ಮುಂಬಯಿ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆಯನ್ನು ಬಾಂಬೆ ಸೆಷನ್ ಕೋರ್ಟ್ ಮಂಗಳವಾರ(ಅಕ್ಟೋಬರ್ 26) ಅಕ್ಟೋಬರ್ 27ಕ್ಕೆ ಮುಂದೂಡಿದೆ.
ಇದನ್ನೂ ಓದಿ:ಆಸ್ಕರ್ ನಲ್ಲಿ ಭಾರತವನ್ನು ಪ್ರತಿನಿಧಿಸಲಿದೆ ತಮಿಳಿನ “ಕೂಳಾಂಗಲ್” ಸಿನಿಮಾ
ಬಾಂಬೆ ಸೆಷನ್ ಕೋರ್ಟ್ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆಯನ್ನು ಬುಧವಾರ (ಅ.27) ಮಧ್ಯಾಹ್ನ 2.30ಕ್ಕೆ ನಡೆಸುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ. ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿರುವ ಆರ್ಯನ್ ಖಾನ್ ಜಾಮೀನು ಅರ್ಜಿ ಪರವಾಗಿ ವಾದಿಸಲು ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಹಾಜರಾಗಿದ್ದರು.
ಆರ್ಯನ್ ಜಾಮೀನು ಪರ ವಾದಿಸಿದ ರೋಹ್ಟಗಿ, ಆರ್ಯನ್ ಖಾನ್ ನನ್ನು ಹಡಗಿನಲ್ಲಿ ನಡೆದ ಪಾರ್ಟಿಗೆ ವಿಶೇಷ ಅತಿಥಿಯನ್ನಾಗಿ ಆಹ್ವಾನಿಸಲಾಗಿತ್ತು. ಪ್ರತೀಕ್ ಗಾಬಾ ಆರ್ಯನ್ ನನ್ನು ಆಹ್ವಾನಿಸಿದ್ದ. ಅರ್ಬಾಝ್ ನನ್ನು ಕೂಡಾ ಗಾಬಾನೇ ಆಹ್ವಾನಿಸಿದ್ದ ಎಂದು ರೋಹ್ಟಗಿ ಕೋರ್ಟ್ ನಲ್ಲಿ ವಾದಿಸಿದ್ದರು.
ಮಾಹಿತಿಯ ಮೇರೆಗೆ ಎನ್ ಸಿಬಿ ಅಧಿಕಾರಿಗಳು ಹಡಗಿನೊಳಗೆ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಆರ್ಯನ್ ಖಾನ್ ಬಳಿ ಎನ್ ಸಿಬಿ ಅಧಿಕಾರಿಗಳಿಗೆ ಯಾವುದೇ ವಸ್ತು ಸಿಕ್ಕಿರಲಿಲ್ಲವಾಗಿತ್ತು. ಆದರೂ ಆರ್ಯನ್ ಮತ್ತು ಅರ್ಬಾಝ್ ನನ್ನು ಬಂಧಿಸಲಾಗಿದೆ. ಆರ್ಯನ್ ಡ್ರಗ್ಸ್ ಸೇವನೆ ಮಾಡಿದ್ದಾನೆ ಎಂಬುದಕ್ಕೆ ಯಾವುದೇ ವೈದ್ಯಕೀಯ ಪರೀಕ್ಷೆಯನ್ನೂ ನಡೆಸಿಲ್ಲ ಎಂದು ರೋಗ್ಟಗಿ ಆರೋಪಿಸಿದರು.