Advertisement

ಜೆಡಿಎಸ್ ಜೊತೆ ಮೈತ್ರಿ ಇಲ್ಲ, ಕಾಂಗ್ರೆಸ್ ಸರ್ಟಿಫಿಕೇಟ್ ಬೇಕಿಲ್ಲ: ಅಸಾದುದ್ದೀನ್ ಓವೈಸಿ

04:12 PM Oct 25, 2022 | Team Udayavani |

ವಿಜಯಪುರ: ಮುಂಬರುವ 2023 ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಇಲ್ಲ ಎಂದು ಸ್ಪಷ್ಟಪಡಿಸಿರುವ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ, ನಮ್ಮನ್ನು ಬಿಜೆಪಿ ಬಿ ಟೀಂ ಎಂದು ಟೀಕಿಸುವ ಕಾಂಗ್ರೆಸ್ ನಾಯಕರಿಂದ ನಾನು ಕಲಿಯುವುದೇನು ಇಲ್ಲ. ಹೀಗಾಗಿ ನಮಗೆ ಕಾಂಗ್ರೆಸ್ ಸರ್ಟಿಫಿಕೇಟ್ ಬೇಕಿಲ್ಲ ಎಂದು ತಿರುಗೇಟು ನೀಡಿದ್ದಾರೆ.

Advertisement

ಮಂಗಳವಾರ ನಗರದಲ್ಲಿ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳದೆ, ಕರ್ನಾಟಕದಲ್ಲಿ ಸ್ವತಂತ್ರವಾಗಿ ಎಐಎಂಐಎಂ ಅಭ್ಯರ್ಥಿಗಳನ್ನು ಕಣಕ್ಕಿಸಲಾಗಿತ್ತದೆ‌ ಎಂದರು.

ಕಳೆದ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ನ ಕುಮಾರಸ್ವಾಮಿ ಪರವಾಗಿ ಕೇವಲ ಪ್ರಚಾರ ಮಾಡಲಾಗಿತ್ತೇ ಹೊರತು, ನಮ್ಮ ಪಕ್ಷ ಜೆಡಿಎಸ್ ಜೊತೆ ಆಗಲೂ ಮೈತ್ರಿ ಮಾಡಿಕೊಂಡಿರಲಿಲ್ಲ ಎಂದು ಸಮಜಾಯಿಶಿ ನೀಡಿದರು.

ಎಐಎಂಐಎಂ ಪಕ್ಷ ಬಿಜೆಪಿ ಬಿ ಟೀಂ ಎಂಬ ಕಾಂಗ್ರೆಸ್ ಟೀಕೆಗೆ ನಾನು ಪ್ರತಿಕ್ರಿಯಿಸುವ ಅಗತ್ಯವಿಲ್ಲ. ನಮ್ಮ ಪಕ್ಷ ಬಿಜೆಪಿ ಟೀಂ ಅಲ್ಲ, ನಮ್ಮ ಪಕ್ಷದ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಕಾಂಗ್ರೆಸ್ ನ ಸದ್ಯದ ದುಸ್ಥಿತಿಗೆ ಆ ನಾಯಕರು ಕಾರಣರೇ ಹೊರತು ನಾವಲ್ಲ. ಕಾಂಗ್ರೆಸ್ ದೇಶದಲ್ಲಿ ಹೀನಾಯ ಸ್ಥಿತಿಗೆ ಬರಲು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ಕಳಪೆ ಹಾಗೂ ದುರ್ಬಲ ನಾಯಕತ್ವ ಕಾರಣ. ಹೀಗಾಗಿ ನಮಗೆ ಕಾಂಗ್ರೆಸ್ ಪಕ್ಷದ ಸರ್ಟಿಫಿಕೇಟ್ ಬೇಕಾಗಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಇದನ್ನೂ ಓದಿ:ರಿಷಿ ಸುನಕ್‌ ಬ್ರಿಟನ್‌ ಪ್ರಧಾನಿ: ಬಿಜೆಪಿ ಮತ್ತು ಪ್ರತಿಪಕ್ಷಗಳ ಟ್ವೀಟ್ ಸಮರ ತೀವ್ರ

Advertisement

ಕರ್ನಾಟಕ, ಗುಜರಾತ್, ಮಧ್ಯಪ್ರದೇಶ ರಾಜ್ಯಗಳ ಕಾಂಗ್ರೆಸ್ ಶಾಸಕರು ಓಡಿ ಹೋಗಿದ್ದಾರೆ. ಅಮೇಥಿಯಲ್ಲಿ ರಾಹುಲ್ ಗಾಂಧಿ ಸೋತರೇ ನಾನು ಜವಾಬ್ದಾರಿ ಹೊರಬೇಕೆ, ರಾಜಸ್ಥಾನದ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಸಂಘರ್ಷಕ್ಕೆ ಯಾರು ಕಾರಣ. ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ ಕಾಂಗ್ರೆಸ್ ದುರ್ಬಲ ನಾಯಕತ್ವದಿಂದ ದೇಶದಲ್ಲಿ ನರೇಂದ್ರ ಮೋದಿ ಎರಡು ಬಾರಿ ಪ್ರಧಾನಿಯಾಗಲು ಅನುವಾಗಿದೆ ಎಂದು ಹರಿ ಹಾಯ್ದರು.

ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದವೂ ವಾಗ್ದಾಳಿ ನಡೆಸಿದ ಓವೈಸಿ, ನಮ್ಮ ಬಾಯಲ್ಲಿ ಪಾಕಿಸ್ತಾನದ ಹೆಸರು ಕೂಡ ಬರುವುದಿಲ್ಲ. ಆದರೆ ಶಾಸಕ ಯತ್ನಾಳ ಪದೇ ಪದೇ ಪಾಕಿಸ್ತಾನದ ಹೆಸರು ಉಲ್ಲೇಖ ಮಾಡುವ ಮೂಲಕ ಭಾರತದ ಶತ್ರು ರಾಷ್ಟ್ರದ ಮೇಲೆ ತಮಗಿರುವ ಪ್ರೀತಿಯನ್ನು ಮನವರಿಕೆ ಮಾಡಿಕೊಡುತ್ತಿದ್ದಾರೆ.

ಪಾಕಿಸ್ತಾನ ಮೇಲೆ ಅಷ್ಟೊಂದು ಪ್ರೀತಿ ಏಕೆಂದು ಅವರೇ ಹೇಳಬೇಕು. ಪದೇ ಪದೇ ಪಾಕಿಸ್ತಾನದ ಹೆಸರು ಪ್ರಸ್ತಾಪಿಸುವ ಪ್ರಧಾನಿ ಮೋದಿ ಅವರೇ ಯತ್ನಾಳ ಅವರಿಗೆ ಅದನ್ನು ಹೇಳಿ‌ ಕೊಟ್ಟಿರಬಹುದು ಎಂದು ಛೇಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next