Advertisement
ಶುಕ್ರವಾರ (ಆ.16) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ವೈ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ನೇಮಕ ಮಾಡಿದ್ದಾರೆ. ಅಂತಹ ನಾಯಕರ ತೀರ್ಮಾನವನ್ನ ಪ್ರಶ್ನಿಸಲು ಆಗುತ್ತಾ ಎಂದರು.
Related Articles
Advertisement
ಯಡಿಯೂರಪ್ಪ ಎಂದರೆ ಬಿಜೆಪಿ. ಬಿಜೆಪಿ ಎಂದರೆ ಯಡಿಯೂರಪ್ಪ. ಯಡಿಯೂರಪ್ಪ ಎಂದಿದ್ದರೂ ಯಡಿಯೂರಪ್ಪ. ಅವರಂತಹ ನಾಯಕ ಮತ್ತೆ ಹುಟ್ಟಿ ಬರುವುದಿಲ್ಲ. ಯಡಿಯೂರಪ್ಪ ಯಡಿಯೂರಪ್ಪನೇ ಎಂದು ತಿಳಿಸಿದರು.
ವಿಜಯಪುರ ಶಾಸಕ ಬಸವಗೌಡ ಯತ್ನಾಳ್ ಇತರರು ಪಕ್ಷದ ಹೈಕಮಾಂಡ್ ಅನುಮತಿ ಕೊಟ್ಟರೆ ಮಾತ್ರವೇ ಪಾದಯಾತ್ರೆ ನಡೆಸುತ್ತೇವೆ ಎಂಬುದಾಗಿ ಹೇಳಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಸಹ ಇದೇ ಮಾತು ಹೇಳಿದ್ದಾರೆ. ಹೈಕಮಾಂಡ್ ಪಾದಯಾತ್ರೆಗೆ ಅನುಮತಿ ನೀಡಿದರೆ ನಾವು ಸಹ ಭಾಗವಹಿಸುತ್ತೇವೆ ಎಂದು ತಿಳಿಸಿದರು.
ನನ್ನ ರಕ್ತದ ಕಣ ಕಣದಲ್ಲೂ ಬಿಜೆಪಿ, ಹಿಂದುತ್ವ ಇದೆ. ವಿದ್ಯಾರ್ಥಿಯಾಗಿದ್ದಾಗಲೇ ನಾನು ಜೆಪಿ ಚಳವಳಿಯಿಂದ ರಾಜಕೀಯಕ್ಕೆ ಬಂದವನು. ಹಿಂದಿನಿಂದಲೂ ಕಾಂಗ್ರೆಸ್ ವಿರುದ್ಧವೇ ಹೋರಾಟ ಮಾಡಿಕೊಂಡು ಬರುತ್ತಿ ದ್ದೇನೆ. ಹಾಗಾಗಿ ನನಗೆ ಕಾಂಗ್ರೆಸ್ ಸೇರುವ ಅನಿವಾರ್ಯತೆ ಮತ್ತು ಅವಶ್ಯಕತೆಯೇ ಇಲ್ಲ. ನಾನು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ಭೇಟಿಯಾಗಿದ್ದೇನೋ ನಿಜ. ಹೊನ್ನಾಳಿ-ನ್ಯಾಮತಿ ತಾಲೂಕುಗಳನ್ನು ಬರ ಪೀಡಿತ ತಾಲೂಕು ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿ, ಹೊನ್ನಾಳಿ ಮುಖಂಡರೊಬ್ಬರ ಕೆಲಸ, ಅಭಿವೃದ್ದಿ ಕಾರ್ಯ ಅನುದಾನಕ್ಕೆ ಒತ್ತಾಯಿಸಿ ಭೇಟಿ ಮಾಡಿದ್ದೆ ಅಷ್ಟೇ. ಅವರೇ ಪಕ್ಷ ಸೇರುತ್ತೀಯಾ… ಎಂದು ತಮಾಷೆ ಮಾಡಿದ್ದರು. ಎಂದು ತಿಳಿಸಿದರು.