Advertisement

ಗಂಗಾವತಿಗೂ ಕಾಲಿಟ್ಟ ನೋ ಸಿಎಎ ಬರಹ

10:57 PM Jan 15, 2020 | Team Udayavani |

ಗಂಗಾವತಿ: ಗೋಡೆ ಬರಹ ಹಾವಳಿ ಗಂಗಾವತಿಗೂ ಕಾಲಿಟ್ಟಿದ್ದು, ಎನ್‌ಆರ್‌ಸಿ, ಸಿಎಎ ಮತ್ತು ಎನ್‌ಪಿಆರ್‌ ವಿರೋಧಿಸಿ ನಗರದ ಜ್ಯೂನಿಯರ್‌ ಕಾಲೇಜು ಮೈದಾನದ ಗೋಡೆಗಳ ಮೇಲೆ ಬರೆಯಲಾಗಿದೆ. ಜೂನಿಯರ್‌ ಕಾಲೇಜಿನ ಮೈದಾನಕ್ಕೆ ಹೊಂದಿಕೊಂಡಿರುವ ಪಿಎಲ್‌ಡಿ ಬ್ಯಾಂಕ್‌ ಮತ್ತು ಬಿಇಒ ಕಚೇರಿ ಗೋಡೆಗಳ ಮೇಲೂ ನೋ ಎನ್‌ಆರ್‌ಸಿ, ಸಿಎಎ ಮತ್ತು ಎನ್‌ಪಿಆರ್‌ ಎಂದು ಬರೆಯಲಾಗಿದೆ.

Advertisement

ಕಳೆದ ಮೂರು ದಿನಗಳ ಹಿಂದೆ ನಗರದ ಕಿಲ್ಲಾ ಏರಿಯಾದಲ್ಲಿ ಬಿಜೆಪಿ ಮುಖಂಡರು ಪೌರತ್ವ ಕಾಯ್ದೆ ಕುರಿತು ಜಾಗೃತಿ ಮೂಡಿಸಲು ಸ್ಥಳೀಯ ಯುವಕರು ಬಿಟ್ಟಿರಲಿಲ್ಲ. ಈ ವೇಳೆ ಬಿಜೆಪಿ ಮುಖಂಡರನ್ನು ಮನೆಯೊಂದರಲ್ಲಿ ಕೂಡಿ ಹಾಕಿ ಪೌರತ್ವ ಕಾಯ್ದೆ ವಿರುದ್ಧ ಹಾಗೂ ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಪೊಲೀಸರು ಮಧ್ಯೆ ಪ್ರವೇಶಿಸಿ ಬಿಜೆಪಿ ಮುಖಂಡರನ್ನು ಸ್ಥಳದಿಂದ ಕರೆದುಕೊಂಡು ಹೋಗಿದ್ದರು. ಈ ಮಧ್ಯೆ ನೋ ಎನ್‌ಆರ್‌ಸಿ, ಸಿಎಎ ಎಂದು ಬರೆದು ಆಕ್ರೋಶ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next