Advertisement
ದೇಶದ ಉಷ್ಣವಿದ್ಯುತ್ ಸ್ಥಾವರಗಳಲ್ಲಿ ಸರಾಸರಿ 21.55 ದಶಲಕ್ಷ ಟನ್ ಹಾಗೂ ಕಲ್ಲಿದ್ದಲು ಕಂಪೆನಿಗಳಲ್ಲಿ 72.5 ದಶಲಕ್ಷ ಟನ್ ಸಂಗ್ರಹವಿದೆ. ಈ ತಿಂಗಳಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ವಿದ್ಯುತ್ ಬೇಡಿಕೆ ಉಂಟಾ ಗಿದೆ. ಆದರೂ ಗಾಬರಿಯಾಗುವ ಅಗತ್ಯವಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಹೇಳಿದ್ದಾರೆ.
ವಿದ್ಯುತ್ಛಕ್ತಿ ಉತ್ಪಾದನೆಗೆಂದೇ ಸೆಂಟ್ರಲ್ ಕೋಲ್‌ಫೀಲ್ಡ್ ಲಿಮಿಟೆಡ್(ಸಿಸಿಎಲ್) ನಲ್ಲಿ 60 ಲಕ್ಷ ಟನ್‌ಗೂ ಅಧಿಕ ಕಲ್ಲಿದ್ದಲು ಸಂಗ್ರಹ ಲಭ್ಯವಿದ್ದು, ವಿದ್ಯುತ್ ಬಿಕ್ಕಟ್ಟು ಎದುರಿ ಸುತ್ತಿರುವ ರಾಜ್ಯಗಳಿಗೆ ಪ್ರತಿದಿನ 1.85 ಲಕ್ಷ ಟನ್ ಕಲ್ಲಿದ್ದಲು ಒದಗಿಸುವ ಉದ್ದೇಶ ಹೊಂದಿದ್ದೇವೆ ಎಂದು ಸಿಸಿಎಲ್ ಮುಖ್ಯಸ್ಥ ಪಿಎಂ ಪ್ರಸಾದ್ ಹೇಳಿದ್ದಾರೆ.
Related Articles
Advertisement
ವಿದ್ಯುತ್ ಬೇಡಿಕೆ ದಾಖಲೆ ಹಲವು ರಾಜ್ಯಗಳಲ್ಲಿ ತಾಪ ಹೆಚ್ಚಳವಾಗುತ್ತಿ ರುವ ಕಾರಣ ವಿದ್ಯುತ್ಛಕ್ತಿಯ ಬೇಡಿಕೆ ಸಾರ್ವಕಾಲಿಕ ಏರಿಕೆ ಕಂಡಿದೆ. ಶುಕ್ರವಾರ ಈ ಬೇಡಿಕೆ 2,07,111 ಮೆಗಾ ವ್ಯಾಟ್(207 ಗಿಗಾ ವ್ಯಾಟ್) ಆಗಿತ್ತು. ಗುರುವಾರ ಗರಿಷ್ಠ ವಿದ್ಯುತ್ ಬೇಡಿಕೆ ದಾಖಲೆಯ 204.65 ಗಿ.ವ್ಯಾ.ಗೆ ತಲುಪಿ, 10.77 ಗಿ.ವ್ಯಾ. ವಿದ್ಯುತ್ಛಕ್ತಿ ಅಭಾವ ಉಂಟಾಗಿತ್ತು. ಶುಕ್ರವಾರ ಸಾರ್ವಕಾಲಿಕ ದಾಖಲೆ ಮಾಡಿದೆ. ಬಿಸಿಲ ಧಗೆಗೆ ಕುಲುಮೆ ಯಂತಾದ ರಾಜ್ಯಗಳು
ಬಿಸಿಲಿನ ಝಳದಿಂದಾಗಿ ಕರ್ನಾಟಕ ಸಹಿತ ಹಲವು ರಾಜ್ಯಗಳು ಉರಿವ ಕುಲುಮೆಯಂತಾಗಿದ್ದು, ಇನ್ನೂ 5 ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಇಡೀ ದೇಶದಲ್ಲಿ ಎಪ್ರಿಲ್ ತಿಂಗಳಲ್ಲಿ ಸರಾಸರಿ 35.05 ಡಿ.ಸೆ. ಉಷ್ಣಾಂಶ ದಾಖಲಾಗಿದ್ದು, ಇದು ಕಳೆದ 122 ವರ್ಷಗಳಲ್ಲೇ ಅತ್ಯಧಿಕ ಎಂದು ಇಲಾಖೆಯ ಮಹಾ ನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ತಿಳಿಸಿದ್ದಾರೆ. ರಾಜಸ್ಥಾನ, ಪಂಜಾಬ್, ಜಮ್ಮು ಮತ್ತು ಕಾಶ್ಮೀರ ಹಾಗೂ ದಿಲ್ಲಿಯ ಹಲವು ಭಾಗಗಳಲ್ಲಿ ತಾಪಮಾನವು ಶನಿವಾರ 46 ಡಿ.ಸೆ. ದಾಟಿತ್ತು. ಉತ್ತರ ಪ್ರದೇಶದ ಬಾಂದಾದಲ್ಲಿ 47.4 ಡಿ.ಸೆ. ಆಗಿತ್ತು. 1900ರ ಬಳಿಕ ಎಪ್ರಿಲ್ ತಿಂಗಳಲ್ಲಿ ವಾಯವ್ಯ ಮತ್ತು ಮಧ್ಯ ಭಾರತದಲ್ಲಿ ಅತ್ಯಧಿಕ ಗರಿಷ್ಠ ತಾಪಮಾನ ದಾಖಲಾಗಿದ್ದು, ಮೇ ತಿಂಗಳಲ್ಲೂ ಇಲ್ಲಿನ ಜನರು ಈ ಸಂಕಷ್ಟದಿಂದ ಮುಕ್ತರಾಗುವ ಸಾಧ್ಯತೆಯಿಲ್ಲ ಎಂದೂ ಇಲಾಖೆ ಹೇಳಿದೆ. ದೇಶಾದ್ಯಂತ ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ವಿದ್ಯುತ್ ಬೇಡಿಕೆ ಹೆಚ್ಚಿದ್ದರೂ ನಿರ್ವಹಣೆಯ ನೆಪ ಹೇಳಿ ಸ್ಥಾವರಗಳನ್ನು ಮುಚ್ಚಲಾಗುತ್ತಿದೆ. ಈ ವೈಫಲ್ಯಕ್ಕೆ ಪ್ರಧಾನಿ ಮೋದಿ ಯಾರನ್ನು ದೂಷಿಸುತ್ತಾರೆ? ನೆಹರೂ ಅವರನ್ನೇ?
– ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ ಬೇಡಿಕೆ ಹೆಚ್ಚಾದಂತೆ ಕಲ್ಲಿದ್ದಲಿನ ಸರಾಗ ಪೂರೈಕೆಗಾಗಿ ವಿದ್ಯುತ್, ಕಲ್ಲಿದ್ದಲು ಮತ್ತು ರೈಲ್ವೇ ಸಚಿವಾಲಯವು ನಿರಂತರವಾಗಿ ಕೆಲಸ ಮಾಡುತ್ತಿದೆ. ಹೀಗಿ ದ್ದರೂ ಸತ್ಯ ಗೊತ್ತಿಲ್ಲದೆ ಮಾತನಾಡುತ್ತಾ ಹೋದರೆ, ರಾಹುಲ್ ಗಾಂಧಿ ಅವರನ್ನು “ನಕಲಿ ಜೋತಿಷಿ’ ಎನ್ನಬೇಕಾದೀತು.
– ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವ