Advertisement

ಬಯೋಬಬಲ್‌ ಮುಕ್ತ: ಭಾರತ-ದಕ್ಷಿಣ ಆಫ್ರಿಕಾ ಟಿ20 ಸರಣಿ

12:13 AM May 30, 2022 | Team Udayavani |

ಹೊಸದಿಲ್ಲಿ: ಮುಂಬರುವ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಟಿ20 ಸರಣಿಗೆ ಜೈವಿಕ ಸುರಕ್ಷ ವಲಯದ ನಿರ್ಬಂಧ ಇರುವುದಿಲ್ಲ.

Advertisement

ಇದು ಬಯೋಬಬಲ್‌ ಮುಕ್ತ ವಾತಾವರಣ ದಲ್ಲಿ ನಡೆಯಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜೈ ಶಾ ಹೇಳಿದ್ದಾರೆ ಎಂದು ವರದಿಯಾಗಿದೆ.

ಇದರೊಂದಿಗೆ 2020ರ ಕೊರೊನಾ ಮಹಾಮಾರಿ ಬಳಿಕ ಭಾರತ ತಂಡ ಮೊದಲ ಬಾರಿಗೆ ಜೈವಿಕ ಸುರಕ್ಷ ವಲ ಯದ ಹೊರಗಡೆ ಸರಣಿಯನ್ನು ಆಡಿ ದಂತಾಗುತ್ತದೆ.

ಕಳೆದ 4-5 ತಿಂಗಳಿಂದ ದೇಶದಲ್ಲಿ ಕೊರೊನಾ ಸಂಖ್ಯೆ ಗಣನೀಯ ಮಟ್ಟದಲ್ಲಿ ಕುಸಿದಿರುವುದನ್ನು ಗಮನಿಸಿ ನಿರ್ಬಂಧವನ್ನು ಸಡಿಲಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next