Advertisement
ಹರಿಹರ ಪಳ್ಳತ್ತಡ್ಕ ಗ್ರಾ.ಪಂ.ವ್ಯಾಪ್ತಿಯ ಬಾಳುಗೋಡು ಗ್ರಾಮದಲ್ಲಿ ಕೊತ್ನಡ್ಕ ಎಂಬ ಪ್ರದೇಶವಿದೆ. ತೀರಾ ಕುಗ್ರಾಮ ಎನಿಸಿದ ಇಲ್ಲಿ ವಿರಳ ಸಂಖ್ಯೆಯ ಮನೆಗಳಿವೆ. ಬಾಳುಗೋಡು ಪೇಟೆಯಿಂದ ಕಾಡು ದಾರಿಯ ಮೂಲಕ ಕಚ್ಚಾ ರಸ್ತೆಯಲ್ಲೇ ಇಲ್ಲಿಗೆ ಸಂಚರಿಸಬೇಕು. ಐದಾರು ಕಿ.ಮೀ. ದೂರದ ದಾರಿಯಲ್ಲಿ ಮಧ್ಯೆ ನದಿ ಹರಿಯುತ್ತದೆ. ಮಳೆಗಾಲ ಬಂತೆಂದರೆ ಈ ನದಿ ದಾಟುವುದೇ ಕಷ್ಟ.
ಅಂದು ಆರಂಭವಾದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಸೇತುವೆಗೆ ಹಾಕಿದ ಪಿಲ್ಲರ್ ಹಾಗೆಯೇ ಪಾಳುಬಿದ್ದಿದೆ. ಸೇತುವೆ ನಿರ್ಮಾಣಕ್ಕೆಂದು ತಂದು ಹಾಕಿದ್ದ ಸಾಮಗ್ರಿಗಳು ಕಾಣೆಯಾಗಿವೆ. ಪಿಲ್ಲರ್‌ಗೆ ಅಳವಡಿಸಿದ ಸಾಧನಗಳು ತುಕ್ಕು ಹಿಡಿದಿವೆ. ಗುತ್ತಿಗೆದಾರ ವರ್ಷದಿಂದ ಇತ್ತ ಕಡೆ ಸುಳಿದಿಲ್ಲ ಎಂದು ಊರವರು ಹೇಳುತ್ತಾರೆ.
Related Articles
Advertisement
ಕೇಳುವವರಿಲ್ಲವೇ?ಅನುದಾನ ಮಂಜೂರುಗೊಂಡರೂ ಸೇತುವೆ ಪೂರ್ಣವಾಗದೆ ಇರುವುದಕ್ಕೆ ಗುತ್ತಿಗೆದಾರ ಮಾತ್ರ ಕಾರಣವಾಗುವುದಿಲ್ಲ. ಅದಕ್ಕೆ ಸಂಬಂದಿಸಿದ ಇಲಾಖೆಯವರು ಕೂಡ ಕಾರಣರು. ಅಧಿಕಾರಿಗಳು ನಿದ್ರೆಗೆ ಜಾರಿರುವುದು ಈ ರೀತಿ ಕಾಮಗಾರಿ ನೇಪಥ್ಯಕ್ಕೆ ಸರಿಯಲು ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ತಾತ್ಕಾಲಿಕ ಸಂಕ
ಶಾಲಾ ಮಕ್ಕಳು, ನಾಗರಿಕರು ಈ ರಸ್ತೆಯ ಮೂಲಕ ನಿತ್ಯವೂ ಓಡಾಡುತ್ತಾರೆ. ನಿತ್ಯವೂ ತಮ್ಮ ಬೇಡಿಕೆಗಳನ್ನು ಈ ರಸ್ತೆ ಮೂಲಕವೇ ಸಂಚರಿಸಿ ಪೂರೈಸಿಕೊಳ್ಳುತ್ತಾರೆ. ಈ ಊರಿಗೆ ಖಾಸಗಿ ಜೀಪು ಹೊರತುಪಡಿಸಿ ಇನ್ಯಾವುದೇ ವಾಹನ ಸೌಲಭ್ಯ ಇಲ್ಲ. ಕಳೆದ ವರ್ಷ ಮಳೆಗಾಲ ರಸ್ತೆ ತುಂಬಿ ಹರಿದ ಕಾರಣ ಸ್ಥಳೀಯರು ಸೇರಿ ತಾತ್ಕಾಲಿಕ ಮರದ ತೂಗು ಸೇತುವೆ ನಿರ್ಮಿಸಿಕೊಂಡಿದ್ದರು. ಕಷ್ಟದಲ್ಲಿ ಮಳೆಗಾಲ ಕಳೆದಿದ್ದರು. ಮುಂದಿನ ವರ್ಷವಾದರೂ ಸೇತುವೆ ಕಾಮಗಾರಿ ಪೂರ್ಣಗೊಂಡು ಸಮಸ್ಯೆ ಪರಿಹಾರ ಕಾಣಬಹುದು ಎಂದುಕೊಂಡಿದ್ದರು. ಅವರ ನಿರೀಕ್ಷೆ ಈ ಬಾರಿಯೂ ಈಡೇರುವ ಲಕ್ಷಣಗಳು ಸದ್ಯ ಗೋಚರಿಸುತ್ತಿಲ್ಲ. ಅನುದಾನ ಸಾಲುತ್ತಿಲ್ಲ
ಅಲ್ಲಿ ಸೇತುವೆ ನಿರ್ಮಾಣಕ್ಕೆ ಈಗ ಶಾಸಕರು ನೀಡಿರುವ ಅನುದಾನ ಸಾಕಾಗುವುದಿಲ್ಲ. ಈಗ ದೊರಕಿದ ಅನುದಾನದಲ್ಲಿ ಪಿಲ್ಲರ್ ಕಾಮಗಾರಿ ಅಷ್ಟೆ ನಡೆದಿದೆ. ಪೂರ್ತಿಯಾಗಲು ಹೆಚ್ಚುವರಿ ಅನುದಾನ ಒದಗಿಸುವ ಕುರಿತು ಶಾಸಕರು ಹೇಳಿದ್ದರು. ಅದು ದೊರಕಿದಲ್ಲಿ ಮಾತ್ರ ಪೂರ್ತಿಯಾಗಬಹುದು. ಹೀಗಾಗಿ ಕಾಮಗಾರಿ ಲಭ್ಯ ಅನುದಾನದ ಹಂತಕ್ಕೆ ನಡೆದು ನಿಂತಿದೆ.
– ಹರೀಶ್ ಮೆದು,
ಜೂನಿಯರ್ ಎಂಜಿನಿಯರ್ ಶೀಘ್ರ ಆರಂಭವಾಗಬೇಕು
ಸೇತುವೆ ಮಂಜೂರಾಗಿ ಮೂರು ವರ್ಷಗಳು ಕಳೆದಿವೆ. ಇನ್ನೂ ಸೇತುವೆ ಕಾಮಗಾರಿ ಕುಂಟುತ್ತ ಇದೆ. ಅರ್ಧಕ್ಕೆ ಕಾಮಗಾರಿ ಸ್ಥಗಿತವಾಗಿದ್ದರಿಂದ ಸರಕಾರದ ಯೋಜನೆ ಹಳ್ಳ ಹಿಡಿದಿದೆ. ಸ್ಥಳೀಯರಾದ ನಾವು ಇನ್ನೂ ಸಮಸ್ಯೆ ಅನುಭವಿಸುತ್ತಲೇ ಇದ್ದೇವೆ. ಇನ್ನಾದರೂ ಕಾಮಗಾರಿ ಚುರುಕಾಗಿ ಮಳೆಗಾಲದ ಅವಧಿಯಲ್ಲಾದರೂ ಸೇವೆಗೆ ಸಿಗುವಂತಾಗಬೇಕು.
– ಹರೀಶ್ ಕಜೆಗದ್ದೆ
ಸ್ಥಳೀಯರು ಬಾಲಕೃಷ್ಣ ಭೀಮಗುಳಿ