Advertisement
ಮೊಹಮ್ಮದ್ ನಲಪಾಡ್ ಸೇರಿ 8 ಮಂದಿ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು 63ನೇ ಸಿಸಿಎಚ್ ನ್ಯಾಯಾಲಯ ವಜಾಗೊಳಿಸಿ ತೀರ್ಪು ನೀಡಿದೆ. ಜಾಮೀನು ಅರ್ಜಿಯ ಕುರಿತು ಸಾಕಷ್ಟು ವಾದ- ಪ್ರತಿವಾದಗಳ ಬಳಿಕೆ ತೀರ್ಪು ಕಾಯ್ದಿಟ್ಟಿದ್ದ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಶುಕ್ರವಾರ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿ ಆದೇಶ ಪ್ರಕಟಿಸಿದರು. ಜಾಮೀನು ಮಂಜೂರು ಮಾಡದಿರುವ ಅಧೀನ ನ್ಯಾಯಾಲಯದ ಆದೇಶದ ವಿರುದ್ಧ ಆರೋಪಿಗಳ ಪರ ವಕೀಲರಾದ ಟಾಮಿ ಸೆಬಾಸ್ಟಿನ್ ಹಾಗೂ ಬಾಲನ್ ಶನಿವಾರ ಅಥವಾ ಸೋಮವಾರ ಹೈಕೋರ್ಟ್‌ನಲ್ಲಿ ಜಾಮೀನಿಗಾಗಿ ಮೇಲ್ಮನವಿ ಸಲ್ಲಿಸಲಿದ್ದಾರೆ.
Related Articles
Advertisement
ಫೆ.17ರಂದು ರಾತ್ರಿ ಯುಬಿ ಸಿಟಿಯ ಫರ್ಜಿ ಕೆಫೆಯಲ್ಲಿ ವಿದ್ವತ್ ಮೇಲೆ ಮೊಹಮ್ಮದ್ ನಲಪಾಡ್ ಹಾಗೂ ಇತರರು ಹಲ್ಲೆ ನಡೆಸಿದ್ದರು. ಬಳಿಕ ಕೆಫೆಯ ಕಾರು ಪಾರ್ಕಿಂಗ್‌ನಲ್ಲಿ ಹಲ್ಲೆಗೈದಿದ್ದು, ಆಸ್ಪತ್ರೆಗೆ ಹೋಗಿ ಧಮ್ಕಿ ಹಾಕಿದ್ದರು. ಅನಂತರ ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಮೊಹಮ್ಮದ್ ನಲಪಾಡ್ ಫೆ.19ರಂದು ಠಾಣೆಗೆ ಶರಣಾಗಿದ್ದು, ಇತರೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಜಾಮೀನು ನೀಡುವ ಕೇಸು ಇದಲ್ಲಜಾಮೀನು ಅರ್ಜಿ ತಿರಸ್ಕೃತ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸರ್ಕಾರಿ ವಿಶೇಷ ಅಭಿಯೋಜಕ ಶ್ಯಾಮ್‌ಸುಂದರ್, ವಿದ್ವತ್ ಮೇಲೆ ಗಂಭೀರ ಗಾಯಗಳಾಗಿವೆ. ವೈದ್ಯಕೀಯ ಪರೀûಾ ವರದಿ ಕೂಡ ಸಲ್ಲಿಸಿದ್ದೇವೆ. ಹೀಗಾಗಿ ಜಾಮೀನು ಕೊಡುವ ಕೇಸ್ ಇದಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯ ಪಟ್ಟು ತೀರ್ಪು ನೀಡಿದ್ದಾರೆ. ಈ ತೀರ್ಪು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುತ್ತದೆ. ನನಗೂ ಸಂತೋಷವಾಗಿದೆ ಎಂದರು. ಪ್ರಕರಣದಲ್ಲಿ ಸಾರಾಂಶ ಇಲ್ಲದಿದ್ದರೂ ಮಾಧ್ಯಮಗಳು ಪ್ರಕರಣವನ್ನು ದೊಡ್ಡದು ಮಾಡಿದ್ದವು. ಇದು ತೀರ್ಪಿನ ಮೇಲೆ ಪ್ರಭಾವ ಬೀರಿರಬಹುದು. ಇನ್ನು ಫೆ.28ರಂದು ಆಸ್ಪತ್ರೆ ವೈದ್ಯರು ವಿದ್ವತ್‌ನನ್ನು ಡಿಸಾcರ್ಜ್ ಮಾಡುತ್ತೇವೆ ಎಂದರೂ ರೋಗಿ ಕಡೆಯವರು ಹೋಗಲ್ಲ ಎಂದಿದ್ದಾರೆ. ಅನಗತ್ಯವಾಗಿ ಆಸ್ಪತ್ರೆಯಲ್ಲಿ ಉಳಿದುಕೊಂಡಿದ್ದಾರೆ. ಇದನ್ನೆ ಎಸ್‌ಪಿಪಿ ವಾದ ಮಂಡಿಸಿ ಜಾಮೀನು ನೀಡಬಾರದು ಎಂದು ವಾದಿಸಿದ್ದರು. ಹೀಗಾಗಿ ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಲಿದ್ದೇವೆ ಎಂದು ಮೊಹಮ್ಮದ್ ಪರ ವಕೀಲ ಟಾಮಿ ಸೆಬಾಸ್ಟಿನ್ ಪ್ರತಿಕ್ರಿಯಿಸಿದರು. ಮೊಹಮ್ಮದ್ ಹೊರತು ಪಡಿಸಿ ಇತರೆ ಆರೋಪಿಗಳ ಪರ ವಕೀಲ ಬಾಲನ್ ಮಾತನಾಡಿ, ಈ ಪ್ರಕರಣದಲ್ಲಿ ಜಾಮೀನು ನೀಡಿದರೆ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂದು ಎಸ್‌ಪಿಪಿ ವಾದಿಸುತ್ತಾರೆ. ಇದು ಸುಳ್ಳು. ಬೆಂಗಳೂರಿನಲ್ಲಿ ಏನೇನೋ ನಡೆಯುತ್ತೆ. ಎಷ್ಟು ಜನ ನೀರು, ಊಟ ಇಲ್ಲದೇ ಸಾಯುತ್ತಾರೆ. ಅದು ಸಮಾಜಕ್ಕೆ ಕೆಟ್ಟ ಸಂದೇಶ ಬೀರುವುದಿಲ್ಲವೇ?. ಹಣವಂತರು ಕಾರ್ಪೋರೇಟ್ ಆಸ್ಪತ್ರೆಯಲ್ಲಿ ದಾಖಲಾಗಿ, ಪ್ರಾಸಿಕ್ಯೂಷನ್ ಹಾಗೂ ಪೊಲೀಸರನ್ನು ಮ್ಯಾನೇಜ್ ಮಾಡಿದರೆ ಯಾರನ್ನು ಬೇಕಾದರೂ ಜೈಲಿಗೆ ಕಳುಹಿಸಬಹುದು ಎಂಬ ಸಂದೇಶ ಸಮಾಜಕ್ಕೆ ಸಿಕ್ಕಿದೆ. ವಿದ್ವತ್ ಕಾರ್ಪೋರೇಟ್ ಆಸ್ಪತ್ರೆ ಹೊರತು ಪಡಿಸಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ ಸತ್ಯಾಂಶ ಬೆಳಕಿಗೆ ಬರುತ್ತಿತ್ತು. ಕಾಲು ಮುರಿದು ಕೊಂಡಿರುವ ವಿದ್ವತ್ ಕೆಫೆಯ 8ನೇ ಮಹಡಿಗೆ ಹೋಗಿ ಮದ್ಯ ಏಕೆ ಸೇವಿಸಬೇಕು. ಯಾರು ಸ್ಕ್ರಿಪ್ಟ್ ಬರೆಯುತ್ತಾರೆ. ಅದ್ಕಕೆ ಸ್ಪಲ್ಪ ಲೇಪನ ಮಾಡಿ ಎಸ್‌ಪಿಪಿ ವಾದಿಸಿದ್ದಾರೆ. ಇದೊಂದು ಸಣ್ಣ ಪ್ರಕರಣ ಮಾಧ್ಯಮಗಳಿಂದ ದೊಡ್ಡದಾಗಿದೆ ಅಷ್ಟೇ. ಸೆ.307ರ ಪ್ರಕರಣದಲ್ಲಿ ಜಾಮೀನು ನೀಡಬಹುದು ಎಂದರು.