Advertisement

ಶಸ್ತ್ರಾಸ್ತ್ರ ಖರೀದಿಗೆ ಡಿಎಸಿ ಒಪ್ಪಿಗೆ

06:00 AM May 29, 2018 | Team Udayavani |

ಹೊಸದಿಲ್ಲಿ: ಭಾರತೀಯ ಸೇನೆಗಾಗಿ, 6,900 ಕೋಟಿ ರೂ. ಮೊತ್ತದ ಶಸ್ತ್ರಾಸ್ತ್ರ, ಪರಿಕರ ಖರೀದಿ ಪ್ರಸ್ತಾವನೆಗೆ ರಕ್ಷಣಾ ಸ್ವಾಧೀನ ಸಂಸ್ಥೆ (ಡಿಎಸಿ) ಒಪ್ಪಿಗೆ ನೀಡಿದೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಡಿಎಸಿ ಸಭೆಯಲ್ಲಿ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಯಿತು.

Advertisement

ಈ ಪ್ರಸ್ತಾವನೆಯಲ್ಲಿ, ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಪಟ್ಟಿಯಲ್ಲಿ, ರಾಕೆಟ್‌ ಲಾಂಚರ್‌ಗಳಿಗಾಗಿ (ಆರ್‌ಎಲ್‌) ಥರ್ಮಲ್‌ ಇಮೇಜಿಂಗ್‌ (ಟಿಐ) ಪರಿಕರಗಳನ್ನೂ ಖರೀದಿಸುವ ಅಂಶವಿದೆ. ಕಗ್ಗತ್ತಲಲ್ಲಿಯೂ ಶತ್ರುಗಳ ನೆಲೆಗಳ ಮೇಲೆ ನಿಖರವಾಗಿ ದಾಳಿ ನಡೆಸಲು ಇದರಿಂದ ಸಾಧ್ಯವಾಗುತ್ತದೆ. ಇತ್ತೀಚೆಗಷ್ಟೇ ಪಾಕ್‌ ಸೇನೆಯು ಥರ್ಮಲ್‌ ಕ್ಯಾಮೊಫ್ಲೇಜ್‌ ಸೂಟ್‌ ಧರಿಸಿ ಭಾರತೀಯ ಯೋಧನನ್ನು ಹತ್ಯೆ ಗೈದಿತ್ತು. ಈಗ ಸೇನೆಗೆ ಸಿಗಲಿರುವ ಟಿಐ ಪರಿಕರದಿಂದ ರಾತ್ರಿ ಹೊತ್ತು ಶತ್ರುಗಳ ಟ್ಯಾಂಕ್‌, ಸೇನೆಯ ಚಲನವಲ ನಗಳನ್ನು ಥರ್ಮಲ್‌ ಕ್ಯಾಮೊಫ್ಲೇಜ್‌ ಸೂಟ್‌ ಧರಿಸಿದ್ದರೂ ಅರಿಯಲು ಸಾಧ್ಯವಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next