Advertisement
ಈಗಾಗಲೇ ಈ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದ್ದು ಕೇಂದ್ರೀಯ ವಿವಿಯಲ್ಲಿ ಶಿಕ್ಷಣ ಪೂರೈಸಿದ ಆನರ್ಸ್ ಪದವೀಧರರಿಗೆ ಮಾತ್ರ ಕರ್ನಾಟಕದಲ್ಲಿ ಭಾಷಾ ಶಿಕ್ಷಕರಾಗಲು ಶಿಕ್ಷಣ ಇಲಾಖೆ ನಿಯಮದಿಂದ ಹೊರಗಿಡಲಾಗಿದೆ. ಇದರಿಂದ ಆಕಾಂಕ್ಷಿಗಳು ದಿಕ್ಕು ತೋಚದೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Related Articles
Advertisement
ವಿದ್ಯಾರ್ಥಿಗಳ ಬೇಡಿಕೆ ಏನು?
ಕರ್ನಾಟಕ ರಾಜ್ಯಪತ್ರ ನಿಯಮಾವಳಿಯಲ್ಲಿ 6ರಿಂದ 8ನೇ ತರಗತಿ ಭಾಷಾ ಶಿಕ್ಷಕರಾಗಲು ಐಚ್ಛಿಕ ವಿಷಯದ ಜತೆ ಇನ್ನಿತರ ಭಾಷೆ ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ, ಮರಾಠಿ, ಕೊಂಕಣಿ, ಭೂಗೋಳಶಾಸ್ತ್ರ, ಅರ್ಥಶಾಸ್ತ್ರ, ಸಂಸ್ಕೃತ ಭಾಷೆಗಳನ್ನು ಸತತವಾಗಿ ಬಿಎ ಪದವಿಯಲ್ಲಿ ಮೂರು ವರ್ಷ ಅಧ್ಯಯನ ಮಾಡಿರಬೇಕೆಂಬ ನಿಯಮವನ್ನು ತಿದ್ದುಪಡಿ ಮಾಡಿ, ಕರ್ನಾಟಕ ಕೇಂದ್ರೀಯ ಅಭ್ಯರ್ಥಿಗಳ ಆಂಗ್ಲ ಮತ್ತು ಇತರೆ ಭಾಷೆಗಳನ್ನು ಎರಡು ವರ್ಷ ಕಾಲ ಅಧ್ಯಯನ ಮಾಡಿದ್ದನ್ನು ಪರಿಗಣಿಸಿ ನಿಯಮ ತಿದ್ದುಪಡಿ ಮಾಡಿ ಅವಕಾಶ ಕಲ್ಪಿಸಬೇಕು. ಮತ್ತೊಂದೆಡೆ ಮೈಸೂರಿನ ರಿಜನಲ್ ಇನ್‌ಸ್ಟಿಟ್ಯೂಟ್ ಆಂಗ್ಲ ವಿಭಾಗದ ವಿದ್ಯಾರ್ಥಿಗಳಿಗೆ ಇದೇ ರೀತಿಯಿದ್ದ ಸಮಸ್ಯೆಯನ್ನು ಸರ್ಕಾರ ಬಗೆಹರಿಸಿದೆ. ಅದೇ ರೀತಿ ಕೇಂದ್ರೀಯ ವಿವಿ ಸಮಸ್ಯೆಯನ್ನು ಬಗೆಹರಿಸಿ, ನಿಯಮಗಳನ್ನು ಸಡಿಲಿಸಬೇಕು ಎಂಬುದು ವಿದ್ಯಾರ್ಥಿಗಳ ಬೇಡಿಕೆ.
ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿ
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಇಂಗ್ಲಿಷ್ ಶಿಕ್ಷಕರ ಕೊರತೆ ನೀಗಿಸುವುದು ಕೇಂದ್ರೀಯ ವಿವಿಯಲ್ಲಿ ಓದಿದ ಆಕಾಂಕ್ಷಿಗಳಿಗೆ ಅವಕಾಶ ಒದಗಿಸುವುದರಿಂದ ಸಾಧ್ಯವಾಗುತ್ತದೆ. ನಾವು ಉನ್ನತ ಅಧ್ಯಯನಶೀಲರಾಗಿದ್ದೇವೆ. ಎಂಜಿನಿಯರಿಂಗ್ ಓದಿದವರಿಗೆ ಶಿಕ್ಷಕರ ನೇಮಕಾತಿಗೆ ಅವಕಾಶ ಮಾಡಿಕೊಟ್ಟಂತೆ ಇಂಗ್ಲಿಷ್ ಓದಿದವರಿಗೂ ಅವಕಾಶ ಮಾಡಿಕೊಟ್ಟು ನ್ಯಾಯ ನೀಡಬೇಕು. ಇಲ್ಲವಾದಲ್ಲಿ ಕಾನೂನು ಹೋರಾಟಕ್ಕೆ ಮುಂದಾಗುತ್ತೇವೆ. 2021ರಲ್ಲಿ ಶಿಕ್ಷಣ ಸಚಿವರಾಗಿದ್ದ ಸುರೇಶ ಕುಮಾರ ಹಾಗೂ ಆಯುಕ್ತರು, ಶಶೀಲ ಜಿ. ನಮೋಶಿಗೆ ಈ ಕುರಿತು ಮನವಿ ಸಲ್ಲಿಸಲಾಗಿದೆ ಎನ್ನುತ್ತಾರೆ ಕೇಂದ್ರೀಯ ವಿವಿ ನಿಕಟಪೂರ್ವ ವಿದ್ಯಾರ್ಥಿಗಳು.
ರಾಜ್ಯ ಸರ್ಕಾರ 6ರಿಂದ 8ನೇ ತರಗತಿ ಶಾಲಾ ಶಿಕ್ಷಕರ ನೇಮಕಾತಿಗೆ ಹೊರಡಿಸಿದ ಸಿಎನ್‌ಆರ್ ನಿಯಮಗಳಲ್ಲಿ ಕರ್ನಾಟಕ ಕೇಂದ್ರೀಯ ವಿವಿಯಲ್ಲಿ ಬಿಎ ಆನರ್ಸ್ ಪದವಿ ಪಡೆದ ವಿದ್ಯಾರ್ಥಿಗಳನ್ನು ಕೈಬಿಡಲಾಗಿದೆ. ಸಿಎನ್‌ಆರ್ ನಿಯಮ ಸೂಕ್ತ ತಿದ್ದುಪಡಿ ಮಾಡಿ ವಿದ್ಯಾರ್ಥಿಗಳ ಅರ್ಹತೆ ಗುರುತಿಸಿ, ಅವರಿಗೂ ಪದವೀಧರ ಪ್ರಾಥಮಿಕ ಶಾಲೆ ಶಿಕ್ಷಕರಾಗಲು, ನೇಮಕಾತಿಯಲ್ಲಿ ಉದ್ಯೋಗ ಪಡೆಯಲು ಅವಕಾಶ ನೀಡಬೇಕು ಎಂದು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಗೆ ವಿಸ್ತಾರವಾಗಿ ಪತ್ರ ಬರೆಯಲಾಗಿದೆ. -ಪ್ರೊ| ಬಸವರಾಜ ಡೋಣೂರ, ಕುಲಸಚಿವರು, ಕರ್ನಾಟಕ ಕೇಂದ್ರೀಯ ವಿವಿ