Advertisement

ವಿಶ್ವಸಂಸ್ಥೆಯಲ್ಲಿ ಹಿಂದಿಯಿಂದ ಯಾವುದೇ ಲಾಭವಿಲ್ಲ: ತರೂರ್‌

06:40 AM Jan 29, 2018 | Harsha Rao |

ಜೈಪುರ: ವಿಶ್ವಸಂಸ್ಥೆಯಲ್ಲಿ ಭಾರತದ ಅಧಿಕೃತ ಭಾಷೆ ಹಿಂದಿ ಎಂದು ಕೇಂದ್ರ ಸರ್ಕಾರ ದಾಖಲಿಸಲು ಪ್ರಯತ್ನಿಸುತ್ತಿದೆ. ಆದರೆ ವಿಶ್ವಸಂಸ್ಥೆಯಲ್ಲಿರುವ ಯಾರಿಗೂ ಹಿಂದಿ ಮಾತನಾಡಲು ಬಾರದು. ಇದರಿಂದ ಯಾವ ಪ್ರಯೋಜನವೂ ಇಲ್ಲ ಎಂದು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಹೇಳಿದ್ದಾರೆ. ಈ ಹಿಂದೆ ಹಿಂದಿಯನ್ನು ವಿಶ್ವಸಂಸ್ಥೆಯಲ್ಲಿ ಭಾರತದ ಅಧಿಕೃತ ಭಾಷೆ ಎಂದು ದಾಖಲಿಸುವ ಸಂಬಂಧ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಮತ್ತು ಶಶಿ ತರೂರ್‌ ಮಧ್ಯೆ ಲೋಕಸಭೆಯಲ್ಲಿ ವಾಗ್ವಾದ ನಡೆದಿತ್ತು.

Advertisement

ಈಗ ಮತ್ತೂಮ್ಮೆ ಈ ವಿಷಯವನ್ನು ಜೈಪುರ ಸಾಹಿತ್ಯ ಸಮ್ಮೇಳನದಲ್ಲಿ ಪ್ರಸ್ತಾಪಿಸಿದ ಶಶಿ ತರೂರ್‌, ಸರ್ಕಾರ ಇದಕ್ಕಾಗಿ 400 ಕೋಟಿ ರೂ. ವೆಚ್ಚ ಮಾಡಲು ತಯಾರಾಗಿದೆ. ಆದರೆ ಇದರಿಂದ ಭಾರತದ ಅಧಿಕಾರಿಗಳಿಗೇ ಕಷ್ಟವಾಗುತ್ತದೆ. ಅಲ್ಲದೆ ಹಲವು ನಾಯಕರು ದೇಶದ ವಿವಿಧ ಪ್ರದೇಶದವರಾಗಿರುತ್ತಾರೆ. ಉದಾಹರಣೆಗೆ ಮಾಜಿ ಸಚಿವ ಪಿ.ಚಿದಂಬರಂ ಮತ್ತು ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ ಅವರ ಮಾತೃಭಾಷೆ ಹಿಂದಿಯಲ್ಲ. ಇವರು ವಿಶ್ವಸಂಸ್ಥೆಯಲ್ಲಿ ಮಾತನಾಡುವ ಪ್ರಸಂಗ ಉಂಟಾದಾಗ ಕಷ್ಟವಾಗುತ್ತದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next