Advertisement

ಶತ ಪ್ರತಿಶತ ಪರಿಪೂರ್ಣತೆ ಎಂಬುದಿಲ್ಲ!

12:56 AM Sep 11, 2020 | mahesh |

ಬೆಟ್ಟದ ಮೇಲಿದ್ದ ಆ ಝೆನ್‌ ಗುರುವಿನ ಆಶ್ರಮಕ್ಕೆ ಅಂದು ಅತಿಥಿಗಳು ಬರುವ ವರಿದ್ದರು. ಹಿಂದಿನ ದಿನದಿಂದಲೇ ಸಂಭ್ರಮ ಮನೆ ಮಾಡಿತ್ತು. ಶಿಷ್ಯರೆಲ್ಲ ತಯಾರಿಯಲ್ಲಿ ತೊಡಗಿ ಅತ್ತಿಂದಿತ್ತ ಓಡಾಡುತ್ತಿದ್ದರು. ಒಬ್ಬ ಹಿರಿಯ ಶಿಷ್ಯ ಆಶ್ರಮದ ಮುಂದಿನ ಹೂದೋಟದತ್ತ ಬಂದ.

Advertisement

ಅವನು ಗಿಡಗಳನ್ನು ಏಕಪ್ರಕಾರವಾಗಿ ಕತ್ತರಿಸಿ ಚೆಂದಗೊಳಿಸಿದ. ಹುಲ್ಲುಹಾಸನ್ನು ಸವರಿ ಸುಂದರವಾಗಿಸಿದ. ಗೋಡೆಯಲ್ಲಿ ಬೆಳೆದಿದ್ದ ಹಾವಸೆಯನ್ನು ಕೆತ್ತಿ ನುಣುಪು ಗೊಳಿಸಿದ. ಶರತ್ಕಾಲವಾದ್ದರಿಂದ ಗಿಡಗಳ ಎಲೆಗಳು ಉದುರಿದ್ದವು. ಅವುಗಳನ್ನೆಲ್ಲ ಒಟ್ಟುಗೂಡಿಸಿ ಮೂಲೆಯಲ್ಲಿ ಬೆಂಕಿ ಹಚ್ಚಿ ಬೂದಿಯನ್ನೂ ಹೊರಕ್ಕೊಯ್ದು ಹಾಕಿದ. ಒಟ್ಟಿನಲ್ಲಿ ಹೂದೋಟ ಶುಭ್ರವಾಯಿತು.

ಎಲ್ಲ ಕೆಲಸಗಳನ್ನೂ ಮುಗಿಸಿ ಬೆನ್ನು ನೇರ ಗೊಳಿಸಿದಾಗ ಗೋಡೆಯ ಆಚೆಬದಿಯಿಂದ ಝೆನ್‌ ಗುರು ಎಲ್ಲವನ್ನೂ ವೀಕ್ಷಿಸುತ್ತಿದ್ದುದು ಶಿಷ್ಯನಿಗೆ ಕಾಣಿಸಿತು. “ಚೆಂದವಾಯಿತಲ್ಲವೆ ಗುರುಗಳೆ’ ಎಂದು ಪ್ರಶ್ನಿಸಿದ ಶಿಷ್ಯ.

“99 ಪ್ರತಿಶತ ಸುಂದರ ವಾಗಿದೆ. ಒಂದಂಶದಷ್ಟು ಏನೋ ಕೊರತೆ ಕಾಣಿಸು ತ್ತಿದೆ’ ಎಂದರು ಗುರುಗಳು. ಮುಂದುವರಿಸಿ, “ಸ್ವಲ್ಪ ಸಹಾಯ ಮಾಡಿದರೆ ಆಚೆ ಬಂದು ಕೊರತೆಯನ್ನು ಸರಿ ಪಡಿಸಿ ಕೊಡುತ್ತೇನೆ’ ಎಂದರು.

ಶಿಷ್ಯ ವೃದ್ಧ ಗುರುವಿನ ಕೈಹಿಡಿದು ನಡೆಸಿ ಕೊಂಡು ಬಂದ. ಹೂದೋಟದ ನಡುವಿಗೆ ಬಂದ ಗುರುಗಳು ಅಲ್ಲಿದ್ದ ಮೇಫ್ಲವರ್‌ ಗಿಡದ ಬುಡವನ್ನು ಹಿಡಿದು ಗಲಗಲ ಅಲ್ಲಾಡಿಸಿದರು. ಹಳದಿ, ಕೆಂಪು, ಕಂದು… ಒಣಗಲು ಎಲೆಗಳು ಉದುರಿ ಎಲ್ಲೆಡೆ ಹರಡಿ ಬಿದ್ದವು.

Advertisement

ಈಗ ಗುರುಗಳು ಹೇಳಿದರು, “ಆಹ್‌… ಈಗಾದರೆ ಪರಿಪೂರ್ಣವಾದಂತಾಯಿತು, ಸುಂದರವಾಯಿತು…!’
ಇದೊಂದು ಝೆನ್‌ ಕಥೆ. ಪರಿಪೂರ್ಣತೆ, ಸೌಂದರ್ಯ ಅನ್ನುವುದು ನೋಡುವ ವ್ಯಕ್ತಿಯನ್ನು ಅವಲಂಬಿಸಿರುತ್ತದೆ ಎಂದು ಇದನ್ನು ಅರ್ಥ ಮಾಡಿಕೊಳ್ಳಬಹುದು. ಎಲ್ಲವೂ ಸ್ವತ್ಛವಾಗಿ, ನೇರ್ಪಾಗಿ ಇರುವುದಷ್ಟೇ ಪರಿಪೂರ್ಣತೆಯ ಮಾನದಂಡ ಅಲ್ಲ ಎಂದೂ ಹೇಳಬಹುದು. ಕುಂದು ಕೊರತೆ ಗಳು, ಸುಖದುಃಖ, ನೋವು ನಲಿವು ಬದುಕಿನ ಅವಿಭಾಜ್ಯ ಅಂಗಗಳು. ಜೀವನ ಅನ್ನುವುದು ಬರೇ ಸುಖದಿಂದ ಕೂಡಿರು ವುದಿಲ್ಲ. ದುಃಖವೂ ಇರುತ್ತದೆ, ಚಿಂತೆಯೂ ಕಾಡುತ್ತದೆ. ಅವುಗಳಿದ್ದಾಗಲೇ ಸುಖದ ಅರಿವು ಹೆಚ್ಚುತ್ತದೆ ಎಂಬುದನ್ನು ಇನ್ನಷ್ಟು ಆಳವಾಗಿ ಯೋಚಿಸಿದಾಗ ಈ ಕಥೆಯಿಂದ ಅರ್ಥ ಮಾಡಿಕೊಳ್ಳಬಹುದು.

ಮರಗಿಡಗಳು ಮಳೆಗಾಲದಲ್ಲಿ ಚಿಗುರು ತ್ತವೆ. ಚಳಿಗಾಲದಲ್ಲಿ ಎಲೆಗಳನ್ನು ಉದುರಿ ಸುತ್ತವೆ. ಆಗ ಮರ ಸತ್ತೇ ಹೋಯಿತೇನೋ ಎಂದು ಕಾಣಿಸುತ್ತದೆ. ಮತ್ತೆ ಮಳೆಗಾಲದಲ್ಲಿ ಕೊರಡಿ ನಂತಿರುವ ಮರ ಕೊನರು ತ್ತದೆ. ಆಯಾ ಋತುವಿಗೆ ತಕ್ಕಂತೆ ಅದರ ರೂಪ. ಎಲ್ಲ ಕಾಲಮಾನದಲ್ಲಿ ಬದುಕು ಒಂದೇ ಥರ ಇರುವುದಿಲ್ಲ. ಅದು ಬದಲಾಗುತ್ತಿರುತ್ತದೆ. ಕ್ರಿಮಿಕೀಟಗಳು, ಮರಗಿಡ ಗಳು, ಋತುಗಳು ಎಲ್ಲವೂ ಬದಲಾಗುತ್ತಿರು ತ್ತವೆ, ಚಲಿಸುತ್ತಿರುತ್ತವೆ. ಸ್ಥಾವರವಾಗಿರುವುದು ಯಾವುದೂ ಇಲ್ಲ. ಎಲ್ಲವೂ ಒಂದು ಚಕ್ರದಂತೆ. ಒಂದು ಬಿಂದುವಿನಿಂದ ಹೊರಟ ಬದುಕು ಎಲ್ಲೆಲ್ಲೊ ಸುತ್ತಿ ಸುಳಿದು ಕೊನೆಗೆ ಹೊರಟಲ್ಲಿಗೇ ಮರಳುತ್ತದೆ.

ಬದಲಾವಣೆಯೇ ಬದುಕು, ಶತ ಪ್ರತಿಶತ ಪರಿಪೂರ್ಣತೆ ಎಂಬುದಿಲ್ಲ ಎನ್ನುವ ಅರಿವು ಸಂತೃಪ್ತಿಯ ಜೀವನ ನಡೆಸುವುದಕ್ಕೆ ಪೂರಕ. ಇರದುದರೆಡೆಗೆ ತುಡಿಯುವುದು ಸಹಜ ಗುಣ. ಆದರೆ ಎಲ್ಲವೂ ಯಾರ ಬಳಿಯೂ ಇರುವುದಿಲ್ಲ ಎಂಬ ಅರಿವು ಸಮಾಧಾನಕ್ಕೆ ಕಾರಣವಾಗುತ್ತದೆ. ಬದುಕನ್ನು ಇರುವ ಹಾಗೆ ಸ್ವೀಕರಿಸಿ ಸಂತೃಪ್ತವಾಗಿರಲು ಸಹಾಯ ಮಾಡುತ್ತದೆ.

(ಝೆನ್‌ ಸಾರಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next