Advertisement

ಪ್ರೈಮ್ ನಲ್ಲಿ ತೆರೆ ಕಾಣಲಿದೆ ತೆಲುಗಿನ “ನಿಶಬ್ಧಂ”

01:34 PM Sep 16, 2020 | Suhan S |

ನವದೆದಲಿ : ಅನುಷ್ಕಾ ಶೆಟ್ಟಿ ಹಾಗೂ ಮಾಧವನ್ ಅಭಿನಯದ ತೆಲುಗು ಚಿತ್ರ “ನಿಶಬ್ಧಂ” ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.

Advertisement

ಚಿತ್ರ ಬಿಡುಗಡೆಯ ಅಧಿಕೃತ ದಿನಾಂಕವನ್ನು ಚಿತ್ರ ತಂಡ ನಾಳೆ ಘೋಷಣೆ ಮಾಡಲಿದ್ದು  ಆ ಮೂಲಕ ತೆಲುಗಿನಲ್ಲಿ ಓಟಿಟಿಯಲ್ಲಿ ಬಿಡುಗಡೆಯಾಗುವ ಎರಡನೇ ಚಿತ್ರ ನಿಶಬ್ಧಂ ಆಗಲಿದೆ. ಮೊದಲನೇ ಚಿತ್ರವಾಗಿ ನಾನಿ ಅಭಿನಯದ “ವಿ” ಕೆಲದಿನಗಳ ಹಿಂದೆ ಪ್ರೈಮ್ ನಲ್ಲಿ ಬಿಡುಗಡೆಯಾಗಿತ್ತು.

ನಿಶಬ್ಧಂ ಚಿತ್ರದ ನಿರ್ಮಾಪರಾದ ಕೋನ ವೆಂಕಟ್ ಟ್ವೀಟರ್ ನಲ್ಲಿ ಅಭಿಪ್ರಾಯ ಸಂಗ್ರಹಿಸುವ ಪ್ರಶ್ನೆಯೊಂದನ್ನು ಕೇಳಿದ್ದರು. ನಿಶಬ್ಧಂ ಚಿತ್ರವನ್ನು ಓಟಿಟಿಯಲ್ಲಿ ಕಾಣಲು ತಾವೆಲ್ಲಾ ಸಿದ್ದರಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ಸುಮಾರು 11 ಸಾವಿರ ಮಂದಿ ಅಂದರೆ ಶೇ.70 ರಷ್ಟು ಜನ ಹೌದೆಂದು ಪ್ರತಿಕ್ರಿಯೆ ಕೊಟ್ಟಿದ್ದರು.

ನಿಶಬ್ಧಂ ಚಿತ್ರ ಬಹುಭಾಷೆಯ ಚಿತ್ರವಾಗಿದ್ದು ಏಪ್ರಿಲ್ 2 ರಂದು ಬಿಡುಗಡೆ ಆಗಬೇಕಿತ್ತು. ಕೋವಿಡ್ ಕಾರಣದಿಂದ ಚಿತ್ರ ಬಿಡುಗಡೆಯನ್ನು ಮುಂದೂಡಿತ್ತು. ಚಿತ್ರ ಮಂದಿರ ತೆರೆಯುವ ಬಗ್ಗೆ ಇನ್ನು ಗೊಂದಲಗಳಿದ್ದು ಅಂತಿಮವಾಗಿ ಚಿತ್ರ ತಂಡ ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ. ಹೇಮಂತ್ ಮಾಧುರ್ಕರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಅನುಷ್ಕಾ ಶೆಟ್ಟಿ, ಮಾಧವನ್, ಹಾಲಿವುಡ್ ನಟ ಮೈಕೆಲ್ ಮ್ಯಾಡ್ಸೆನ್, ಶಾಲಿನಿ ಪಾಂಡೆ ಹಾಗೂ ಇನ್ನೀತರ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next