ದೇವನಹಳ್ಳಿ: ಜಿಲ್ಲೆಯ ರೈತರು ರಾಗಿ ಕಟಾವು ಹಂತಕ್ಕೆ ಬಂದಿದ್ದರಿಂದ ನಿವಾರ್ ಚಂಡಮಾರುತದಪ್ರವಾಹದಿಂದ ಬೀಳುತ್ತಿರುವ ಜಡಿ ಮಳೆಗೆ ರಾಗಿ ಬೆಳೆ ಕಟಾವಿಗೆಕಂಟಕ ಎದುರಾಗಿದೆ.
ವಾರದ ಹಿಂದೆ ಸುರಿದ ಜಡಿಮಳೆಯಿಂದ ಕಟಾವಿಗೆ ಬಂದಿರುವ ರಾಗಿ ಫಸಲು ನಾಶವಾಗುವಆತಂಕ ಎದುರಿಸುತ್ತಿರುವ ಜಿಲ್ಲೆಯ ರೈತರು ಜಡಿ ಮಳೆಗೆ ಆತಂಕಗೊಂಡಿದ್ದಾರೆ. ಜಡಿ ಮಳೆ ಹೀಗೆ ಮುಂದುವರಿದರೆ, ರಾಗಿ ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀಳುತ್ತದೆ ಎಂಬುದು ರೈತರಲ್ಲಿ ಆತಂಕ ಮತ್ತಷ್ಟು ಮನೆ ಮಾಡಿದೆ.
ಬಯಲು ಸೀಮೆ ಪ್ರದೇಶವಾಗಿರುವುದರಿಂದ ಅತೀ ಮುಖ್ಯವಾಗಿ ರಾಗಿ ಬೆಳೆ ಬೆಳೆಯುತ್ತಾರೆ. ಈ ಬಾರಿ ದಾಖಲೆ ಬಿತ್ತನೆ ಜತೆಗೆ ನಿರೀಕ್ಷೆಗೂ ಮೀರಿ ರಾಗಿ ಫಸಲು ಬಂದಿದೆ. ಚಂಡಮಾರುತ ಪ್ರಭಾವದಿಂದ ರೈತರು ಮತ್ತಷ್ಟು ಕಂಗಾಲು ಮಾಡುವಂತಾಗಿದೆ. ಈ ವರ್ಷ ಉತ್ತಮವಾಗಿ ರಾಗಿ ಫಸಲು ಚೆನ್ನಾಗಿ ಬಂದಿದೆ.ಈತುಂತುರು ಮಳೆಯಿಂದಾಗಿ ಹೊಲಗಳಲ್ಲಿಯೇ ರಾಗಿ ತೆನೆ ಬಂದು, ನೆಲಕಚ್ಚಿವೆ. ಕಟಾವು ಮಾಡುವ ಸಮಯದಲ್ಲಿ ಈ ರೀತಿ ಜಡಿಮಳೆ ಕಾಟ ರೈತರಿಗೆ ಸಂಕಷ್ಟ ತಂದೊಡ್ಡಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ನಿರ್ಮಾಣವಾಗುತ್ತಿದೆ. ಒಂದು ಬಾರಿ ಬರಗಾಲ ಆವರಿಸುತ್ತದೆ. ಮತ್ತೂಂದು ಬಾರಿ ಮಳೆರಾಯನ ಕಾಟ ಕಾಡುತ್ತಿದೆ. ಎಂದು ರೈತರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.
ಸೈಕ್ಲೋನ್ ರಾಗಿ ಬೆಳೆಗಾರರ ಪಾಲಿಗೆ ದುಸ್ವಪ್ನವಾಗಿದ್ದು, ಕೊಯಿಲು ಮಾಡಿ ಹೊಲದಲ್ಲಿ ಹಾಗೆಯೇ ಬಿಟ್ಟ ರಾಗಿ ಬೆಳೆಗೆ ನಿರಂತರ ಮಳೆ ನೀರಿನ ತೇವಾಂಶ ರಾಗಿ ಕಾಳಿನಲ್ಲಿ ಮೊಳಕೆ ಒಡೆಯಲು ಕಾರಣವಾಗುತ್ತದೆ. ಸಂಪೂರ್ಣನಾಶದತ್ತ ಸಾಗುತ್ತದೆ. ಕೂಲಿ ಕಾರ್ಮಿಕರ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುತ್ತಿದೆ. ರಾಗಿ ಕಟಾವು ಸಮಯದಲ್ಲಿ ಕೂಲಿಗಾರರ ಸಮಸ್ಯೆ ರೈತರನ್ನು ಕಾಡುತ್ತದೆ. ಕೆಲವರು ಕಟಾವು ಮಾಡದೇ ಹೊಲಗಳಲ್ಲಿ ಹಾಗೆಯೇ ಬಿಟ್ಟಿದ್ದಾರೆ.
ಈ ಬಾರಿ ಉತ್ತಮ ಮಳೆಯಾದರೂ ರಾಗಿಫಸಲು ಉತ್ತಮವಾಗಿಬಂದಿತ್ತು. ನಿವಾರ್‌ಚಂಡ ಮಾರುತ ದಿಂದ ಜಡಿಮಳೆ ಹಿಡಿದಿರುವುದರಿಂದ ರಾಗಿ ಕಟಾವು ಹಂತದಲ್ಲಿ ರಾಗಿ ಕಟಾವು ಮಾಡುವ ಸಮಯದಲ್ಲಿಈ ಮಳೆ ರೈತರಿಗೆ ಸಾಕಷ್ಟುಅನಾನುಕೂಲವಾಗುತ್ತಿದೆ.ಮಳೆ ನೀರು ತೇವಾಂಶಹೆಚ್ಚಾದರೆ, ರಾಗಿ ಕಾಳಿನಲ್ಲಿ ಮೊಳಕೆಬರುತ್ತದೆ.
– ಶ್ರೀರಾಮ್, ರೈತ