Advertisement

ಪರಿಪೂರ್ಣ ಶಿಕ್ಷಣದಿಂದ ದೇಶದ ಬಡತನ ನಿವಾರಣೆ: ಶಾಸಕ ಬಂಗೇರ

02:41 PM Oct 23, 2017 | Team Udayavani |

ವೇಣೂರು: ಬಡತನದಲ್ಲಿರುವವರನ್ನು ಮೇಲೆತ್ತುವ ಕೆಲಸ ಜಾತಿ ಸಂಘಟನೆಗಳ ಮೂಲ ಧ್ಯೇಯ ಆಗಬೇಕು. ಹೆತ್ತವರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಪರಿಪೂರ್ಣ ಶಿಕ್ಷಣದಿಂದ ದೇಶದ ಬಡತನ ನಿವಾರಣೆ ಸಾಧ್ಯ ಎಂದು ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.

Advertisement

ರವಿವಾರ ವೇಣೂರು ವಲಯ ದೇವಾಡಿಗರ ಸೇವಾ ವೇದಿಕೆ ವತಿಯಿಂದ ನಿಟ್ಟಡೆ ದೇವಾಡಿಗರ ಸಮುದಾಯ ಭವನದಲ್ಲಿ ಜರಗಿದ ಸಮ್ಮಾನ, ಅಭಿನಂದನೆ, ಪ್ರತಿಭಾ ಪುರಸ್ಕಾರ, ಖಾಯಂ ವಿದ್ಯಾರ್ಥಿ ವೇತನ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ವೇದಿಕೆಯ ಕಾರ್ಯದರ್ಶಿ ಜಗನ್ನಾಥ ದೇವಾಡಿಗ ಪ್ರಾಸ್ತಾವಿಕವಾಗಿ ಮಾತನಾಡಿ, 2010ರಲ್ಲಿ ನಿರ್ಮಾಣ ಮಾಡಲಾದ ಸಮುದಾಯ ಭವನದ ನಿರ್ಮಾಣಕ್ಕೆ ಸಂಸದರು, ಶಾಸಕರು ಅನುದಾನದಿಂದ ಇದು ಸಾಧ್ಯವಾಗಿದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ವೇದಿಕೆಯ ಅಧ್ಯಕ್ಷ ವಿ. ಅಶೋಕ್‌ ದೇವಾಡಿಗ ವಹಿಸಿದ್ದರು. ಧರ್ಮಸ್ಥಳ ಗ್ರಾ.ಯೋ. ನಿವೃತ್ತ ಹಿರಿಯ ಪ್ರಬಂಧಕ ಶೀನ ದೇವಾಡಿಗ ಅವರನ್ನು ವೇದಿಕೆಯಲ್ಲಿ ಸಮ್ಮಾನಿಸಲಾಯಿತು.

ವಿದ್ಯಾರ್ಥಿವೇತನ
ಕಳೆದ ಸಾಲಿನ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ 5 ರಿಂದ 9ನೇ ತರಗತಿಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಸುಬ್ರಹ್ಮಣ್ಯ ಪ್ರಸಾದ್‌ ವಿದ್ಯಾನಿಧಿ ವಿತರಣೆ ಮಾಡಲಾಯಿತು.

ವಿವಿಧ ಆಟೋಟ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಅಗಲಿದ ಸಮುದಾಯದ ಗಣ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ದೇವಾಡಿಗರ ವೇದಿಕೆಯ ವಿದ್ಯಾನಿಧಿಗಾಗಿ ಶಾಸಕ ಕೆ. ವಸಂತ ಬಂಗೇರ ಅವರು 10,000 ರೂ. ಮೊತ್ತವನ್ನು ವೇದಿಕೆಯ ಅಧ್ಯಕ್ಷರಿಗೆ ಹಸ್ತಾಂತರಿಸಿದರು.

Advertisement

ಬೆಳ್ತಂಗಡಿ ಪಂ.ರಾಜ್‌ ಇಂಜಿನಿಯರಿಂಗ್‌ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಚೆನ್ನಪ್ಪ ಮೊಯ್ಲಿ, ವೇಣೂರಿನ ಉದ್ಯಮಿ ಭಾಸ್ಕರ ಪೈ, ಉಡುಪಿ ಜಿಲ್ಲಾ ಧಾರ್ಮಿಕ ಪರಿಷತ್‌ ಸದಸ್ಯ ಬಿ. ಕೃಷ್ಣಮೂರ್ತಿ, ವೇಣೂರಿನ ಮೋಹನದಾಸ ಹೆಗ್ಡೆ, ಉಡುಪಿ ನಾದಶ್ರೀ ಕ್ರೇಡಿಟ್‌ ಕೋ -ಆಪರೇಟಿವ್‌ ಸೊಸೈಟಿಯ ಕಾರ್ಯದರ್ಶಿ ಕಾರ್ತಿಕ್‌ ಕುಮಾರ್‌, ಮಣಿಪಾಲ ಯುನಿವರ್ಸಿಟಿಯ ಅಸಿಸ್ಟೆಂಟ್‌ ಪ್ರೊಫೆಸರ್‌ ಪ್ರವೀಣ್‌ ಕುಮಾರ್‌, ನಾರಾವಿಯ ರಘು ದೇವಾಡಿಗ, ಬೆಳ್ತಂಗಡಿ ದೇವಾಡಿಗರ ಯುವ ವೇದಿಕೆಯ ಅಧ್ಯಕ್ಷ ಯೋಗೀಶ್‌ ದೇವಾಡಿಗ, ಮಹಿಳಾ ವೇದಿಕೆಯ ಅಧ್ಯಕ್ಷೆ ಜ್ಯೋತಿ ಪ್ರಶಾಂತ್‌ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಕಟ್ಟಡ ನಿರ್ಮಾಣ ಸಮಿತಿ ಕಾರ್ಯದರ್ಶಿ ಅಶೋಕ್‌ ಜಿ. ಅಂಡಿಂಜೆ ಸ್ವಾಗತಿಸಿ ಜ್ಯೋತಿ ಪ್ರಶಾಂತ್‌ ಉಡುಪಿ ವಂದಿಸಿದರು. ಸುಮತಿ ಪುರಂದರ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

ವರ್ಷಾ, ಸ್ಪಂದನ, ಭವಿತಾ ದೇವಾಡಿಗ, ವಸಂತಿ ಪುರಂದರ, ಕುಸುಮಾ ಅಂಪುಗೇರಿ, ದೀಕ್ಷಿತಾ ನಡುಕುಮೇರು, ಪದ್ಮಪ್ರಸಾದ್‌ ದೇವಾಡಿಗ ಹಾಗೂ ಸಮಿತಿ ಪದಾಧಿಕಾರಿಗಳು ಸಹಕರಿಸಿದರು.

ಸಂಘ ಸಂಸ್ಥೆಗಳು ಶಿಕ್ಷಣಕ್ಕೆ ಆದ್ಯತೆ ನೀಡಿ
ಮಕ್ಕಳ ಶಿಕ್ಷಣದಿಂದ ಸಮಾಜ ಆರ್ಥಿಕ, ಸಾಮಾಜಿಕವಾಗಿ ಬಲಿಷ್ಠವಾಗುತ್ತದೆ. ಅದಕ್ಕಾಗಿ ಸಂಘ ಸಂಸ್ಥೆಗಳು ಶಿಕ್ಷಣಕ್ಕೆ
ಆದ್ಯತೆ ನೀಡಬೇಕು. ದೇವರ ಮೇಲೆ ಭಯ-ಭಕ್ತಿ ಬೇಕು. ಭಯ ತಪ್ಪುಕಾರ್ಯಗಳಿಂದ ವಿಮುಖಗಲು ಸಹಾಯವಾದರೆ ಭಕ್ತಿ ನಮ್ಮನ್ನು ಬಲಿಷ್ಠ ವಾಗಿಸುತ್ತದೆ.
– ಕೆ. ವಸಂತ ಬಂಗೇರ, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next