ಬೆಂಗಳೂರು: ಜಕ್ಕೂರು ವಾಯುನೆಲೆಯಲ್ಲಿ ನ್ಯಾಯಪೀಠದ ಅನುಮತಿ ಪಡೆದುಕೊಳ್ಳದೇ ವೈಮಾನಿಕ ಹಾರಾಟ ಹೊರತುಪಡಿಸಿ, ಬೇರೆ ಯಾವುದೇ ಚಟುವಟಿಕೆ ನಡೆಸುವಂತಿಲ್ಲ ಎಂದು ರಾಜ್ಯಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತು.
ವಾಯುನೆಲೆಯ ರನ್‌ವೇಯಲ್ಲಿ ಖಾಸಗಿ ಕಂಪೆನಿಯೊಂದು ಡ್ರ್ಯಾಗ್‌ರೇಸ್ ಆಯೋಜಿಸಲು ನಡೆಸಲು ಕ್ರೀಡಾ ಇಲಾಖೆ ಅನುಮತಿ ನೀಡಿದ ಕ್ರಮ ಪ್ರಶ್ನಿಸಿ ಅಗ್ನಿ ಏರೋ ನ್ಪೋರ್ಟ್ಸ್ ಅವೆಂಚರ್ ಅಕಾಡೆಮಿ ಹಾಗೂ ವಕೀಲ ಕ್ಯಾಪ್ಟನ್ ಅರವಿಂದ ಶರ್ಮಾ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಎ.ಎಸ್ ಬೋಪಣ್ಣ ಅವರಿದ್ದ ಏಕಸದಸ್ಯ ಸೋಮವಾರ ವಿಚಾರಣೆ ನಡೆಸಿತು.
ಸರ್ಕಾರ ಹಾಗೂ ಅರ್ಜಿದಾರರ ಪರ ವಕೀಲ ಕ್ಯಾ.ಅರವಿಂದ ಶರ್ಮಾ ವಾದಿಸಿ, ವಾಯುನೆಲೆಯ ರನ್‌ವೇಯಲ್ಲಿ ನಡೆದರೇ ರನ್‌ವೇ ಹಾಳಾಗಲಿದ್ದು ವಿಮಾನಯಾನಕ್ಕೆ ತೊಂದರೆಯಾಗಲಿದೆ. ವಿಮಾನ ಹಾರಾಟಕ್ಕೂ ಕಷ್ಟವಾಗಲಿದೆ. ಹೀಗಾಗಿ ಯಾವುದೇ ಸ್ಪರ್ಧೆ ನಡೆಸಲು ಅನುಮತಿ ನೀಡದಂತೆ ನ್ಯಾಯಪೀಠಕ್ಕೆ ಕೋರಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರು ವಾಯುನೆಲೆಯಲ್ಲಿ ಡ್ಯಾ†ಗ್ ರೇಸ್ ನಡೆಸಲು ಅನುಮತಿ ನೀಡಿರುವ ಬಗ್ಗೆ ಹಲವು ಆಕ್ಷೇಪಣೆಗಳನ್ನು ಎತ್ತಿದೆ. ಹೀಗಾಗಿ ನ್ಯಾಯಪೀಠದ ಅನುಮತಿ ಇಲ್ಲದೇ ರನ್‌ವೇಯಲ್ಲಿ ವೈಮಾನಿಕ ಚಟುವಟಿಕೆಗಳನ್ನು ಹೊರತುಪಡಿಸಿ, ಬೇರೆ ಯಾವುದೇ ರೀತಿಯ ರೇಸ್, ಅಥವಾ ಚಟುವಟಿಕೆಗಳನ್ನು ನಡೆಸಲು ಅನುಮತಿ ನೀಡಬಾರದು ಎಂದು ಪ್ರತಿವಾದಿಗಳಾದ ಯುವಜನ ಸೇವೆ ಹಾಗೂ ಕ್ರೀಡಾ ಇಲಾಖೆ ಕಾರ್ಯದರ್ಶಿ, ಜಕ್ಕೂರು ವಾಯುನೆಲೆ ನಿರ್ದೇಶಕರಿಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.
ನ್ಯಾಯಪೀಠದ ಅನುಮತಿಯಿಲ್ಲದೆ ವೈಮಾನಿಕ ಹಾರಾಟ ಹೊರತುಪಡಿಸಿ ಉಳಿದ ಚಟುವಟಿಕೆಗಳನ್ನು ನಡೆಸಬಾರದು ಎಂದು ನ್ಯಾಯಪೀಠ ತಿಳಿಸಿದೆ. ಜೊತೆಗೆ ಅರ್ಜಿದಾರರ ಅಕಾಡೆಮಿ ಪ್ರತಿ ಸೋಮವಾರ ಹಾಗೂ ಮಂಗಳವಾರ ವೈಮಾನಿಕ ಚಟುವಟಿಕೆಗಳನ್ನು ನಡೆಸಲು ನಿಬಂìಧವನ್ನು ರದ್ದುಪಡಿಸಿ, ಅನುಮತಿ ನೀಡಿದೆ ಎಂದು ವಕೀಲ ಕ್ಯಾ.ಅರವಿಂದ ಶರ್ಮಾ ತಿಳಿಸಿದರು