Advertisement
ಒಟ್ಟು 243 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬಿಹಾರ್ ನಲ್ಲಿ ಜೆಡಿಯು 122 ಕ್ಷೇತ್ರಗಳಲ್ಲಿ ಹಾಗೂ ಬಿಜೆಪಿ 121 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ ಎಂದು ಮಾಧ್ಯಮ ಮೂಲಗಳು ತಿಳಿಸಿವೆ. ನಿತೀಶ್ ಕುಮಾರ್ ಅವರ ಪಕ್ಷವು ಜೀತಾನ್ ರಾಮ್ ಮಾಂಜಿ ಅವರ ಹಿಂದೂಸ್ತಾನಿ ಅವಮ್ ಮೋರ್ಚಾಗೆ ತನ್ನ ಕೋಟಾದಲ್ಲಿ ಅವಕಾಶ ನೀಡಿದರೆ, ಬಿಜೆಪಿ ಮೈತ್ರಿಕೂಟದಲ್ಲಿ ಉಳಿದುಕೊಂಡರೆ ರಾಮ್ ವಿಲಾಸ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷಕ್ಕೆ ತನ್ನ ಪಾಲಿನಿಂದ ಸ್ಥಾನಗಳನ್ನು ನೀಡಲಿದೆ ಎಂದು ಮೂಲಗಳು ತಿಳಿಸಿವೆ.
Related Articles
Advertisement
ಏತನ್ಮಧ್ಯೆ ವಿಪಕ್ಷಗಳದ ಸೀಟು ಹಂಚಿಕೆಯೂ ಆಗಿದ್ದು, ಆರ್ಜೆಡಿ, ಕಾಂಗ್ರೆಸ್ ಮತ್ತು ಎಡಪಕ್ಷಗಳು ಸೀಟು ಹಂಚಿಕೆಯಲ್ಲಿ ಒಮ್ಮತಕ್ಕೆ ಬಂದಿವೆ. ಬಿಹಾರ ವಿಧಾನಸಭೆಯ 243 ಕ್ಷೇತ್ರಗಳ ಪೈಕಿ 144 ಕ್ಷೇತ್ರಗಳಲ್ಲಿ ರಾಷ್ಟ್ರೀಯ ಜನತಾ ದಳ ಸ್ಪರ್ಧಿಸಲಿದೆ. ಇದರಲ್ಲಿ ವಿಐಪಿ ಮತ್ತು ಜೆಎಂಎಂ ಪಕ್ಷಗಳಿಗೂ ಒಂದಷ್ಟು ಸ್ಥಾನಗಳನ್ನ ಆರ್ಜೆಡಿ ಬಿಟ್ಟುಕೊಡಲಿದೆ. ಕಾಂಗ್ರೆಸ್ ಪಕ್ಷ 70 ಕ್ಷೇತ್ರಗಳನ್ನ ಪಡೆದಿದೆ. ಉಳಿದ ಸ್ಥಾನಗಳನ್ನ ಕಮ್ಯೂನಿಸ್ಟ್ ಪಕ್ಷಗಳಿಗೆ ನೀಡಲಾಗಿದೆ. ಆರ್ಜೆಡಿ ಮುಖಂಡ ಹಾಗೂ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರನ್ನ ಮಹಾಮೈತ್ರಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲಾಗಿದೆ.
ಇದನ್ನೂ ಓದಿ: ದೀಪಿಕಾ, ಶೃದ್ಧಾ, ಸಾರಾ ವಿಚಾರಣೆ ನಡೆಸಿದ್ದ ಎನ್ ಸಿಬಿ ಅಧಿಕಾರಿಗೆ ಕೋವಿಡ್ ಸೋಂಕು ದೃಢ