Advertisement

ನೀವಿಲ್ದೆ ಹ್ಯಂಗೆ ಬದುಕ್ಲಿ ಗೊತ್ತಾಗ್ತಾ ಇಲ್ಲ…

02:32 PM Apr 24, 2018 | Team Udayavani |

ರೀ ಇವ್ರೆ, ನಿಮ್ಮನ್ನು  ಇನ್ಮುಂದೆ ಜಸ್ಟ್‌ ಫ್ರೆಂಡ್‌ ಅಂತ ಕರೀತೀನಿ. ಆಯ್ತಾ? ಮದ್ವೆಗೆ ತಪ್ಪದೇ ಬಾ ಅಂತ ಬೇರೆ ಹೇಳಿದ್ದೀರ. ಆದಷ್ಟು ಟ್ರೆç ಮಾಡ್ತೀನಿ. ಕೆಲಸದ ಬ್ಯುಸೀಲಿ ಬರೋಕಾಗ್ಲಿಲ್ಲ ಅಂದ್ರೆ ಬೈಬೇಡಿ. ಸರೀನಾ? ಆಮೇಲೆ, ಏನ್‌ ಅದೃಷ್ಟ ಅಲ್ವಾ ನಿಮ್ಮದು. ಯಾಕೆ ಅಂತೀರಾ? ಇದೇ ತಿಂಗಳಲ್ಲಿ ನಿಮ್ಮ ಹುಟ್ಟಿದಹಬ್ಬ. ಹಾಗೇ ಇದೇ ತಿಂಗಳಲ್ಲಿ ಮದ್ವೇನೂ ಮಾಡ್ಕೊಳ್ತಾ ಇದ್ದೀರ.

Advertisement

ಒಂಥರಾ ಡಬಲ್‌ ಧಮಾಕಾ ಅನ್ನಿ. ಇಷ್ಟು ದಿನ ನಾವಿಬ್ರೂ ಮನಸ್ಸಿಗೆ ಬೋರ್‌ ಅನ್ನಿಸಿದಾಗೆಲ್ಲಾ ಮಾತಾಡಿಕೊಂಡು ಹಾಯಾಗಿದ್ವಿ. ಇನ್ಮೆàಲೆ ಅದೆಲ್ಲಾ ಸಾಧ್ಯವಿಲ್ಲ ಅನ್ನಿಸ್ತಿದೆ.ಏನ್‌ ಗೊತ್ತೇನ್ರೀ? ಮೊದ್ಲಿಗಿಂತ ನಿಮ್ಮನ್ನ ಜಾಸ್ತಿ ಹಚ್ಚಿಕೊಂಡಿºಟ್ಟಿದ್ದೀನಿ. ಅದೇನೋ ಗೊತ್ತಿಲ್ಲ, ನಿಮ್‌ ಮದ್ವೆ ದಿನಾಂಕ ಹತ್ರ ಬರ್ತಾ ಇದ್ದಂಗೆ ನೀವು ನಂಗೆ ಇನ್ನೂ ಹತ್ರ ಆಗ್ತಿದೀರ ಅಂತ ಅನ್ನಿಸ್ತಿದೆ. ಮೊದೆಲ್ಲ ಜಾಸ್ತಿ ಹೊತ್ತು ಮಾತಾಡ್ತಾ ಇರ್ಲಿಲ್ಲ.

ಆದ್ರೆ ಈಗ ಮಾತಾಡೋಕೆ ಶುರು ಮಾಡಿದ್ರೆ ನಿಲ್ಸೊದೇ ಇಲ್ಲ. ನಾವೀಗ ಸಮಯದ ಪರಿವೆಯೇ ಇಲ್ದೆ ಮಾತಾಡ್ತಾ ಇದೀವಲ್ಲ ಅನ್ನಿಸ್ತಿದೆ. ಇನ್ನು ಸ್ವಲ್ಪ ದಿನ ಅಷ್ಟೇ. ಆಮೇಲೆ ನನ್ನೆಲ್ಲ ನೆನಪುಗಳು ನೀರಲ್ಲಿ ಹೋಮ ಆಗುತ್ತೆ. ಆದರೂ, ನಿಮ್ಮನ್ನ ಬಿಟ್ಟು ಹೆಂಗ್‌ ಇಬೇìಕೋ ನಂಗೆ ಗೊತ್ತಾಗ್ತಾ ಇಲ್ಲ. ಇರಲಿ, ಪರವಾಗಿಲ್ಲ ಬಿಡಿ. ನೀವು ಎಷ್ಟು ದಿನ ಮಾತಾಡ್ತೀರೋ ಅಲ್ಲಿವರೆಗೆ ನಾನೂ ಮಾತಾಡ್ತೀನಿ. ಆಮೇಲೆ ಹೇಗೂ ಒಬ್ಬಂಟಿಯಾಗಿ ಬದುಕೋದು ಇದ್ದೇ ಇದೆಯಲ್ಲ;

ಅದನ್ನ ಅಭ್ಯಾಸ ಮಾಡಿಕೊಳ್ಳೋಕೆ ಪ್ರಯತ್ನ ಮಾಡ್ತೀನಿ. ಹೇಳ್ಳೋಕೆ ಮರೆತಿದ್ದೆ, ಹುಟ್ಟುಹಬ್ಬದ ಶುಭಾಶಯಗಳು ಹಾಗೂ ಹೊಸ ಬಾಳಿಗೆ ಹೆಜ್ಜೆ ಇಡುತ್ತಿರೋದಕ್ಕೂ ಶುಭಾಶಯಗಳು. ನೀವು ಎಲ್ಲೇ ಇದ್ರೂ ಚೆನ್ನಾಗಿರಿ. ಅದನ್ನೇ ನಾನು ಬಯಸೋದು. ನೋಡಿ, ನಾನೇ ಎಲಿಗಿಂತ ಮೊದು ವಿಶ್‌ ಮಾಡ್ತಾ ಇರೋದು. ಈ ಕಾರಣಕ್ಕಾದ್ರೂ ಮದುವೆಗೂ ಮುಂಚೆ ಒಂದ್ಸಲ ಸಿಕ್ಕಿ, ಎರಡೂ ಖುಷಿಗಳನ್ನು ನೆಪ ಮಾಡಿಕೊಂಡು ಪಾರ್ಟಿ ಕೊಡಿಸಿ.

ಪ್ರಾಮಿಸ್‌ ಕಣಿ. ನೀವು ಜೊತೆಗಿರಿರಲ್ಲ; ಅಷ್ಟು ಹೊತ್ತೂ ನಾನು ಬಿಕ್ಕಳಿಸೋದಿಲ್ಲ, ಭಾವುಕನಾಗೋದಿಲ್ಲ. ಬದಲಿಗೆ, ಕಣ್ಣೀರು ಜೊತೆಯಾಗದ ಹಾಗೆ ಒಂದೇ ಸಮನೆ ಪಟಪಟಪಟಪಟಾಂತ ರೆಪ್ಪೆ ಮಿಟುಕಿಸ್ತಾ, ನೀವು ನಗೋದನ್ನೇ ನೋಡ್ತಾ ಕೂತಿರಿ¤àನಿ; ನೀವು ಅಲ್ಲಿಂದ ಎದ್ದು ಹೋಗುವ ತನಕ…
-ನಿಮ್‌ ಪಾಪಚ್ಚಿ
ವೆಂಕಿ

Advertisement
Advertisement

Udayavani is now on Telegram. Click here to join our channel and stay updated with the latest news.

Next