Advertisement

ಅಡಿಕೆಗೆ ಸಂಬಂಧಿಸಿ ಸಂಶೋಧನೆ: ನಿಟ್ಟೆ ವಿವಿ, ಎಆರ್‌ಡಿಎಫ್‌, ಕ್ಯಾಂಪ್ಕೋ ನಡುವೆ ಒಪ್ಪಂದ

01:45 AM Dec 04, 2021 | Team Udayavani |

ಮಂಗಳೂರು: ನಿಟ್ಟೆ ವಿಶ್ವವಿದ್ಯಾನಿಲಯ, ಕ್ಯಾಂಪ್ಕೋ ಮತ್ತು ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ (ಎಆರ್‌ಡಿಎಫ್‌) ನಡುವೆ ಅಡಿಕೆಗೆ ಸಂಬಂಧಿಸಿ ಸಂಶೋಧನೆಗೆ ಶುಕ್ರವಾರ ಒಡಂಬಡಿಕೆಗೆ ಸಹಿ ಹಾಕಲಾಯಿತು.

Advertisement

ಜೀವಿ ಮತ್ತು ಜೀವಕಣಗಳ ಮೇಲೆ ಅಡಿಕೆಯಿಂದಾಗುವ ಪರಿಣಾಮಗಳ ಬಗ್ಗೆ ಮೌಲ್ಯಮಾಪನ, ಅಡಿಕೆ ಯಿಂದಾಗುವ ಪರಿಣಾಮಗಳ ಬಗ್ಗೆ “ಡ್ರೊಸೊಫಿಲಾ’ ಎಂಬ ಕೀಟದ ಮೇಲೆ ಸಮಗ್ರ ಅಧ್ಯಯನ, ಜೀವಕೋಶಗಳ ಪ್ರಸರಣಗಳ ಬಗ್ಗೆ ಅಡಿಕೆ ಮತ್ತು ಅರೆಕೋಲಿನ್‌ಗಳ ಪ್ರಭಾವಗಳನ್ನು ತಿಳಿಯಲು “ಜೀಬ್ರಾಮೀನು’ಗಳ ಬ್ರೂಣಗಳ ಮೇಲೆ ಪ್ರಯೋಗ, ಅಡಿಕೆ ಜಗಿಯುವುದರಿಂದ ಮನುಷ್ಯನ ಆರೋಗ್ಯದ ಮೇಲಾಗುವ ಪರಿಣಾಮಗಳ ಸಮಗ್ರ ಅಧ್ಯಯನ ವಿಷಯಗಳಲ್ಲಿ ಸಂಶೋಧನೆ ಮಾಡಲು ನಿಟ್ಟೆ ವಿಶ್ವವಿದ್ಯಾನಿಲಯಕ್ಕೆ ಕೇಳಲಾಗಿದೆ.

ಅಡಿಕೆ ಪ್ರಯೋಜನಗಳು,ಅದರ ಮೌಲ್ಯವರ್ಧನೆ, ಔಷಧೀಯ ಉತ್ಪನ್ನಗಳು ಮತ್ತು ಇತರ ವಾಣಿಜ್ಯ ಬಳಕೆಗಳ ಬಗ್ಗೆ ಸಮಗ್ರ ಸಂಶೋಧನೆಯನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದು ಕ್ಯಾಂಪ್ಕೋ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next