Advertisement

ಸೇನೆಗೆ ಭಾರತದ ಇಂಜಿನ್‌ ಹಸ್ತಾಂತರ

06:00 AM Jul 29, 2018 | |

ಚೆನ್ನೈ: ದೇಶೀಯವಾಗಿ ನಿರ್ಮಿಸಿದ ಎರಡು ಅಧಿಕ ಶಕ್ತಿಯ ಇಂಜಿನ್‌ಗಳನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಶನಿವಾರ ಸೇನೆಗೆ ಹಸ್ತಾಂತರಿಸಿದ್ದಾರೆ. ಇದನ್ನು ಅವಾಡಿಯ ಇಂಜಿನ್‌ ಫ್ಯಾಕ್ಟರಿ ನಿರ್ಮಿಸಿದ್ದು, ಇದೇ ಮೊದಲ ಬಾರಿಗೆ ದೇಶದಲ್ಲೇ ನಿರ್ಮಾಣ ಮಾಡಲಾಗಿದೆ. 1 ಸಾವಿರ ಅಶ್ವಶಕ್ತಿಯ ಇಂಜಿನ್‌ಗಳಾಗಿದ್ದು, ಇವುಗಳನ್ನು ಭೀಷ್ಮ ಹಾಗೂ ಅಜೇಯ ಟ್ಯಾಂಕ್‌ಗೆ ಅಳವಡಿಸಲಾಗುತ್ತದೆ.

Advertisement

ರಷ್ಯಾ ಒದಗಿಸಿದ ವಿನ್ಯಾಸವನ್ನು ಆಧರಿಸಿ ಇದನ್ನು ನಿರ್ಮಿಸಲಾಗಿದ್ದು, ಸಂಪೂರ್ಣ ಬಿಡಿಭಾಗಗಳನ್ನೂ ಭಾರತದಲ್ಲೇ ತಯಾರಿಸಲಾಗಿದೆ. ಈ ಹಿಂದೆ ಹಲವು ಬಿಡಿಭಾಗಗಳನ್ನು ರಷ್ಯಾದಿಂದ ತರಿಸಿಕೊಳ್ಳಲಾಗುತ್ತಿತ್ತು. ಈ ಹಿಂದೆ ಶೇ.73ರಷ್ಟು ಬಿಡಿಭಾಗಗಳನ್ನು ದೇಶದಲ್ಲಿ ತಯಾರಿಸಲಾಗುತ್ತಿತ್ತು. ದೇಶದಲ್ಲೇ ಬಿಡಿಭಾಗಗಳನ್ನು ತಯಾರಿಸುವುದರಿಂದ ಪ್ರತಿ ವರ್ಷ ಸರ್ಕಾರಕ್ಕೆ 80 ಕೋಟಿ ರೂ. ಉಳಿತಾಯವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next