Advertisement
ಪೈಪ್‌ಲೈನ್‌ನಲ್ಲಿ ನಿಗದಿತ ಪ್ರಮಾಣದ ನೈಟ್ರೋಜನ್ ಅನ್ನು ಹೈಸ್ಪೀಡ್‌ನಲ್ಲಿ ಹಾಕಿ ಪರಿಶೀಲಿಸಲಾಗುತ್ತದೆ. 24 ಗಂಟೆ ಇದನ್ನು ಗಮನಿಸಿ ಅನಂತರ ಪೈಪ್‌ಲೈನ್‌ನಲ್ಲಿ ನೈಟ್ರೊಜನ್ ಅನಿಲವನ್ನು ತೇವಾಂಶ ಸಹಿತ ಸಂಪೂರ್ಣವಾಗಿ ತೆಗೆಯಲಾಗುತ್ತದೆ. ಬಳಿಕ ಪೈಪ್ ಪರಿಶೀಲನೆ ಹಾಗೂ ತಜ್ಞರ ತಂಡದಿಂದ ಸುರಕ್ಷೆಯ ಪರಿಶೀಲನೆ ನಡೆಸಿ ಅಂತಿಮವಾಗಿ ಗ್ಯಾಸ್ ಸಂಪರ್ಕ ಆರಂಭವಾಗಲಿದೆ.
ರಾಜ್ಯದ ಏಕೈಕ ರಸಗೊಬ್ಬರ ಕಾರ್ಖಾನೆ ಯಾಗಿರುವ ಮಂಗಳೂರಿನ ಎಂಸಿಎಫ್‌ನಲ್ಲಿ ರಸಗೊಬ್ಬರ ಉತ್ಪಾದನೆಗೆ ನೈಸರ್ಗಿಕ ಅನಿಲ ಬಳಸಲು ಸರಕಾರ ಉದ್ದೇಶಿಸಿದೆ. ಇದಕ್ಕಾಗಿ ಗೇಲ್ ಲಿ. ವತಿಯಿಂದ ಕೊಚ್ಚಿಯಿಂದ ಮಂಗಳೂರು ವರೆಗೆ ಗೈಲ್ ಗ್ಯಾಸ್ ಪೈಪ್‌ಲೈನ್ ಕಾಮಗಾರಿ ಆರಂಭಿಸಿತ್ತು. 450 ಕಿ.ಮೀ. ಉದ್ದದ ಪೈಪ್‌ಲೈನ್‌ನ ಪೈಕಿ ತಮಿಳುನಾಡು-ಕೇರಳದಲ್ಲಿ ಈಗಾಗಲೇ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ದ.ಕ. ಜಿಲ್ಲೆಯ 35 ಕಿ.ಮೀ. ಉದ್ದದ ಪೈಪ್‌ಲೈನ್ ಕಾಮಗಾರಿ ಕೆಲವೇ ದಿನಗಳ ಹಿಂದೆ ಪೂರ್ಣ ಗೊಂಡಿತ್ತು. ದ.ಕ. ಜಿಲ್ಲೆಯ ಮಂಗಳೂರು ತಾಲೂಕಿನ ಮಳವೂರು, ಅದ್ಯಪಾಡಿ, ಕಂದಾವರ, ಮೂಳೂರು, ಅಡೂxರು, ಮಲ್ಲೂರು, ಅರ್ಕುಳ, ಪಾವೂರು, ಕೆಂಜಾರು, ತೋಕೂರು ಮತ್ತು ಬಂಟ್ವಾಳ ತಾಲೂಕಿನ ಮೇರಮಜಲು, ಅಮ್ಮುಂಜೆ, ಪಜೀರು, ಕೈರಂಗಳ, ಬಾಳೆಪುಣಿ, ಕುರ್ನಾಡು ಗ್ರಾಮ ವ್ಯಾಪ್ತಿಯಲ್ಲಿ ಗ್ಯಾಸ್‌ಪೈಪ್‌ಲೈನ್ ಕೇರಳ ಭಾಗಕ್ಕೆ ಸಂಪರ್ಕ ಕಲ್ಪಿಸಿದೆ.
Related Articles
ಎಂಸಿಎಫ್‌ಗೆ ಪೈಪ್‌ಲೈನ್‌ನಲ್ಲಿ ಗ್ಯಾಸ್ ಪೂರೈಕೆ ಆರಂಭವಾದ ಬೆನ್ನಲ್ಲೇ ದ.ಕ. ವ್ಯಾಪ್ತಿಯ ಮನೆಗಳಿಗೂ ಪೈಪ್‌ಲೈನ್ ನೀಡುವ ಯೋಜನೆ ಇದೆ. ಇದರಂತೆ 100 ಸಿಎನ್‌ಜಿ ಸ್ಟೇಶನ್‌ಗಳು (ನೈಸರ್ಗಿಕ ಅನಿಲ ಸ್ಟೇಶನ್) ಆರಂಭವಾಗಲಿದೆ. ಮೊದಲಿಗೆ ಮಂಗಳೂರು ನಗರ ವ್ಯಾಪ್ತಿಯಲ್ಲಿ ಜಾರಿಯಾಗಲಿದೆ. ಇದಕ್ಕಾಗಿ ಮಂಗಳೂರಿನಲ್ಲಿ ಮನೆ ಮನೆಗೆ ಗೈಲ್ ಗ್ಯಾಸ್‌ನ ಪ್ರತಿನಿಧಿಗಳು ಆಗಮಿಸಿ ನೋಂದಣಿ ಮಾಡುತ್ತಿದ್ದಾರೆ.
Advertisement
ಮೂರು ದಿನಗಳೊಳಗೆ ಆರಂಭಬಹುನಿರೀಕ್ಷಿತ ಕೊಚ್ಚಿ-ಮಂಗಳೂರು ಗ್ಯಾಸ್ ಪೈಪ್‌ಲೈನ್ ಯೋಜನೆಯಡಿ ಎಂಸಿಎಫ್‌ನಲ್ಲಿ “ನೈಟ್ರೋಜನ್ ಪರ್ಜಿಂಗ್’ ಕೆಲಸ ಸದ್ಯ ನಡೆಯುತ್ತಿದೆ. ಪೈಪ್‌ಲೈನ್‌ನಲ್ಲಿ ನೈಟ್ರೋಜನ್ ತುಂಬಿಸಿ ಪರಿಶೀಲಿಸುವ ಕಾಮಗಾರಿ ಮೂರು ದಿನಗಳೊಳಗೆ ಆರಂಭವಾಗಲಿದೆ.
- ವಿಜಯಾನಂದ, ಡಿಜಿಎಂ, ಗೈಲ್ ಲಿ. ಮಂಗಳೂರು ವಿಭಾಗ