Advertisement

Bihar; ವಿಧಾನಸಭೆ ವಿಸರ್ಜಿಸಿ ಲೋಕಸಭೆಯ ಜತೆಗೆ ಚುನಾವಣೆಗೆ ಹೋಗಲು ನಿತೀಶ್ ಯೋಜನೆ?

11:44 AM Feb 22, 2024 | Team Udayavani |

ಪಾಟ್ನಾ: ಕೆಲ ವಾರಗಳ ಹಿಂದೆಯಷ್ಟೇ ಆರ್ ಜೆಡಿ ಮೈತ್ರಿ ತೊರೆದು ಮತ್ತೆ ಎನ್ ಡಿಎ ಸಖ್ಯ ಬೆಳೆಸಿ ಹೊಸ ಸರ್ಕಾರ ರಚಿಸಿದ್ದ ನಿತೀಶ್ ಕುಮಾರ್ ಅವರು ಹೊಸ ಒಪ್ಪಂದ ಪ್ರಕಾರ ಬಿಹಾರ ವಿಧಾನಸಭೆಯನ್ನು ಶೀಘ್ರದಲ್ಲಿಯೇ ವಿಸರ್ಜಿಸಲಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯ ಸಮಯದಲ್ಲಿ ಏಕಕಾಲದಲ್ಲಿ ಬಿಹಾರ ವಿಧಾನಸಭೆ ಚುನಾವಣೆಯೂ ನಡೆಯಲಿದೆ ಎಂದು ಮಾಜಿ ಡಿಸಿಎಂ ತೇಜಸ್ವಿ ಯಾದವ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.

Advertisement

“ಸುಮಾರು ಒಂದು ತಿಂಗಳಾದರೂ ಬಿಹಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಿಲ್ಲ. ಬಿಜೆಪಿ ಮತ್ತು ಜೆಡಿಯು ನಡುವಿನ ಅವಿಶ್ವಾಸದ ಅಂತರ ಹೆಚ್ಚಿದೆ. ಬಿಹಾರದಲ್ಲಿ ಈಗ ಆಡಳಿತ ಎಂಬುದೇ ಇಲ್ಲ. ಸರ್ಕಾರವು ಐದು ವರ್ಷಗಳ ಕಾಲ ನಡೆಯಬೇಕು ಆದರೆ ಆ ಪಕ್ಷದ ಮುಖ್ಯಸ್ಥರು ಕಳೆದ ಮೂರು ವರ್ಷಗಳಲ್ಲಿ ಮೂರು ಬಾರಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ” ಎಂದು ಯಾದವ್ ಹೇಳಿದರು.

ಜನ ವಿಶ್ವಾಸ ಯಾತ್ರೆಯ ವೇಳೆ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಯಾದವ್, ಲೋಕಸಭೆಯೊಂದಿಗೆ ವಿಧಾನಸಭೆ ಚುನಾವಣೆ ನಡೆದರೆ ಬಿಜೆಪಿ ಅಥವಾ ಜೆಡಿಯು ಖಾತೆ ತೆರೆಯುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಮೋದಿ ಅವರಿಗೆ ಒಂದೇ ಒಂದು ಲೋಕಸಭಾ ಸ್ಥಾನವೂ ಸಿಗುವುದಿಲ್ಲ. ಯಾರೂ ನಿತೀಶ್ ಕುಮಾರ್ ಅವರನ್ನು ತೆಗೆದುಹಾಕುತ್ತಿಲ್ಲ ಮತ್ತು ಅವರು ಐದು ವರ್ಷಗಳನ್ನು ಪೂರ್ಣಗೊಳಿಸಲು ಆರ್‌ಜೆಡಿ-ಕಾಂಗ್ರೆಸ್‌ನೊಂದಿಗೆ ಇರಬೇಕಿತ್ತು ಎಂದು ಯಾದವ್ ಹೇಳಿದರು.

ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಬಿಹಾರದಲ್ಲಿ 7.64 ಕೋಟಿ ಮತದಾರರಿದ್ದು, ಅದರಲ್ಲಿ 4 ಕೋಟಿ ಪುರುಷರು ಮತ್ತು 3.6 ಕೋಟಿ ಮಹಿಳೆಯರು. 21,680 ಮತದಾರರು 100 ವರ್ಷಕ್ಕಿಂತ ಮೇಲ್ಪಟ್ಟವರು. 9.26 ಲಕ್ಷ ಮಂದಿ ಮೊದಲ ಬಾರಿಗೆ ಮತದಾರರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next