Advertisement

ಸಹಕಾರ ಸಂಘ ಸಾಲ ಇಲ್ಲ ಅನ್ನಬಾರದು: ಡಾ|ಎಂ.ಎನ್‌. ಆರ್‌.

12:30 AM Jan 26, 2019 | Team Udayavani |

ಸುಳ್ಯ: ಸಹಕಾರ ಸಂಘವು ಪ್ರತಿ ವ್ಯಕ್ತಿಗೆ ಅಗತ್ಯದ ಸಂದರ್ಭ ಸಾಲ ಒದಗಿಸ ಬೇಕು. ಸಾಲ ಇಲ್ಲ ಎಂಬ ಪದ ಸಹಕಾರ ಕ್ಷೇತ್ರದಲ್ಲಿ ಬರಬಾರದು ಎಂದು ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಹೇಳಿದರು.

Advertisement

ಸುಳ್ಯ ತಾಲೂಕಿನ ಐವರ್ನಾಡು ಪ್ರಾ.ಕೃ. ಪತ್ತಿನ ಸಹಕಾರ ಸಂಘದ ಶತಮಾ ನೋತ್ಸವ ಸಂಭ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ರಾಷ್ಟ್ರೀಯ ಸಹಕಾರ ನೀತಿ ಘೋಷಿಸಿ
ಸಹಕಾರ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿ ಸಲು ಮುಂದಿನ 25 ವರ್ಷಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ರಾಷ್ಟ್ರೀಯ ಸಹಕಾರ ನೀತಿ ಘೋಷಿಸಿ ಎಂದರು.

ಶತಮಾನೋತ್ಸವದ ಹಿನ್ನೆಲೆಯಲ್ಲಿ ಐವರ್ನಾಡು ಸಹಕಾರ ಸಂಘವು ಸ್ಥಾಪಿಸಿದ ಸಹಕಾರ ಶತಾಬ್ಧ ಸಾಂತ್ವನ ನಿಧಿಯನ್ನು ಲೋಕಾರ್ಪಣೆಗೊಳಿಸ ಲಾಯಿತು. ಸಂಸದ ನಳಿನ್‌ ಕುಮಾರ್‌ ಕಟೀಲು ಸ್ಮರಣಸಂಚಿಕೆ ಬಿಡುಗಡೆ ಗೊಳಿಸಿದರು. ಹಾಲಿ, ನಿವೃತ್ತ ಸೈನಿಕರಿಗೆ, ಸಂಘದ ಮಾಜಿ ಅಧ್ಯಕ್ಷರು, ನಿರ್ದೇ ಶಕರು, ಸಿಬಂದಿ, ಸಮಗ್ರ  ಕೃಷಿಕರು,ಶೈಕ್ಷಣಿಕ ಸಾಧಕರನ್ನು ಈ ಸಂದರ್ಭ ಸಮ್ಮಾನಿಸಲಾಯಿತು. ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿ ರಜತ ಸಂಭ್ರಮ ಪೂರೈಸಿದ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರನ್ನು ಸಮ್ಮಾನಿಸಲಾಯಿತು.

ಶಾಸಕ ಎಸ್‌. ಅಂಗಾರ ಅಧ್ಯಕ್ಷತೆ ವಹಿಸಿದ್ದರು. ಚನಿಯ ಕಲ್ತಡ್ಕ, ಹರೀಶ್‌ ಆಚಾರ್‌, ನಿತ್ಯಾನಂದ ಮುಂಡೋಡಿ, ಕೆ.ಎಸ್‌. ದೇವರಾಜ್‌, ಶಶಿಕುಮಾರ್‌ ರೈ ಬಾಲೊÂಟ್ಟು, ಹರೀಶ್‌ ಕಂಜಿಪಿಲಿ, ಪುಷ್ಪಾವತಿ ಬಾಳಿಲ, ರಾಧಾಕೃಷ್ಣ ಬೊಳ್ಳೂರು, ಚೈತ್ರಾ ಕಟ್ಟತ್ತಾರು, ವಿಕ್ರಂ ಪೈ, ನಿರ್ದೇಶಕರು, ಮಾಜಿ ಅಧ್ಯಕ್ಷರು  ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಎಸ್‌.ಎನ್‌. ಮನ್ಮಥ ಸ್ವಾಗತಿಸಿ, ಸಿಇಒ ರವಿಪ್ರಸಾದ್‌ ಸಿ.ಕೆ. ವರದಿ ವಾಚಿಸಿದರು. ಸತೀಶ್‌ ಎಡಮಲೆ ವಂದಿಸಿ, ಕೆ.ಟಿ. ವಿಶ್ವನಾಥ ನಿರೂಪಿಸಿದರು.

Advertisement

ಸಹಕಾರಿ ವಿ.ವಿ. ಸ್ಥಾಪನೆಯಾಗಲಿ
ಬಡತನದಲ್ಲಿದ್ದ ದೇಶವನ್ನು ಅಭಿವೃದ್ಧಿಪರ ದೇಶವನ್ನಾಗಿಸಲು ಸಹಕಾರ ಕ್ಷೇತ್ರದ ಕೊಡುಗೆ ಸಾಕಷ್ಟಿದೆ. ಇದನ್ನು ಅಧ್ಯಯನ ಮಾಡಬೇಕು. ಅಕಾಡೆಮಿಕ್‌ ರಿಸರ್ಚ್‌ ಆಗಬೇಕು. ಅದಕ್ಕಾಗಿ ಭಾರತದಲ್ಲಿ ಸಹಕಾರಿ ವಿ.ವಿ. ಸ್ಥಾಪನೆ ಆಗಬೇಕು ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್‌. ಆರ್‌. ಸತೀಶ್ಚಂದ್ರ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next