Advertisement

ಚಿಕಿತ್ಸೆ ನೀಡುವಲ್ಲಿ ವ್ಯಾಪಾರೀಕರಣ ಬೇಡ: ಖಂಡ್ರೆ

03:26 PM May 03, 2022 | Team Udayavani |

ಭಾಲ್ಕಿ: ಸಾರ್ವಜನಿಕ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ವ್ಯಾಪಾರೀಕರಣ ಮಾಡದೇ ಎಲ್ಲರಿಗೂ ಗುಣಮಟ್ಟದ ಚಿಕಿತ್ಸೆ ನೀಡಬೇಕು ಎಂದು ಶಾಸಕ ಈಶ್ವರ ಖಂಡ್ರೆ ವೈದ್ಯರಿಗೆ ಸಲಹೆ ನೀಡಿದರು.

Advertisement

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆರೋಗ್ಯ ಕಚೇರಿಯ ಸಹಯೋಗದಲ್ಲಿ ಹಮ್ಮಿಕೊಂಡ ತಾಲೂಕು ಮಟ್ಟದ ಆರೋಗ್ಯ ಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈಗಾಗಲೇ ಕೋವಿಡ್‌ ಮಹಾಮಾರಿಗೆ ಜನ ತತ್ತರಿಸಿ ಹೋಗಿದ್ದಾರೆ. ಆರೋಗ್ಯವಂತ ವ್ಯಕ್ತಿಯಿಂದ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ತಾಲೂಕಿನ ಸಾರ್ವಜನಿಕ, ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಲ್ಲ ವಿಧದ ರೋಗಗಳಿಗೆ ಚಿಕಿತ್ಸೆ ನೀಡುವ ಕಾರ್ಯ ನಡೆಯಬೇಕು. ಆಯುಷ್ಮಾನ್‌ ಭಾರತ ಮತ್ತು ಆರೋಗ್ಯ ಕರ್ನಾಟಕ ಸೌಲಭ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು. ಮಾಹಿತಿ ಶಿಕ್ಷಣ ಸಂವಹನ ಚಟುವಟಿಕೆಗಳು, ಆಯುಷ ಕ್ಲಿನಿಕ್‌ ಸೇವೆಗಳು, ಆರೋಗ್ಯ ಶಿಕ್ಷಣ ಮತ್ತು ಆಹಾರ ಸಮಾಲೋಚನೆ ಪರಿಣತರಿಂದ ನಿರಂತರ ನಡೆಯಬೇಕು. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ತಮ್ಮ ಕರ್ತವ್ಯಗಳನ್ನು ಆಸಕ್ತಿಯಿಂದ ನಿರ್ವಹಿಸಿ ಎಲ್ಲರಿಗೂ ಆರೋಗ್ಯ ಮತ್ತು ಎಲ್ಲೆಡೆಯೂ ಆರೋಗ್ಯ ದೊರಕುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಆರೋಗ್ಯ ಮೇಳದಲ್ಲಿ 117 ಶುಗರ್‌, 435 ಬಿಪಿ, 218 ಚಿಕ್ಕ ಮಕ್ಕಳಿಗೆ ತಪಾಸಣೆ ನಡೆಸಲಾಯಿತು. 195 ರೋಗಿಗಳಿಗೆ ಮಾಹಿತಿ ಸಂವಹನ ಮೂಲಕ ಚಿಕಿತ್ಸೆ ನೀಡಿ, ಒಟ್ಟು 1850 ಜನರು ವಿವಿಧ ಕಾಯಿಲೆಗಳಿಗೆ ಸಂಬಂಧಿಸಿದಂತೆ ತಪಾಸಣೆ ಮಾಡಿಕೊಂಡರು ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ| ಜ್ಞಾನೇಶ್ವರ ನಿರಗುಡೆ ಮಾಹಿತಿ ನೀಡಿದರು.

ಪುರಸಭೆ ಅಧ್ಯಕ್ಷ ಬಸವರಾಜ ವಂಕೆ, ತಹಶೀಲ್ದಾರ್‌ ಕೀರ್ತಿ ಚಾಲಕ, ಸಿಎಂಒ ಡಾ| ಅಬ್ದುಲ ಖಾದರ್‌, ಡಾ| ದೇವಕಿ ಖಂಡ್ರೆ, ಡಾ| ನಿತೀನ ಪಾಟೀಲ್‌, ಡಾ| ಶಶಿಕಾಂತ ಭೂರೆ, ಡಾ| ವಿಕ್ರಮ ದೇವಪ್ಪ, ಡಾ| ಜೀಬಾ, ಡಾ| ಪ್ರವೀಣ, ಡಾ| ಸುಶಿಲ, ಡಾ| ಸಂಗಮೇಶ, ಡಾ| ಲೋಕೇಶ, ಡಾ| ಮಮತಾ, ಡಾ| ಶಿವುಕುಮಾರ, ಡಾ| ಶೇಷನಾಗ, ಡಾ| ರಂಗನಾಥ, ಡಾ| ಗುರುರಾಜ ಮತ್ತು ಸಿಡಿಪಿಒ ಮಂಗಲಾ ಉಮರಗೆ ಇದ್ದರು.

Advertisement

ಶೀಘ್ರ ತಾಯಿ-ಮಗು ಆಸ್ಪತ್ರೆ ಭಾಲ್ಕಿ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಯಿ-ಮಗು ಆಸ್ಪತ್ರೆ ತೆರೆಯಲು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲಿ ಸಕಲ ಸೌಲಭ್ಯವುಳ್ಳ ತಾಯಿ-ಮಗು ಆಸ್ಪತ್ರೆ ಆರಂಭಿಸಲಾಗುವುದು. ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉಚಿತವಾಗಿ ಔಷಧಗಳನ್ನು ವಿತರಿಸಬೇಕು. ಔಷಧದ ಅಭಾವ ಎಂದು ರೋಗಿಗಳಿಗೆ ಬೇರೆಡೆ ಕಳುಹಿಸಬಾರದು. ಪ್ರಸ್ತುತವಾಗಿ ಸ್ತ್ರೀ ರೋಗತಜ್ಞೆ, ಆರ್ಥೋ, ಹೃದಯ ತಜ್ಞ ಸೇರಿದಂತೆ ಎಲ್ಲ ವೈದ್ಯಕೀಯ ಪರಿಣಿತರನ್ನು ನೇಮಿಸಲಾಗಿದೆ. ಗ್ರಾಮೀಣ ಭಾಗದ ಜನರು ಆತಂಕ ಪಡುವ ಅಗತ್ಯವಿಲ್ಲ. ಸರ್ಕಾರಿ ವೈದ್ಯಕೀಯ ಸೌಲಭ್ಯಗಳು ಸಕಲರಿಗೂ ದೊರೆಯಬೇಕು. -ಈಶ್ವರ ಖಂಡ್ರೆ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next