Advertisement
ಇದು ಕುಳ್ಳುಂಜೆ ಗ್ರಾಮದ ಶಂಕರನಾರಾಯಣ ಗ್ರಾ.ಪಂ. ವ್ಯಾಪ್ತಿಯ ಮಾವಿನಕೊಡ್ಲು ಬಳಿಯ ಕೋವಿನ ಗುಡ್ಡೆಯ ನಿವಾಸಿ ಶಾಂತಾ ಬಾಯಿ ಅವರ ಕಷ್ಟದ ಕಥೆ. ಈ ಗುಡಿಸಲಿನಲ್ಲಿ ಶಾಂತಾ ಬಾಯಿ ಅವರ ಪುತ್ರಿ ಸೀತಾ ಬಾಯಿ ಹಾಗೂ ಅವರ 8 ವರ್ಷದ ಪುತ್ರಿಯಿದ್ದಾರೆ. ಸೀತಾ ಅವರು ಕೂಲಿ ಕೆಲಸ ಮಾಡುತ್ತಿದ್ದು, ಇದೇ ಈ ಕುಟುಂಬದ ಒಪ್ಪೊತ್ತಿನ ಊಟಕ್ಕೆ ದಾರಿಯಾಗಿದೆ. ಎಲ್ಲೆಡೆ ಉತ್ತಮ ಮಳೆಯಾಗುತ್ತಿದ್ದು, ಈ ಮಳೆಗೆ ಆ ಗುಡಿಸಲಲ್ಲಿ ವಾಸಿಸುವುದೇ ಕಷ್ಟಕರವಾಗಿದೆ.
ಇವರೊಂದಿಗೆ ಹಸು, ನಾಯಿ, ಕೋಳಿ ಎಲ್ಲರಿದ್ದರೂ, ಸರಕಾರದಿಂದ ಮಾತ್ರ ಯಾವುದೇ ಸವಲತ್ತುಗಳು ಸಿಗುತ್ತಿಲ್ಲ.
2015-16 ನೇ ಸಾಲಿನಲ್ಲಿ ಅಂಬೇಡ್ಕರ್ ಯೋಜನೆಯಡಿ ಮನೆ ಮಂಜೂರಾಗಿದ್ದು, ಆದರೆ ಅದರ ಹಣ ಮನೆ ಕಟ್ಟಿದ ನಂತರ ಸಿಗುವುದರಿಂದ, ಇವರಿಗೆ ಅದಕ್ಕಿಂತ ಮೊದಲು ಮನೆ ಕಟ್ಟಿಕೊಳ್ಳಲು ಕೂಡ ಹಣವಿಲ್ಲದ ಸ್ಥಿತಿ.
ಶಾಂತಜ್ಜಿಗೆ ನೆರವಾಗಿ
ಶಾಂತಜ್ಜಿಗೆ ನೆರವು ನೀಡಲು ಬಯಸುವವರು ಅವರ ಪುತ್ರಿ ಸೀತಾ ಬಾಯಿ ಅವರ ಖಾತೆಗೆ ಹಣ ಕಳುಹಿಸಬಹುದು.
Seetha, sindicate bank shankara narayana branch. Account No. : 01322250002969, Ifse synb0000132 ಎಲ್ಲ ಸಹಕಾರ
ಮನೆ ಕಟ್ಟಿ ಕೊಡಲು ಅಲ್ಲಿಗೆ ಸ್ವತಹಃ ಭೇಟಿ ನೀಡಿ ಅವರ ಕಷ್ಟಗಳನ್ನು ಆಲಿಸಿದ್ದೇನೆ. ಶಾಸಕರಿಗೂ ನೆರವು ನೀಡಲು ಮನವಿ ಮಾಡಿಕೊಂಡಿದ್ದೇನೆ. ನಾವು ಹಾಗೂ ನಮ್ಮ ಸ್ನೇಹಿತರೆಲ್ಲ ನಮ್ಮಿಂದಾದಷ್ಟು ಹಣ ಹೊಂದಿಸಿ, ಮನೆ ಕಟ್ಟಿಕೊಡಲು ತೀರ್ಮಾನಿಸಿದ್ದೇವೆ. ಸಹೃದಯಿ ಮನಸ್ಸುಗಳು ನಮ್ಮೊಂದಿಗೆ ಕೈಜೋಡಿಸಬಹುದು.
– ಉಮೇಶ್ ಶೆಟ್ಟಿ ಕಲ್ಗದ್ದೆ ,
ಸ್ಥಳೀಯ ತಾ.ಪಂ. ಸದಸ್ಯರು
Related Articles
ಮಳೆಗಾಲದಲ್ಲಿ ಆ ಮನೆಯಲ್ಲಿರುವುದೇ ಕಷ್ಟವಾಗಿದೆ. ಆದರೆ ಬೇರೆ ದಾರಿಯಿಲ್ಲ. ಆನಿವಾರ್ಯ. ವರ್ಷ ವರ್ಷ ಓಟು ಕೇಳೊಕೆ ಬಂದವರೆಲ್ಲ ಮನೆ ಕಟ್ಟಿ ಕೊಡುತ್ತೇವೆ, ಸರಕಾರದಿಂದ ಸಿಗುವ ಎಲ್ಲ ಸವಲತ್ತು ಕೊಡಿಸುತ್ತೇವೆ ಎನ್ನುತ್ತಾರೆ. ಆದರೆ ಮತ್ತೆ ಮಾತ್ರ ಈ ಕಡೆಗೆ ಬರುವುದೇ ಇಲ್ಲ. ಈ ಬಾರಿ ಗೆದ್ದ ಸುಕುಮಾರ ಶೆಟ್ಟರಾದರೂ ಮನೆ ಕಟ್ಟಿಕೊಡಲು ನೆರವಾಗಬಹುದು.
– ಶಾಂತಾ ಬಾಯಿ, ಮಾವಿನಕೊಡ್ಲು
Advertisement