ನವದೆಹಲಿ: ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ತಾನು ಮಾಡಿರುವ ಟ್ವೀಟ್ ಅನ್ನು ಡಿಲೀಟ್ ಮಾಡುವುದಿಲ್ಲಾ ಹಾಗೂ ಕ್ಷಮೆಯನ್ನೂ ಕೇಳಲ್ಲ, ದಂಡವನ್ನೂ ಪಾವತಿಸಲ್ಲ ಎಂದು ಸ್ಟ್ಯಾಂಡ್ ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ಪ್ರತಿಕ್ರಿಯೆ ನೀಡಿದ್ದಾರೆ.
ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿದ ನಂತರ ಕುನಾಲ್ ಸುಪ್ರೀಂಕೋರ್ಟ್ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಗಳನ್ನು ಮಾಡಿದ್ದರು.
ಸುಪ್ರೀಂಕೋರ್ಟ್ ನ ಫೋಟೊಸಾಪ್ಡ್ ಚಿತ್ರವನ್ನು ಶೇರ್ ಮಾಡಿ, ಇದು ದೇಶದ ಅತೀ ದೊಡ್ಡ ಜೋಕ್ ಎಂದು ಅಪಹಾಸ್ಯ ಮಾಡಿದ್ದರು. ಕುನಾಲ್ ಟ್ವೀಟ್ ವೈರಲ್ ಆಗಿ, ನೆಟ್ಟಿಗರೆಲ್ಲ ಕಾಮ್ರಾ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದರು.
ಈ ಹಿನ್ನೆಲೆಯಲ್ಲಿ ಕಾಮ್ರಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕೆಂದು ಸಲ್ಲಿಕೆಯಾಗಿದ್ದ ಮನವಿಗೆ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಗುರುವಾರ ಒಪ್ಪಿಗೆ ನೀಡಿದ್ದರು.
ನ್ಯಾಯಾಂಗ ನಿಂದನೆ ದಾಖಲಿಸಲು ವೇಣುಗೋಪಾಲ್ ಅವರು ಒಪ್ಪಿಗೆ ಸೂಚಿಸಿದ ನಂತರ ಈ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಕುನಾಲ್, ನಾನು ನನ್ನ ಟ್ವೀಟ್ ಅನ್ನು ಡಿಲೀಟ್ ಮಾಡುವುದಿಲ್ಲ, ಕ್ಷಮೆಯಾಚಿಸುವುದಿಲ್ಲ. ವಕೀಲರು ಇಲ್ಲ, ದಂಡ ಪಾವತಿಯೂ ಉಲ್ಲ, ಜಾಗ(ಟ್ವೀಟ್)ವನ್ನು ಹಾಳು ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.