Advertisement

ಪೆರ್ಮುಡ ಕಂಬಳದಲ್ಲಿ ಹೊಸ ದಾಖಲೆ ಬರೆದ ನಿಶಾಂತ್‌ ಶೆಟ್ಟಿ!

12:06 AM Feb 19, 2020 | mahesh |

ವೇಣೂರು: ಐಕಳದಲ್ಲಿ ನಡೆದ ಕಂಬಳದಲ್ಲಿ ಅಶ್ವತ್ಥಪುರ ಶ್ರೀನಿವಾಸ ಗೌಡ ಅವರು 142.50 ಮೀ. ಉದ್ದದ ಕರೆಯನ್ನು 13.62 ಸೆಕೆಂಡಿನಲ್ಲಿ ತಲುಪಿ ಅಚ್ಚರಿ ಮೂಡಿಸಿದ್ದರೆ ಕಳೆದ ರವಿವಾರ ವೇಣೂರು ಪೆರ್ಮುಡದಲ್ಲಿ ನಡೆದ ಸೂರ್ಯ-ಚಂದ್ರ ಜೋಡುಕರೆ ಕಂಬಳದಲ್ಲಿ ಬಜಗೋಳಿ ಜೋಗಿಬೆಟ್ಟು ನಿವಾಸಿ ನಿಶಾಂತ್‌ ಶೆಟ್ಟಿ ಅವರು ಹೊಸ ದಾಖಲೆ ನಿರ್ಮಿಸಿ ಅಚ್ಚರಿ ಮೂಡಿಸಿದ್ದಾರೆ.

Advertisement

ಹಗ್ಗ ಹಿರಿಯ ವಿಭಾಗದ ಸೆಮಿಫೈನಲ್‌ನಲ್ಲಿ ಹೊಸಬೆಟ್ಟು ಗೋಪಾಲಕೃಷ್ಣ ಭಟ್‌ ಅವರ ಕೋಣಗಳನ್ನು 143 ಮೀ. ಉದ್ದದ ಕರೆಯಲ್ಲಿ 13.61 ಸೆಕೆಂಡಿನಲ್ಲಿ ಗುರಿ ತಲುಪಿದ್ದಾರೆ. ಇದನ್ನು 100 ಮೀ.ಗೆ ಹೋಲಿಸಿದರೆ 9.52 ಸೆಕೆಂಡ್‌ ಆಗಿದೆ. ಗ್ರಾಮೀಣ ಕಂಬಳ ಕ್ರೀಡೆಯಲ್ಲಿ ಒಂದರ ಮೇಲೆ ಒಂದು ದಾಖಲೆ ಸೃಷ್ಟಿಯಾಗುತ್ತಿದ್ದು, ಕಂಬಳಾಭಿಮಾನಿಗಳಲ್ಲಿ ಹೊಸ ಹುರುಪು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next