Advertisement

ದೇಶದ ಐದು ನದಿ ಜೋಡಣೆಗೆ ಬಜೆಟ್ ನಲ್ಲಿ ಅಸ್ತು: 44,605 ಕೋಟಿ ರೂ ಅನುದಾನ

11:38 AM Feb 01, 2022 | Team Udayavani |

ಹೊಸದಿಲ್ಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಆರಂಭಿಸಿದ್ದಾರೆ. ನಾವು ಆಜಾದಿ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ಕೋವಿಡ್ ಮಧ್ಯೆಯೇ ಭಾರತ ಆರ್ಥಿಕ ಚೇತರಿಕೆ ಕಾಣುತ್ತಿದೆ ಎಂದು ಬಜೆಟ್ ಭಾಷಣ ಆರಂಭಿಸಿದ ಕೇಂದ್ರ ಹಣಕಾಸು ಸಚಿವೆ ಹಲವು ಯೋಜನೆಗಳನ್ನು ಘೋಷಿಸಿದರು.

Advertisement

ದೇಶದ ಐದು ಪ್ರಮುಖ ನದಿಗಳ ಜೋಡಣೆ ಮಾಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದರು. ಗೋದಾವರಿ- ಕೃಷ್ಣಾ, ಕಾವೇರಿ-ಪೆನ್ನಾರ್, ನರ್ಮದಾ- ಗೋದಾವರಿ, ಕೃಷ್ಣಾ-ಪೆನ್ನಾರ್ ನದಿಗಳ ಜೋಡಣೆ ಮಾಡಲಾಗುವುದು ಎಂದರು. ಈ ಯೋಜನೆಗೆ 44,605 ಕೋಟಿ ರೂ ಅನುದಾನ ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದರು.

ದೇಶದ ಎರಡನೇ ಅತೀ ದೊಡ್ಡ ನದಿಯಾದ ಗೋದಾವರಿ ಮತ್ತು ಐದನೇ ದೊಡ್ಡ ನದಿ ನರ್ಮದಾ ನದಿ ಜೋಡಣೆಗೆ ಅನುಮತಿ ನೀಡಲಾಗಿದೆ. ಕರ್ನಾಟಕದಲ್ಲಿ ಹರಿಯುವ ಕಾವೇರಿ, ಕೃಷ್ಣಾ ಮತ್ತು ಪೆನ್ನಾರ್ (ಪಿನಾಕಿನಿ) ನದಿಗಳ ಜೋಡಣೆಗೆ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಅನುಮತಿ ನೀಡಿದೆ.

ಇದನ್ನೂ ಓದಿ:Live Updates:ಕೇಂದ್ರ ಬಜೆಟ್ ಮಂಡನೆ ಶುರು;LIC ಬಂಡವಾಳ ಹಿಂತೆಗೆತ, 60 ಲಕ್ಷ ಉದ್ಯೋಗ ಸೃಷ್ಟಿ

ಬಜೆಟ್ ಪ್ರಮುಖ ಅಂಶಗಳು:

Advertisement

ರೈತರಿಂದ 1,200 ಲಕ್ಷ ಮೆಟ್ರಿಕ್ ಟನ್ ಗೋಧಿ, ಭತ್ತ ಖರೀದಿ. ಕನಿಷ್ಠ ಬೆಂಬಲ ಬೆಲೆ ಘೋಷಣೆಗೆ 2.73 ಲಕ್ಷ ಕೋಟಿ ಘೋಷಣೆ. ಬೆಳೆ ಸಮೀಕ್ಷೆಗೆ ಡ್ರೋಣ್ ಬಳಕೆ.

ಪಿಎಂ ಗತಿ ಶಕ್ತಿ ಯೋಜನೆಗೆ 7 ಇಂಜಿನ್. 400 ಹೆಚ್ಚುವರಿ ಒಂದೇ ಭಾರತ್ ರೈಲು ಆರಂಭ. ರೈಲ್ವೆ ಇಲಾಖೆಯಿಂದ ಹೊಸ ಸೇವೆ. ರೈಲ್ವೆ ನಿಲ್ದಾಣಗಳ ಉನ್ನತೀಕರಣಕ್ಕೆ ಆದ್ಯತೆ.

ಸರ್ಕಾರಿ ಶಾಲೆ ಮಕ್ಕಳಿಗೆ ‘ಒನ್ ಕ್ಲಾಸ್-ಒನ್ ಟಿವಿ’ ಕಾರ್ಯಕ್ರಮ. ಎಣ್ಣೆ ಕಾಳು ಬೆಳೆಯುವ ರೈತರಿಗೆ ಹೆಚ್ಚಿನ ಒತ್ತು. 200 ಟಿವಿ ಚಾನೆಲ್ ಗಳ ಮೂಲಕ ಪರ್ಯಾಯ ಪಾಠ.

ಡಿಜಿಟಲ್ ವಿವಿ ಸ್ಥಾಪನೆ. ವಿಶ್ವದರ್ಜೆಯ ಡಿಜಿಟಲ್ ಯೂನಿರ್ವಸಿಟಿ ಸ್ಥಾಪನೆ. ಮಹಿಳಾ ಸಬಲೀಕರಣಕ್ಕೆ ಸಕ್ಷಮ ಅಂಗನವಾಡಿ ಯೋಜನೆ. 2 ಲಕ್ಷ ಅಂಗನವಾಡಿಗಳ ಉನ್ನತೀಕರಣ.

ಶೀಘ್ರದಲ್ಲಿಯೇ ಎಲ್ ಐಸಿಯಿಂದ ಬಂಡವಾಳ ಹಿಂತೆಗೆತ, ಡಿಜಿಟಲ್ ಆರ್ಥಿಕತೆಗೆ ಹೆಚ್ಚಿನ ಒತ್ತು. ಈ ಬಾರಿಯ ಬಜೆಟ್ ನಲ್ಲಿ ಆತ್ಮನಿರ್ಭರತೆಗೆ ಒತ್ತು. ದೇಶದಲ್ಲಿ 60 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ.

ಪೋಸ್ಟ್ ಆಫೀಸ್ ಗಳಿಗೆ ಬ್ಯಾಂಕ್ ಸ್ವರೂಪ. ಎಟಿಎಂ, ಡಿಜಿಟಲ್ ಬ್ಯಾಂಕ್ ಸೇವೆ. 1.4 ಲ್ಕಷ ಪೋಸ್ಟ್ ಆಫೀಸ್ ಗಳ ಸ್ವರೂಪ ಬದಲು. 74 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕ್ ಸ್ಥಾಪನೆ.

Advertisement

Udayavani is now on Telegram. Click here to join our channel and stay updated with the latest news.

Next