Advertisement
ಸುಮಾರು 30 ಚಿತ್ರ ನಿರ್ಮಾಪಕ, ನಿರ್ದೇಶಕರನ್ನು ಚಿತ್ರೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ವೈಚಾರಿಕ ಸಂವಾದದಲ್ಲಿ ಪಾಲ್ಗೊಳ್ಳಲು ಆಹ್ವಾನಿಸಲಾಗಿತ್ತು.
Related Articles
Advertisement
“ಇಂದಿನ ರಾಜಕೀಯ, ಸಾಮಾಜಿಕ ಸನ್ನಿವೇಶದಲ್ಲಿ ನಾನು ನ್ಯೂಡೆಲ್ಲಿ ಟೈಮ್ಸ್‌ನ ಮುಂದುವರಿದ ಭಾಗವಾಗಿ ಇನ್ನೊಂದು ಚಿತ್ರವನ್ನು ಮಾಡಲು ಬಯಸುವುದಿಲ್ಲ. ಮೇಲಾಗಿ ಇಂದು ಸಮಾಜದಲ್ಲಿ ಅಸಹಿಷ್ಣುತೆ ಹಿಂದೆಂದಿಗಿಂತಲೂ ಹೆಚ್ಚಿದೆ. ಸೆನ್ಸರ್ ಪ್ರತಿಕ್ರಿಯೆ ತುಂಬ ಜಟಿಲವಾಗಿದೆ. ಕಥಾ ಚಿತ್ರಗಳಿಗಿಂತ ಅದೇ ವಸ್ತು ಒಳಗೊಂಡ ಸಾಕ್ಷ್ಯ ಚಿತ್ರ ಮಾಡುವತ್ತ ನನ್ನ ಒಲವು ಹರಿದಿದೆ’ ಎಂದು ಶರ್ಮಾ ಉತ್ತರಿಸಿದರು.
ಈ ಸಂವಾದದಲ್ಲಿ ಮಾಧ್ಯಮ, ರಾಜಕೀಯ ಮತ್ತು ಸಮಾಜದ ನಡುವಿನ ಕೊಂಡಿಯನ್ನು ಅರಸುವ ಪ್ರಯತ್ನ ಮಾಡಲಾಯಿತು. ಅಂತೆಯೇ ಮಾಧ್ಯಮ ಮಾಲಕತ್ವ ಮತ್ತು ತತ್‌ಪರಿಣಾಮವಾಗಿ ಪತ್ರಕರ್ತರು ರಾಜಿಗೆ ಒಳಪಡುವ, ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳುವ ಸವಾಲುಗಳನ್ನು ಎದುರಿಸಬೇಕಾಗಿರುವ ಸನ್ನಿವೇಶವನ್ನೂ ಚರ್ಚಿಸಲಾಯಿತು.
ನಾಲ್ಕನೇ ದಿನದ ಸಂವಾದವು ಸನಲ್ ಕುಮಾರ್ ಶಶಿಧರನ್ (ಎಸ್ ದುರ್ಗಾ, ಒಳಿವುಡಿವಸತೇ ಕಲಿ), ಸುನೀಲ್ ರಾಘವೇಂದ್ರ (ಪುಟ ತಿರುಗಿಸಿ ನೋಡಿ) ಮತ್ತು ಸಚಿನ್ ಕುಂಡಾಲ್ಕರ್ (ಗುಲಾಬ್‌ಜಾಮ್) ಅವರೊಳಗೆ ಚರ್ಚೆಯನ್ನು ಕಂಡಿತು. ವಿಭಿನ್ನ ರಾಜ್ಯಗಳಿಗೆ ಸೇರಿರುವ ಈ ಚಿತ್ರ ನಿರ್ದೇಶಕರು ವಿಭಿನ್ನ ಚಿತ್ರಗಳನ್ನು ಮಾಡಿದವರಾಗಿದ್ದು ಅಸ್ಮಿತೆಯ ರಾಜಕಾರಣ ಮತ್ತು ಪ್ರಾತಿನಿಧಿಕತೆಯ ಬಗ್ಗೆ ಸಂವಾದ ನಡೆಸಿದರು.
ರಾಘವೇಂದ್ರ ಅವರು ಮಾತನಾಡಿ, “ನಾನು ಚಿತ್ರ ನಿರ್ಮಾಣದಲ್ಲಿ ಸಹಾಯಕನಾಗಿ ತೊಡಗಿಕೊಂಡಿದ್ದಾಗ ಸಿನೇಮಾ ಎನ್ನುವುದು ತಾರಾಗಣದ ಬುನಾದಿಯ ಮೇಲೆ ನಿರ್ಮಿಸಲಾಗುವ ಶಿಲ್ಪ ಎಂಬುದನ್ನು ಕಂಡುಕೊಂಡೆ. ಲೈಟಿಂಗ್ ಟೀಮ್‌ನವರಿಗೆ, ಸಹಾಯಕ ನಿರ್ದೇಶಕರಿಗೆ, ಮತ್ತು ನಿರ್ದೇಶಕರು ಹಾಗೂ ನಟರಿಗೆ ಪ್ರತ್ಯೇಕ ಬಗೆಯ ಊಟೋಪಚಾರ ಇರುವುದನ್ನು ಕೂಡ ಕಂಡುಕೊಂಡೆ’ ಎಂದು ಹೇಳಿದರು.
ವಿವಾದಕ್ಕೆ ಗುರಿಯಾದ ಮತ್ತು ಸೆನ್ಸರ್ ಮಂಡಳಿಯಲ್ಲಿ ಸಿಲುಕಿಕೊಂಡು ಎಸ್ ದುರ್ಗಾ ಚಿತ್ರದ ನಿರ್ದೇಶಕ ಶಶಿಧರನ್ ಮಾತನಾಡಿ, “ಪ್ರಜಾಸತ್ತೆಯಲ್ಲಿ ಸಮಾನ ಅಧಿಕಾರಿಗಳ ವಿತರಣೆಗೆ ಅವಕಾಶವಿರುತ್ತದೆ. ಆದರೆ ನಮ್ಮ ಸಮಾಜದಲ್ಲಿಂದು ಪ್ರಜಾಸತ್ತೆ ಎನ್ನುವುದು ಕೇವಲ ಕಾಗದದ ಮೇಲೆ ಉಳಿದಿದೆ’ ಎಂದು ಹೇಳಿದರು.