ಪಾಂಡವಪುರ: ಹಾಲಿಗೆ ನೀರು ಬೆರೆಸುವ ಹಾಗೂ ರಾಸಾಯನಿಕ ಮಿಶ್ರಣ ಪ್ರಕರಣದಲ್ಲಿ ಒಕ್ಕೂಟದ ಪಾತ್ರವಿಲ್ಲ. ಆದರೆ, ಎಂಎಲ್‌ಸಿ ದಿನೇಶ್ ಗೂಳಿಗೌಡ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಮನ್‌ಮುಲ್ ಆಡಳಿತ ಮಂಡಳಿಯನ್ನು ಸೂಪರ್‌ಸೀಡ್ ಮಾಡಿ ಎನ್ನುವುದು ಸರಿಯಲ್ಲ ಎಂದು ಮನ್‌ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಹೇಳಿದರು.
ಪಟ್ಟಣದ ಮನ್‌ಮುಲ್ ಉಪ ವ್ಯವಸ್ಥಾಪಕ ಕಚೇರಿಯಲ್ಲಿ ಸೋಮವಾರ ನಡೆದ ಮೃತಪಟ್ಟರಾಸುಗಳ ಮಾಲೀಕರಿಗೆ ವಿಮೆ ಚೆಕ್ ವಿತರಣೆ,ಮೇವು ಕತ್ತರಿಸುವ ಯಂತ್ರ ವಿತರಣೆ ಹಾಗೂನಿವೃತ್ತ ಡೇರಿ ಕಾರ್ಯದರ್ಶಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.
ರಾಸಾಯನಿಕ ಮಿಶ್ರಣ ಮಾಡಿದ ಹಾಲನ್ನು ಒಕ್ಕೂಟ ಖರೀದಿಸಿಲ್ಲ. ಹೀಗಿರುವಾಗ ಪರಿಷತ್‌ಸದಸ್ಯ ದಿನೇಶ್‌ಗೂಳಿಗೌಡ ಅವರು ಮನ್ ಮುಲ್ ಒಕ್ಕೂಟದ ಆಡಳಿತ ಮಂಡಳಿಯನ್ನುಸೂಪರ್‌ಸೀಡ್ ಮಾಡಿ ಎಂಬುದಾಗಿ ಹೇಳಿಕೆ ನೀಡುವುದು ಸರಿಯಲ್ಲ ಎಂದರು.
ಕೆ.ಹೊನ್ನಲಗೆರೆಯಲ್ಲಿ ನಡೆದಿರುವ ಘಟನೆಗೆ ಅಲ್ಲಿನ ಕಾರ್ಯದರ್ಶಿ, ಡೇರಿ ಆಡಳಿತ ಮಂಡಳಿಯೇ ನೇರ ಹೊಣೆಗಾರರಾಗಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಹೀಗಾಗಲೆಕಾರ್ಯದರ್ಶಿ ವಿರುದ್ಧ ಕ್ರಮ ವಹಿಸಲಾಗಿದೆ. ವಜಾಗೊಳಿಸಲು ಆಡಳಿತ ಮಂಡಳಿಯಲ್ಲಿಚರ್ಚಿಸಿ ಕ್ರಮ ವಹಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಫ್ಯಾಟ್ ಮೇಲೆ ದರ ನಿಗದಿಪಡಿಸಿ: ಡೇರಿಯ ಕಾರ್ಯದರ್ಶಿಗಳು ಕಡ್ಡಾಯವಾಗಿ ಹಾಲನ್ನುಪರೀಕ್ಷೆ ಮಾಡಿ ತೆಗೆದುಕೊಳ್ಳಬೇಕು. ನೀರುಹಾಲು ಹಾಕುವವರಿಗೂ ಗುಣಮಟ್ಟದ ಹಾಲುಹಾಕುವವರಿಗೂ ಒಂದೇ ದರ ನೀಡಬೇಡಿ, ಪರೀಕ್ಷೆ ನಡೆಸಿ ಹಾಲು ಖರೀದಿಸಿ ರೈತರಿಗೆ ಫ್ಯಾಟ್ ಮೇಲೆ ದರ ನೀಡಿ, ಕಳಪೆ ಗುಣಮಟ್ಟದ ಹಾಲು ಹಾಕುವವರನ್ನು ವಾಪಸ್ ಕಳುಹಿಸಿ ಎಂದು ಸಲಹೆ ನೀಡಿದರು.
ಈ ವೇಳೆ ಅಕಾಲಿಕ ಮರಣ ಹೊಂದಿದ 12 ರಾಸುಗಳ ಮಾಲೀಕರಿಗೆ ಒಟ್ಟು 5.40 ಲಕ್ಷ ರೂ. ಗಳ ಚೆಕ್ ನೀಡಲಾಯಿತು. ಸೇವೆಯಿಂದ ನಿವೃತ್ತಗೊಂಡ 5 ಮಂದಿ ಕಾರ್ಯದರ್ಶಿಗಳಿಗೆತಲಾ 1 ಲಕ್ಷದ ಚೆಕ್ ಹಾಗೂ ತಾಲೂಕಿನ ವಿವಿಧಗ್ರಾಮಗಳ 6 ಮಂದಿಗೆ ಮೇವು ಕತ್ತರಿಸುವಯಂತ್ರ ವಿತರಣೆ ಮಾಡಲಾಯಿತು. ಈಸಂದರ್ಭದಲ್ಲಿ ವಿವಿಧ ಗ್ರಾಮಗಳ ರೈತರು, ಮನ್‌ಮುಲ್ ಅಧಿಕಾರಿಗಳು ಹಾಜರಿದ್ದರು.