Advertisement

ವಿಶ್ವಾಸ ಗೆಲ್ಲಲು ಬಿಜೆಪಿ ತಂತ್ರ: ಶಾಸಕರಿಗೆ ವಿಪ್‌ ಜಾರಿ

02:50 AM Sep 26, 2020 | Hari Prasad |

ಬೆಂಗಳೂರು: ವಿಪಕ್ಷ ಕಾಂಗ್ರೆಸ್‌ ರಾಜ್ಯ ಸರಕಾರದ ವಿರುದ್ಧ ಮಂಡಿಸಿರುವ ಅವಿಶ್ವಾಸ ನಿರ್ಣಯದ ವಿರುದ್ಧ ಗೆಲ್ಲಲು ಬಿಜೆಪಿ ಸಮರ್ಥ ರಣತಂತ್ರ ರೂಪಿಸುತ್ತಿದೆ.

Advertisement

ದಿಲ್ಲಿ ವರಿಷ್ಠರೂ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಅವರನ್ನು ಬೆಂಗಳೂರಿಗೆ ಕಳುಹಿಸಿದ್ದಾರೆ.

ವಿಧಾನಸಭೆಯಲ್ಲಿ ಚರ್ಚೆ ನಡೆದು, ನಿರ್ಣಯವನ್ನು ಮತಕ್ಕೆ ಹಾಕಿದರೂ ಸರಕಾರವನ್ನು ರಕ್ಷಿಸಲು ಬೇಕಾದ ಎಲ್ಲ ತಯಾರಿ ಮಾಡಿಕೊಂಡಿರುವ ಬಿಜೆಪಿಯು ಅಗತ್ಯ ಬಿದ್ದರೆ ಸೋಂಕಿಗೆ ತುತ್ತಾಗಿರುವ ಶಾಸಕರನ್ನು ಸದನಕ್ಕೆ ಕರೆತರಲು ಸಿದ್ಧತೆ ನಡೆಸಿದೆ.

ಕೋವಿಡ್ 19 ಪೀಡಿತ ಶಾಸಕರು ಪಿಪಿಇ ಕಿಟ್‌ ಧರಿಸಿ ಸದನದಲ್ಲಿ ಪಾಲ್ಗೊಳ್ಳಲು ಸ್ಪೀಕರ್‌ ಅನುಮತಿ ಕೋರಲು ತೀರ್ಮಾನಿಸಲಾಗಿದೆ. ಎಲ್ಲ ಶಾಸಕರಿಗೆ ವಿಪ್‌ ಜಾರಿ ಮಾಡಲಾಗಿದೆ. ಈ ಮಧ್ಯೆ ಸಿಎಂ ಬಿಎಸ್‌ವೈ ಅವರನ್ನು ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ.

ಶಾಸಕಾಂಗ ಪಕ್ಷ ಸಭೆಯಲ್ಲಿ ಚರ್ಚೆ
ಶುಕ್ರವಾರ ರಾತ್ರಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆಯ ಉದ್ದೇಶ, ತಂತ್ರಗಳ ಬಗ್ಗೆ ಚರ್ಚಿಸಿ ಪ್ರತಿ ಕಾರ್ಯತಂತ್ರಗಳನ್ನು ರೂಪಿಸಲಾಯಿತು.

Advertisement

ಈ ಮಧ್ಯೆ ಹಲವು ಪ್ರಮುಖ ಮಸೂದೆಗಳು ಚರ್ಚೆ ಮತ್ತು ಅಂಗೀಕಾರಕ್ಕೆ ಬಾಕಿ ಇದ್ದು, ಶನಿವಾರವೇ ಅಧಿವೇಶನವನ್ನೂ ಮುಕ್ತಾಯಗೊಳಿಸಬೇಕಿರುವುದರಿಂದ ಸ್ಪೀಕರ್‌ ನಡೆಯ ಬಗ್ಗೆಯೂ ಕುತೂಹಲ ಮೂಡಿದೆ.


ಪ್ರಹ್ಲಾದ್‌ ಜೋಷಿ ಆಗಮನ
ಅಮಿತ್‌ ಶಾ, ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಸೂಚನೆ ಮೇರೆಗೆ ಸಚಿವ ಪ್ರಹ್ಲಾದ್‌ ಜೋಷಿ ಶುಕ್ರವಾರ ಬೆಂಗಳೂರಿನ ಆಗಮಿಸಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕೂಡ ಹಿರಿಯ ನಾಯಕರೊಂದಿಗೆ ಚರ್ಚೆ ನಡೆಸಿದ್ದಾರೆ. ಶುಕ್ರವಾರ ಬೆಳಗ್ಗೆ ಸಿಎಂ ಬಿಎಸ್‌ವೈ ಅವರು ಸಚಿವ ಜೆ.ಸಿ. ಮಾಧುಸ್ವಾಮಿ ಹಾಗೂ ಮುಖ್ಯ ಸಚೇತಕ ವಿ. ಸುನಿಲ್‌ ಕುಮಾರ್‌ ಅವರೊಂದಿಗೆ ಚರ್ಚೆ ನಡೆಸಿದರು.

ಕಾಂಗ್ರೆಸ್‌ ಪ್ರತೀ ಆರು ತಿಂಗಳಿಗೊಮ್ಮೆ ನನ್ನ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುತ್ತಿರಬೇಕು. ಆಗ ನನಗೆ ಹೆಚ್ಚಿನ ವಿಶ್ವಾಸ ಮೂಡಿ ಕೆಲಸ ಮಾಡಲು ಶಕ್ತಿ ಬರುತ್ತದೆ.
– ಬಿ.ಎಸ್‌. ಯಡಿಯೂರಪ್ಪ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next