Advertisement

ರಜಾದಿನಗಳಲ್ಲಿ ಹಣವಿಲ್ಲದೆ ಖಾಲಿ ಖಾಲಿಯಿರುವ ನಗರದ ಎಟಿಎಂಗಳು: ಪರಿತಪಿಸುವ ಪ್ರವಾಸಿಗರು

12:19 PM Dec 28, 2021 | Team Udayavani |

ದಾಂಡೇಲಿ: ಪ್ರವಾಸೋಧ್ಯಮ ಕ್ಷೇತ್ರದಲ್ಲಿ ವಿಶ್ವ ಭೂಪಟದಲ್ಲಿ ಸ್ಥಾನ ಅಲಂಕರಿಸಿಕೊಳ್ಳುತ್ತಿರುವ ದಾಂಡೇಲಿಗೆ ರಾಜ್ಯ, ಹೊರ ರಾಜ್ಯ ಹಾಗೂ ದೇಶ, ವಿದೇಶಗಳಿಂದಲೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರತೊಡಗಿದ್ದಾರೆ. ಅಂದ ಹಾಗೆ ಒಂದೊಮ್ಮೆ ಕೈಗಾರಿಕಾ ನಗರಿಯಾಗಿದ್ದ ದಾಂಡೇಲಿ ಪ್ರವಾಸೋದ್ಯಮ ನಗರಿಯಾಗಿ ಅತ್ಯಲ್ಪ ವರ್ಷದಲ್ಲೇ ತನ್ನ ಹೆಸರನ್ನು ವಿಶ್ವದೆಲ್ಲೆಡೆ ಪಸರಿಸಿದೆ.

Advertisement

ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ದಾಂಡೇಲಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕುಗಳಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಎಟಿಎಂ ಕೇಂದ್ರಗಳು ಇವೆ. ಹೆಚ್ಚಿನ ಸಂಖ್ಯೆಯಲ್ಲಿ ಎಟಿಎಂ ಕೇಂದ್ರಗಳು ಇದ್ದಾರೆನಂತೆ, ಅವುಗಳಲ್ಲಿ ಹೆಚ್ಚಿನವುಗಳಲ್ಲಿ ವೀಕೆಂಡ್ ಹಾಗೂ ರಜಾ ದಿನಗಳಲ್ಲಿ ಹಣವೆ ಇರುವುದಿಲ್ಲ ಎಂಬ ಆರೋಪ ಬಲವಾಗಿ ಕೇಳಿ ಬರುತ್ತಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೇ ಈಗ ಎಲ್ಲವು ಡಿಜಿಟಲ್ ಮಯವಾಗಿದೆ ಹೌದು. ಆದರೆ ನಗರದ ಸುತ್ತಮುತ್ತಲಿರುವ ಹೋಂ ಸ್ಟೇ, ರೆಸಾರ್ಟ್ ಗಳಿರುವಲ್ಲಿ ನೆಟ್ವರ್ಕ್ ಸಮಸ್ಯೆಯಿಂದಾಗಿ ಗೂಗಲ್ ಪೇ, ಪೋನ್ ಪೇ ವರ್ಕ್ ಆಗುವುದು ಅಷ್ಟಕ್ಕಷ್ಟೆ. ಒಂದು ವೇಳೆ ಆದರೂ ಸರಿಯಾಗಿ ನೆಟ್ವರ್ಕ್ ಇಲ್ಲದೆ ಇರುವುದರಿಂದ ಬಂದ ಪ್ರವಾಸಿಗರು ಪೋನ್ ಪೇ ಇಲ್ಲವೆ ಗೂಗಲ್ ಪೇ ಮಾಡಲು ಕನಿಷ್ಟ ಒಂದರಿಂದ ಎರಡು ಗಂಟೆ ಸಮಯ ತೆಗೆದುಕೊಳ್ಳುವ ಸಾಧ್ಯತೆ ಬಹುತೇಕವಿದೆ. ಹಾಗಾಗಿ ಇಲ್ಲಿ ಪ್ರವಾಸಿಗರು ಮೋಜು ಮಸ್ತಿ ಮಾಡುವ ಬದಲು ಹಣ ವರ್ಗಾವಣೆಗಾಗಿ ಕುಸ್ತಿ ಆಡುವ ಪ್ರಮೇಯ ಬಂದೊದಗಿದೆ.

ಇಂಥಹ ಸಮಯದಲ್ಲಿ ಸಹಾಯಕ್ಕೆ ಬರುವುದೆ ಎಟಿಎಂ ಕೇಂದ್ರಗಳು. ಆದರೇನೂ ದಾಂಡೇಲಿ ನಗರದ ಬಹುತೇಕ ಎಟಿಎಂ ಗಳಲ್ಲಿ ವಾರದ ರಜಾ ದಿನಗಳಲ್ಲಿ, ಅಥವಾ ಹಬ್ಬ ಹರಿದಿನ ಸಮಯದಲ್ಲಿ ಹಣವೆ ಇರುವುದಿಲ್ಲ. ಇದರಿಂದ ಪ್ರವಾಸಿಗರಿಗೆ ಹಾಗೂ ನಗರದ ನಾಗರೀಕರಿಗೂ ತೊಂದರೆಯಾಗುತ್ತಿದೆ. ಕೆಲವೊಮ್ಮೆ 2 ಸಾವಿರ ಹಣ ಡ್ರಾ ಮಾಡಲು ನಗರದಲ್ಲಿರುವ ಎಲ್ಲ ಎಟಿಎಂ ಕೇಂದ್ರಗಳಿಗೆ ಹೋದರೂ ಬರಿಗೈಯಲ್ಲೆ ವಾಪಾಸ್ಸು ಬರಬೇಕಾದ ಸ್ಥಿತಿ ಬಹುತೇಕ ದಿನಗಳಲ್ಲಿ ನಡೆದಿದೆ. ಹೀಗಿರುವಾಗ ದಾಂಡೇಲಿ ಪ್ರವಾಸೋದ್ಯಮ ನಗರವಾಗಿ ಒಳ್ಳೆಯ ಹೆಸರನ್ನು ಪಡೆಯುತ್ತಿರುವಾಗ ರಜೆ ಹಾಗೂ ಇನ್ನಿತರ ಹಬ್ಬ ಹರಿದಿನಗಳ ಸಂದರ್ಭ ಹೆಚ್ಚಿನ ಪ್ರಮಾಣದಲ್ಲಿ ಆಯಾಯ ಬ್ಯಾಂಕುಗಳು ತಮ್ಮ ತಮ್ಮ ಎಟಿಎಂ ಕೇಂದ್ರಗಳಲ್ಲಿ ಹಣವನ್ನು ಜಮಾ ಮಾಡಬೇಕೆಂಬ ಮನವಿ ನಾಗರೀಕರದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next