Advertisement

ಹೆದ್ದಾರಿಯನ್ನು ಷಟ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸಚಿವರಿಗೆ ಮನವಿ

04:44 PM Feb 12, 2021 | Team Udayavani |

ಕೋಲಾರ: ಕೃಷ್ಣರಾಜಪುರಂನಿಂದ ರಾಜ್ಯದ ನಂಗಲಿ ಗಡಿವರೆಗಿನ ಚತುಷ್ಪಥ ರಸ್ತೆಯನ್ನು ಷಟ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ ಕುರಿತು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ ಭರವಸೆ ನೀಡಿದರು.

Advertisement

ಗುರುವಾರ ದೆಹಲಿಯಲ್ಲಿ ಸಂಸದ ಎಸ್‌.ಮುನಿಸ್ವಾಮಿ ಕೇಂದ್ರ ಸಚಿವರನ್ನು ಭೇಟಿಯಾಗಿ ಹೆಚ್ಚಿನ ವಾಹನ ದಟ್ಟಣೆ ಇರುವ ಈ ಮಾರ್ಗದಲ್ಲಿ ಅಪಘಾತಗಳನ್ನು ತಪ್ಪಿಸಿ ಸುಗಮ ಸಂಚಾರಕ್ಕೆ ಅನುವಾಗುವಂತೆ ಮಾಡಲು ಷಟ³ಥ ಮಾರ್ಗ ಅನಿವಾರ್ಯ ಎಂದು ಸಚಿವರ ಗಮನಕ್ಕೆ ತಂದರು.

ದಿನನಿತ್ಯ ಚೆನ್ನೈಗೆ ರಾಜ್ಯದಿಂದ ತರಕಾರಿ, ಹಣ್ಣು, ವಿವಿಧ ಕೈಗಾರಿಕೆಗಳ ಸರಕು ಸರಂಜಾಮು ತುಂಬಿದ ಲಾರಿಗಳು ಹೆಚ್ಚು ಸಂಚರಿಸುತ್ತಿವೆ. ಚತುಷ್ಪಥ ರಸ್ತೆ ವಾಹನಗಳ ಒತ್ತಡಕ್ಕೆ ಸಾಲದಾಗಿದ್ದು, ಕೂಡಲೇ ಷಟ್ಪಥ ರಸ್ತೆಯಾಗಿ ಅಭಿವೃದ್ಧಿಪಡಿಸಲು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next