Advertisement

ಬಿಹಾರ ಸಿಎಂ ಆಗಿ ನಿತೀಶ್‌ ಪ್ರಮಾಣ ವಚನ; ಸುಶೀಲ್‌ ಮೋದಿ ಡಿಸಿಎಂ

10:58 AM Jul 27, 2017 | udayavani editorial |

ಪಟ್ನಾ : ಬಿಹಾರದ ಮಹಾ ಘಟಬಂಧನ ಸರಕಾರದ ಮುಖ್ಯಮಂತ್ರಿ ಪದಕ್ಕೆ ನಿನ್ನೆ ಹಠಾತ್‌ ರಾಜೀನಾಮೆ ನೀಡಿದ್ದ ನಿತೀಶ್‌ ಕುಮಾರ್‌ ಅವರು ಇಂದು ಗುರುವಾರ ಬಿಜೆಪಿ ಬೆಂಬಲದಲ್ಲಿ ಏರ್ಪಟ್ಟ ಹೊಸ ಮೈತ್ರಿ ಕೂಟದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

Advertisement

ರಾಜ್ಯಪಾಲ ಕೇಸರಿನಾಥ ತ್ರಿಪಾಠಿ ಅವರು ನಿತಿಶ್‌ ಕುಮಾರ್‌ ಅವರಿಗೆ ಪಟ್ನಾದ ರಾಜಭವನದಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ನಡೆದ ಸರಳ ಸಮಾರಂಭದಲ್ಲಿ ಆರನೇ ಬಾರಿಯ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಬೋಧಿಸಿದರು. 

ನಿತೀಶ್‌ ಅವರನ್ನು ಅನುಸರಿಸಿ ಸುಶೀಲ್‌ ಕುಮಾರ್‌ ಮೋದಿ ಅವರು ಬಿಹಾರದ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. 

ಕಳೆದ ಎರಡು ವರ್ಷಗಳಲ್ಲಿ ನಿತೀಶ್‌ ಕುಮಾರ್‌ ಅವರ ಎರಡನೇ ಇನ್ನಿಂಗ್ಸ್‌ ಇದಾಗಿದೆ. ಮಹಾ ಮೈತ್ರಿಕೂಟದ ಭ್ರಷ್ಟ ನಾಯಕರೊಂದಿಗೆ ತನ್ನನ್ನು ಗುರುತಿಸಿಕೊಳ್ಳಲು ತಾನು ಸಿದ್ಧನಿಲ್ಲ; ಅವರೊಂದಿಗೆ ಸರಕಾರದಲ್ಲಿ ಕೂಡಿಕೊಂಡು ಕೆಲಸ ಮಾಡುವುದು ತನಗೆ ಸಾಧ್ಯವಿಲ್ಲ ಎಂಬ ಖಡಕ್‌ ಸಂದೇಶವನ್ನು ರವಾನಿಸಿ ನಿತೀಶ್‌ ನಿನ್ನೆ ಹಠಾತ್‌ ಬೆಳವಣಿಗೆಯಲ್ಲಿ ತಮ್ಮ ಮುಖ್ಯಮಂತ್ರಿ ಪದಕ್ಕೆ ರಾಜೀನಾಮೆ ನೀಡಿದ್ದರು. 

ರಾಜಭವನದ ಸುತ್ತ ಮುತ್ತಲ ಪ್ರದೇಶದಲ್ಲಿ ಸೆ.144 ಹೇರಲ್ಪಟ್ಟ ಕಾರಣ ಇಂದು ಬೆಳಗ್ಗೆ ಆರ್‌ಜೆಡಿ ನಡೆಸಲು ಉದ್ದೇಶಿಸಿದ ಪ್ರತಿಭಟನ ಕಾಯರಕ್ರಮವನ್ನು ರದ್ದು ಪಡಿಸಲಾಯಿತು. 

Advertisement

ನಿತೀಶ್‌ ಕುಮಾರ್‌ ಅವರ ಮಿಂಚಿನ ನಡೆಯಿಂದ ಕ್ರುದ್ಧರಾಗಿರುವ ಆರ್‌ಜೆಡಿ ನಾಯಕ ಜೆ ಪಿ ಯಾದವ್‌ ಅವರು “ನಾವು ಈ ವಿಷಯವನ್ನು ಸಂಸತ್ತಿನಲ್ಲಿ  ಪ್ರಬಲ ಧ್ವನಿಯಲ್ಲಿ ಎತ್ತುವೆವು. ಇತರ ಪಕ್ಷಗಳೊಂದಿಗೂ ನಾವು ಮಾತುಕತೆ ನಡೆಸಿದ ಸಂಸತ್ತಿನಲ್ಲಿ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸುವೆವು’ ಎಂದು ಗುಡುಗಿದರು. 

Advertisement

Udayavani is now on Telegram. Click here to join our channel and stay updated with the latest news.

Next