Advertisement

ಊರಿಗೆ ಬಸ್‌ ಇಲ್ಲ:ನಡೆಯದೇ ವಿಧಿಯಿಲ್ಲ :ಪಶ್ಚಿಮ ಘಟ್ಟ ತಪ್ಪಲಿನ ಜನತೆಗೆ ತಪ್ಪದ ಸಂಚಾರ ಸಮಸ್ಯೆ

09:04 PM Feb 18, 2021 | Team Udayavani |

ಕಾರ್ಕಳ: ನಿತ್ಯವೂ ಅವರಿವರ ಸಹಾಯದಲ್ಲೆ ಊರ ಹೊರಗೆ, ತಾಲೂಕು ಕೇಂದ್ರಕ್ಕೆ ಬರಬೇಕು. ಪ್ರಯಾಣದಲ್ಲಿ ಶಾಲಾ ಮಕ್ಕಳು ಅನಾರೋಗ್ಯ ಪೀಡಿತರು, ಗರ್ಭಿಣಿಯರು ರೈತರು, ಕೂಲಿ ಕಾರ್ಮಿಕರು ಪಡುವ ಪಾಡು ಕೂಡ ಅಷ್ಟಿಷ್ಟಲ್ಲ. 7-8 ಕಿ.ಮೀ. ಕಾಲ್ನಡಿಗೆಯಲ್ಲಿ ಇಲ್ಲವೇ ಬಾಡಿಗೆ ವಾಹನ ಹಿಡಿದು ಹೆಚ್ಚಿನ ದರ ನೀಡಿ ಹೊರಗಿನ ಊರಿಗೆ ಪ್ರಯಾಣಿಸಬೇಕು.

Advertisement

ಇದು ಪಶ್ಚಿಮ ಘಟ್ಟ ತಪ್ಪಲಿನ ಕುದುರೆಮುಖ ಭಾಗದ ಹತ್ತಾರು ಕಂದಾಯ ಗ್ರಾಮಗಳಿಗೆ ಸೇರುವ ಜನತೆ ಅನುಭವಿಸುತ್ತಿರುವ ದುಃಸ್ಥಿತಿ. ಇವರ ಪ್ರಯಾಣದ ಸಂಕಷ್ಟದ ಬದುಕಿಗೆ ಪರಿಹಾರ ಇದುವರೆಗೂ ಸಿಕ್ಕಿಲ್ಲ.

8 ಕಿ.ಮೀ. ಕಾಲ್ನಡಿಗೆ
ಬಸ್‌ ವ್ಯವಸ್ಥೆ ಇಲ್ಲದ ಕಾರಣ ಈ ಭಾಗದವರು 8 ಕಿ.ಮೀ. ದೂರದ ವರೆಗೆ ಖಾಸಗಿ ವಾಹನದಲ್ಲಿ ಮುಖ್ಯ ರಸ್ತೆಯ ಬದಿಗೆ ತಲುಪಿ ಅಲ್ಲಿಂದ ಬಸ್‌ ಹಿಡಿದು ತೆರಳಬೇಕು.

ನೆಂಟಸ್ಥಿಗೆ ಹಿಂದೆ ಮುಂದೆ ನೋಡುವ ಸ್ಥಿತಿ
ಹೊರ ಊರಿಗೆ ತೆರಳಿದವರು ಲೇಟಾಗಿ ರಾತ್ರಿ ಬಂದಲ್ಲಿ ಅವರನ್ನು ಕರೆದುಕೊಂಡು ಬರಲು, ಮನೆಮಂದಿ ಮುಖ್ಯ ರಸ್ತೆಗೆ ಹೋಗುವಂತಹ ಪರಿಸ್ಥಿತಿಯೂ ಕೆಲವು ಕಡೆ ಇದೆ. ಈ ಊರಿಗೆ ಸರಿಯಾದ ಬಸ್‌ ಸಂಚಾರ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ನೆಂಟಸ್ಥಿಗೆ ಬಯಸಲು ಬೇರೆ ಊರಿನವರು ಹಿಂದೆ ಮುಂದೆ ನೋಡುವ ಸ್ಥಿತಿ ಇದೆ ಒಂದೆರಡಾದರೂ ಬಸ್‌ ಬರುತ್ತಿದ್ದರೆ..

ಇಲ್ಲಿನ ಮಹಿಳೆಯರು ಮನೆಯಿಂದ ಬೇರೆ ಊರಿಗೆ ಹೋಗೋದಕ್ಕೂ ಹಿಂಜರಿಯುತ್ತಾರೆ. ಕೊನೆ ಪಕ್ಷ ದಿನಕ್ಕೆ ಒಂದೆರಡು ಬಾರಿಯಾದರೂ ಬಸ್‌ ಇರುತ್ತಿದ್ದರೆ, ನಾವು ಹೇಗಾದರು ಸಮಯ ಹೊಂದಿಸಿಕೊಂಡು ಹೋಗುತ್ತಿದ್ದೆವು. ಸಂಬಂಧಿಕರನ್ನು ಮರೆಯುವಷ್ಟರ ಮಟ್ಟಿಗೆ ಪ್ರಯಾಣದಲ್ಲಿ ತೊಂದರೆಯಾಗಿದೆ. ಮಹಿಳೆಯರಿಗೆ ಅಥವಾ ವೃದ್ಧರಿಗೆ ಏನಾದರೂ ಸಮಸ್ಯೆಯಾದರೆ ಆಗಲೂ ಸಮಸ್ಯೆ ಆಗುತ್ತಿದೆ ಎಂದು ಮಹಿಳೆಯೊಬ್ಬರು ಅಳಲು ತೋಡಿಕೊಂಡರು.

Advertisement

ಚುನಾವಣೆಯಲ್ಲಿ ಊರಿಗೆ ಮತ ಯಾಚನೆ ಬರುವವರು ಭರವಸೆ ನೀಡುತ್ತಾರೆ. ಆದರೆ ಅನಂತರದಲ್ಲಿ ಮರೆಯುತ್ತಾರೆ. ಈ ಭಾಗದ ಎಲ್ಲ ಜನಪ್ರತಿನಿಧಿಗಳು ಸರಕಾರಕ್ಕೆ ಒತ್ತಾಯ ತಂದು ಬಸ್‌ ವ್ಯವಸ್ಥೆ ಕಲ್ಪಿಸಬೇಕು ಎನ್ನುವುದು ಈ ಭಾಗದವರ ಆಗ್ರಹವಾಗಿದೆ.

ಆಟೋ, ಜೀಪ್‌ ಆಧಾರ
ಕಾರ್ಕಳ ತಾಲೂಕಿನ ನೂರಾಲ್‌ಬೆಟ್ಟು ಹಾಗೂ ಈದು ಗ್ರಾಮ ವ್ಯಾಪ್ತಿಯ ನಾಗರಿಕರು ಸಂಚಾರ ವ್ಯವಸ್ಥೆಯಲ್ಲಿ ನಾನಾ ವಿಧದ ತೊಂದರೆ ಎದುರಿಸುತ್ತಿದ್ದಾರೆ. ಇಲ್ಲಿ ಓಡಾಡಲು ಸರಕಾರಿ, ಖಾಸಗಿ ಬಸ್‌ ವ್ಯವಸ್ಥೆಗಳಿಲ್ಲದೆ, ಆಟೋ, ಜೀಪ್‌ ಇನ್ನಿತರ ವಾಹನಗಳನ್ನು ಅವಲಂಬಿಸಿದ್ದಾರೆ.

ಗ್ರಾಮಸ್ಥರಿಗೆ ಸಮಸ್ಯೆ
ನೂರಾಲ್‌ಬೆಟ್ಟು, ಕೊಡ್ಯೇ, ಗುಮ್ಮೆತ್ತು, ಮಾಪಾಲು, ಕನ್ಯಾಲ್‌, ಪೂಂಜಾಜೆ, ಕಲ್ಲೆಟ್ಟಿ, ಕುಕ್ಕುದಕಟ್ಟೆ, ಹೂರಬೆ, ಕೊಲ್ಲಂಜೆ, ಮಲ್ಲಂಜೆ, ಕೇರಪಲ್ಕೆ, ಗುಂಡಿ, ಬಟ್ಟೆನಿ, ಮಕ್ಕಿಲ, ಜಂಗೊಟ್ಟು, ಕರಿಂಬಿಯಾಲು, ಹೊಸ್ಮಾರು, ಒರಿಮಾರ್‌, ಗಂಗೆನೀರು, ಪೇರಲ್ಕೆ
ಮೊದಲಾದ ಗ್ರಾಮಸ್ಥರು ತೊಂದರೆ ಎದುರಿಸುತ್ತಿದ್ದಾರೆ. ಈ ಭಾಗದ ಜನವಸತಿ ಪ್ರದೇಶಗಳಿಗೆ ಸರಕಾರಿ ಬಸ್‌ ವ್ಯವಸ್ಥೆ ಹಿಂದಿ
ನಿಂದಲೂ ಇರಲಿಲ್ಲ. ಹಿಂದೆ ರಸ್ತೆ ಕೆಟ್ಟಿತ್ತು ಆಗ ಒಂದೆರಡು ಖಾಸಗಿ ಬಸ್‌ ಆದರೂ ಬರುತ್ತಿತ್ತು. ಅನಂತರ ಈ ಭಾಗದ ರಸ್ತೆಗಳು ಅಭಿವೃದ್ಧಿಗೊಂಡಿದ್ದರೂ ಹಿಂದಿದ್ದ ಬಸ್‌ ಕೂಡ ಈಗ ಬರುತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next