Advertisement

ಭೂ ಕಾಯ್ದೆ ತಿದ್ದುಪಡಿ ಬೇಡ

04:57 AM Jun 25, 2020 | Lakshmi GovindaRaj |

ಹುಣಸೂರು: ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ತಾಪಂ ಆವರಣದಲ್ಲಿ ಜಮಾವಣೆ ಗೊಂಡ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ  ಕಾರ್ಯಕರ್ತರನ್ನು ಉದ್ದೇಶಿಸಿ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್‌ ಮಾತನಾಡಿ, ಉಳ್ಳವರು ಮಾತ್ರ ಭೂಮಿ ಪಡೆಯಬಹುದಾದ ಈ ಕಾಯ್ದೆ ಜನ-ರೈತ ವಿರೋಧಿಯಾಗಿದೆ. ಸು

Advertisement

ಗ್ರೀವಾಜ್ಞೆ ಮೂಲಕ ಜಾರಿಗೆ ತರಲು ಹೊರಟಿರುವ ಸರಕಾರದ ನಿರ್ಧಾರದಿಂದಾಗಿ ಸಣ್ಣ ಹಿಡುವಳಿದಾರರು ಬೀದಿಗೆ ಬೀಳಲಿದ್ದಾರೆ. ಉದ್ಯೋಗಕ್ಕಾಗಿ ವಲಸೆ ಹೋಗುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದರು. ಉಳುವವನೇ ಭೂ ಒಡೆಯ ಎಂಬ ಕಾನೂನನ್ನು ಜಾರಿಗೆ ತಂದ ದೇವರಾಜ  ಅರಸರ ಈ ನಾಡಲ್ಲಿ, ರೈತರ ಹೆಸರಿನಲ್ಲಿ ಅಧಿಕಾರಕ್ಕೇರಿದ ಮುಖ್ಯಮಂತ್ರಿ ಯಡಿಯೂರಪ್ಪ ಇಂತಹ ರೈತ ವಿರೋಧಿ ಕಾಯ್ದೆ ತಿದ್ದುಪಡಿಗೆ ತರುವುದನ್ನು ಸದನದಲ್ಲಿ ಹೋರಾಟ ನಡೆಸುವ ಜೊತೆಗೆ ನಿಮ್ಮ ಪಕ್ಷ ರೈತರೊಂದಿಗೆ  ನಿಲ್ಲಬೇಕೆಂದು ಮನವಿ ಮಾಡಿದರು.

ಬಳಿಕ ಶಾಸಕ ಮಂಜುನಾಥ್‌ ಗೆ ಮನವಿ ಸಲ್ಲಿಸಿದರು. ಸಂಘದ ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ಪ್ರಧಾನ ಕಾರ್ಯದರ್ಶಿ ರಾಮೇಗೌಡ, ವಿಷಕಂಠಪ್ಪ, ರಾಮಕೃಷ್ಣೇಗೌಡ, ಬಸವರಾಜೇಗೌಡ,  ಸೋಮಶೇಖರ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next