ನವದೆಹಲಿ: ಇಂಡಿಯಾ ಮೈತ್ರಿಕೂಟ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ವಾಗ್ದಾಳಿ ನಡೆಸಿದ್ದು, ಒಂದು ವೇಳೆ ರಾಹುಲ್ ಗಾಂಧಿಗೆ ಈ ದೇಶದ ಪ್ರಧಾನಿಯಾಗಬೇಕೆಂಬ ಆಕಾಂಕ್ಷೆ ಇದ್ದರೆ ಅವರು ಸೂರ್ಯ ಅಥವಾ ಚಂದ್ರಗ್ರಹಕ್ಕೆ ಹೋಗೋದು ಒಳ್ಳೆಯದು ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ:Baramulla: ಜಮ್ಮು – ಕಾಶ್ಮೀರದ ಬಾರಾಮುಲ್ಲಾದಲ್ಲಿ ಎನ್‌ಕೌಂಟರ್: ಓರ್ವ ಭಯೋತ್ಪಾದಕನ ಹತ್ಯೆ
ಈ ಭೂಮಿ ಮೇಲೆ ರಾಹುಲ್ ಗಾಂಧಿಗೆ ಯಾವುದೇ ಅವಕಾಶ ಇಲ್ಲ. ಆ ನಿಟ್ಟಿನಲ್ಲಿ ರಾಹುಲ್ ಪ್ರಧಾನಿಯಾಗಲು ಸೂರ್ಯ ಅಥವಾ ಚಂದ್ರಗ್ರಹದಲ್ಲಿ ಪ್ರಯತ್ನಿಸಬಹುದಾಗಿದೆ ಎಂದು ಹಿಮಂತ್ ಬಸ್ವಾ ಪುಕ್ಕಟ್ಟೆ ಸಲಹೆ ನೀಡಿದ್ದಾರೆ.
ಹಿಮಂತ್ ಬಿಸ್ವಾ ಶರ್ಮಾ ಬಿಹಾರದ ನಲಂದಾ ಜಿಲ್ಲೆಯ ರಾಜ್ ಗಿರ್ ಗೆ ಭೇಟಿ ನೀಡಿದ್ದರು. ನಂತರ ಪಾಟ್ನಾಕ್ಕೆ ವಾಪಸ್ ಆಗಿದ್ದು, ರಿತುರಾಜ್ ಸಿನ್ನಾ ಅವರ ನಿವಾಸಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತಾ ಈ ವಾಗ್ದಾಳಿ ನಡೆಸಿದ್ದಾರೆ.
ಸನಾತನ ಧರ್ಮವನ್ನು ಪ್ರಶ್ನಿಸುತ್ತಿರುವ ಇಂಡಿಯಾ ಮೈತ್ರಿಕೂಟಕ್ಕೆ 2024ರ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಸ್ವಾ ತಿರುಗೇಟು ನೀಡಿದರು. ಚಂದ್ರಯಾನದ ಬಗ್ಗೆ ಇಂಡಿಯಾ ಮೈತ್ರಿಕೂಟದ ಮುಖಂಡರು ವ್ಯಂಗ್ಯವಾಡುತ್ತಿದ್ದಾರೆ. ಆ ನಿಟ್ಟಿನಲ್ಲಿ ಇಸ್ರೋ ವಿಜ್ಞಾನಿಗಳು ಇನ್ನೊಂದು ಚಂದ್ರಯಾನಕ್ಕೆ ಸಿದ್ಧತೆ ನಡೆಸಿ ಇಂಡಿಯಾ ಮೈತ್ರಿಕೂಟದ ಮುಖಂಡರನ್ನು ಚಂದ್ರಗ್ರಹಕ್ಕೆ ಕಳುಹಿಸಿಕೊಡಬೇಕು ಎಂದು ಮನವಿ ಮಾಡಿಕೊಳ್ಳುವುದಾಗಿ ಹಿಮಂತ್ ಬಿಸ್ವಾ ಹೇಳಿದರು.