ಲಂಡನ್: ವಿಶ್ವದ 9ನೇ ಶ್ರೇಯಾಂಕಿತ ಜಪಾನಿ ಟೆನಿಸಿಗ ಕೀ ನಿಶಿಕೊರಿ ಸ್ವಿಸ್ ತಾರೆ ರೋಜರ್ ಫೆಡ ರ ರ್‌ಗೆ ಅಘಾ ತ ವಿಕ್ಕಿ “ಎಟಿಪಿ ಫೈನಲ್ಸ್ ’ ಟೂರ್ನಿಯ ರೌಂಡ್ ರಾಬಿನ್ ಸುತ್ತಿನಲ್ಲಿ ಅಚ್ಚರಿಯ ಫಲಿತಾಂಶ ದಾಖಲಿಸಿದ್ದಾರೆ.
ರವಿವಾರ ರಾತ್ರಿ ನಡೆದ “ಲೇಟನ್ ಹೆವಿಟ್’ ಗುಂಪಿನ 2ನೇ ಪಂದ್ಯದಲ್ಲಿ 6 ಬಾರಿಯ ಎಟಿಪಿ ಫೈನಲ್ಸ್ ಚಾಂಪಿಯನ್ ಫೆಡ ರರ್ 6-7 (4-7), 3-6 ನೇರ ಸೆಟ್‌ಗಳಿಂದ ನಿಶಿಕೊರಿಗೆ ಶರಣಾದರು. ಈ ಸೋಲು ಫೆಡರರ್ ಅವರ ಸೆಮಿಫೈನಲ್ ದಾರಿಯನ್ನು ಕಠಿನಗೊಳಿಸಿದೆ.
ಶಾಂಘೈ ಹಾಗೂ ಪ್ಯಾರಿಸ್ ಓಪನ್ ಟೂರ್ನಿಗಳಲ್ಲಿ ನಿಶಿಕೊರಿಯನ್ನು ಸೋಲಿ ಸಿದ್ದ ಫೆಡರರ್, ಲಂಡನ್ ಕಾದಾಟದ ವೇಳೆ ನಿರಂತರ ತಪ್ಪು ಮಾಡ ತೊಡಗಿದರು. ಆರಂಭಿಕ ಸೆಟ್‌ನಲ್ಲಿ ಫೆಡರರ್ ಅವರ 20 ತಪ್ಪು ಹೊಡೆತಗಳ ಪ್ರಯೋಜನ ಪಡೆದ ನಿಶಿಕೊರಿ ಟೈ ಬ್ರೇಕರ್‌ನಲ್ಲಿ ಮೇಲುಗೈ ಸಾಧಿಸಿದರು. ಎರಡನೇ ಸೆಟ್‌ನಲ್ಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ ನಿಶಿಕೊರಿ, ಫೆಡರರ್‌ಗೆ ಹೆಚ್ಚಿನ ಅವಕಾಶ ನೀಡದೆ 6-3 ಅಂಕಗಳ ಅಂತರದಿಂದ ಜಯಿಸಿದರು.
ಮುಂದಿನ ಪಂದ್ಯದಲ್ಲಿ ಫೆಡರರ್ ಆಸ್ಟ್ರಿಯಾದ ಡೊಮಿನಿಕ್ ಥೀಮ್ ಅವರನ್ನು ಎದುರಿಸಲಿದ್ದಾರೆ. ಈ ಕೂಟದ ಸೆಮಿಫೈ ನಲ್ ಪ್ರವೇಶಿಸಿ ಬೇಕಾದರೆ ಥೀಮ್ ವಿರುದ್ಧದ ಪಂದ್ಯವನ್ನು ಫೆಡರರ್ ಜಯಿಸಬೇಕಾದುದು ಅನಿವಾರ್ಯ.
“ಕಳೆದ 2 ತಿಂಗಳಲ್ಲಿ 2 ಬಾರಿ ಫೆಡರರ್ ವಿರುದ್ಧ ಸೋತಿ ದ್ದೆ.ನನ್ನ ರೋಲ್ ಮಾಡೆಲ್‌ನೆದುರು ಆಡುವುದು ಅಷ್ಟು ಸುಲ ಭವಲ್ಲ.ಇದು ನನಗೆ ದೊಡ್ಡ ಸವಾಲಾಗಿತ್ತು. ಫೆಡರರ್ ಅವರನ್ನು ಸೋಲಿಸಿರುವುದು ಖುಷಿ ಕೊಟ್ಟಿದೆ’ ಎಂದು ನಿಶಿ ಕೊರಿ ಹೇಳಿದ್ದಾರೆ.
ಆ್ಯಂಡರ್ಸನ್‌ಗೆ ಜಯ
ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್ ಆಸ್ಟ್ರಿಯಾದ ಡೊಮಿನಿಕ್ ಥೀಮ್ ಅವರನ್ನು 6-3, 7-6 (12/10) ಸೆಟ್‌ಗಳಿಂದ ಸೋಲಿಸಿದರು.ಚೊಚ್ಚಲ ಎಟಿಪಿ ಫೈನಲ್ಸ್ ಆಡುತ್ತಿರುವ ಆ್ಯಂಡರ್ಸನ್ ಮುಂದಿನ ಪಂದ್ಯದಲ್ಲಿ ನಿಶಿಕೊರಿ ಅವರನ್ನು ಎದುರಿಸಲಿದ್ದಾರೆ.