ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಂಗಳವಾರ(ಫೆ.09, 2021) ಸಚಿವ ಸಂಪುಟವನ್ನು ವಿಸ್ತರಿಸಿದ್ದು, ನಿರೀಕ್ಷೆಯಂತೆ ಬಿಜೆಪಿ ರಾಷ್ಟ್ರೀಯ ವಕ್ತಾರ ಶಹನವಾಜ್ ಹುಸೈನ್ ಸೇರಿದಂತೆ 17 ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ.
ಇದನ್ನೂ ಓದಿ:ಭಾರತದಲ್ಲಿ ಎಷ್ಟು ಚೀನಾ ಕಂಪನಿ ವ್ಯವಹಾರ ನಡೆಸುತ್ತಿದೆ? ಕೇಂದ್ರದ ಮಾಹಿತಿಯಲ್ಲೇನಿದೆ
ಸಚಿವ ಸಂಪುಟ ವಿಸ್ತರಣೆಯಲ್ಲಿ ಮೈತ್ರಿಕೂಟ ಬಿಜೆಪಿಗೆ ಸಂದೇಶವನ್ನು ರವಾನಿಸಿದ್ದು, ಬಿಜೆಪಿ ಈ ಬಾರಿಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಗೃಹ ಇಲಾಖೆ, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಜಲಸಂಪನ್ಮೂಲ ಖಾತೆಯನ್ನು ಕಳೆದುಕೊಂಡಿದ್ದು, ಇವೆಲ್ಲವೂ ನಿತೀಶ್ ಜೆಡಿಯು ಪಾಲಾಗಿದೆ.
ಬಿಜೆಪಿಯ 16 ಮಂದಿ ಸಚಿವರಿದ್ದು, 22 ಖಾತೆಗಳನ್ನು ಹೊಂದಿದ್ದಾರೆ. ಜೆಡಿಯು 13 ಸಚಿವರಿದ್ದು, 21 ಖಾತೆಗಳನ್ನು ಹೊಂದಿದೆ. ಸಚಿವ ಸಂಪುಟದಲ್ಲಿ ಜಿತನ್ ರಾಮ್ ಮಾಂಜಿ ಹಾಗೂ ವಿಐಪಿ ಪಕ್ಷಕ್ಕೂ ತಲಾ ಒಂದೊಂದು ಸಚಿವ ಸ್ಥಾನ ನೀಡಲಾಗಿದೆ ಎಂದು ವರದಿ ವಿವರಿಸಿದೆ.
ನಿತೀಶ್ ಕುಮಾರ್ ಅವರ ಸಚಿವ ಸಂಪುಟದಲ್ಲಿ ಮಾಜಿ ಕೇಂದ್ರ ಸಚಿವ ಶಹನವಾಜ್ ಹುಸೈನ್ ಹೆಸರು ಹೆಚ್ಚು ಸದ್ದು ಮಾಡಿದ್ದು, ಹುಸೈನ್ ಅವರಿಗೆ ಕೈಗಾರಿಕೆ ಖಾತೆ ನೀಡಲಾಗಿದೆ. ಉಪಮುಖ್ಯಮಂತ್ರಿ ರೇಣು ದೇವಿಗೆ ವಿಪತ್ತು ನಿರ್ವಹಣಾ ಖಾತೆ ನೀಡಲಾಗಿದೆ.
ನಿತೀಶ್ ಕುಮಾರ್ ಅವರ ಸಚಿವ ಸಂಪುಟಕ್ಕೆ ನೂತನವಾಗಿ ಬಿಜೆಪಿಯ ಹತ್ತು ಮಂದಿ ಸೇರ್ಪಡೆಗೊಂಡಿದ್ದು, ಇದರಲ್ಲಿ ಎಮ್ ಎಲ್ ಸಿ ಶಹನವಾಜ್ ಹುಸೈನ್, ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಸಹೋದರ ನೀರಜ್ ಕುಮಾರ್ ಬಬ್ಲೂ, ನಿತೀನ್ ನವೀನ್, ಸಾಮ್ರಾಟ್ ಚೌಧರಿ, ಸುಭಾಶ್ ಸಿಂಗ್, ಜನಕ್ ರಾಮ್, ಅಲೋಕ್ ರಂಜನ್ ಜಾ, ನಾರಾಯಣ್ ಪ್ರಸಾದ್, ಪ್ರಮೋದ್ ಕುಮಾರ್ ಮತ್ತು ಸುನೀಲ್ ಕುಮಾರ್ ಸಚಿವ ಸ್ಥಾನ ಪಡೆದಿದ್ದಾರೆ.
ಜೆಡಿಯುನ ಲೇಶಿ ಸಿಂಗ್, ಸಂಜಯ್ ಜಾ, ಮದನ್ ಸಾಹ್ನಿ, ಶ್ರವಣ್ ಕುಮಾರ್, ಜಯಂತ್ ರಾಜ್ ಮತ್ತು ಜಾಮಾ ಖಾನ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಪಕ್ಷೇತರ ಅಭ್ಯರ್ಥೊ ಸುಮಿತ್ ಸಿಂಗ್, ಜಿತನ್ ರಾಂ ಮಾಂಜಿಯ ಹಿಂದುಸ್ತಾನ್ ಏವಂ ಮೋರ್ಚಾ ಮತ್ತು ವಿಕಾಸ್ ಶೀಲ್ ಇನ್ಸಾನ್ ಪಕ್ಷದ ಸದಸ್ಯರು ಸಚಿವ ಸ್ಥಾನ ಪಡೆದಿದ್ದಾರೆ.