ್ ನೀಡಿದ ಸಿ.ಟಿ.ರವಿ, ಒಕ್ಕಲಿಗ ಸಣ್ಣ ಮನಸ್ಥಿತಿಯಿಂದ ಯೋಚನೆ ಮಾಡುವುದಿಲ್ಲ. ಒಕ್ಕಲಿಗರು ಭ್ರಷ್ಟಾಚಾರ ಬಯಸುವುದಿಲ್ಲ. ಒಕ್ಕಲಿಗರು ಸಣ್ಣ ಯೋಚನೆ ಮಾಡುವವರಲ್ಲ. ಯಾರ ಯೋಗ್ಯತೆ ಏನು ಎಂದು ಗೊತ್ತಿದೆ. ಒಕ್ಕಲಿಗರು ಇಷ್ಟ ಪಡುವುದು ಸರ್ವಹಿತ ಬಯಸುವ ರಾಜಕೀಯವನ್ನು. ಒಕ್ಕಲಿಗರು ಎಲ್ಲಾರಿಗೂ ದಾನ ಮಾಡುತ್ತಾರೆ ಒಕ್ಕಲು ತನ ಮಾಡ್ತಾರೆ. ನನಗೆ ನನ್ನ ಸಮುದಾಯದ ಮೇಲೆ ಗೌರವ ಇದೆ. ಅಷ್ಟೇ ಅಲ್ಲಾ, ಎಲ್ಲಾ ಸಮುದಾಯವನ್ನು ಇಷ್ಟ ಪಡ್ತೇನೆ ಎಂದರು.