ಹೊಸದಿಲ್ಲಿ: “ಮಧ್ಯಮ ವರ್ಗದವರ ಒತ್ತಡಗಳು ಏನೆಂದು ನನಗೆ ಅರಿವಿದೆ’ ಎಂದು ರವಿವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
Advertisement
ಈ ಹೇಳಿಕೆಯು ಮುಂಬರುವ ಬಜೆಟ್ ಬಗ್ಗೆ ಅನೇಕ ನಿರೀಕ್ಷೆಗಳನ್ನು ಇಟ್ಟುಕೊಂಡಿರುವ ಮಧ್ಯಮ ವರ್ಗಕ್ಕೆ ಆಶಾವಾದ ಮೂಡಿಸಿದೆ. ಕೇಂದ್ರ ಸರಕಾರದ ಮಹಿಳಾ ಉದ್ಯೋಗಿಗಳಿಗೆ ಶೇ.15ರಷ್ಟು ವರ್ಕ್ ಫ್ರಂ ಹೋಂ ಭತ್ತೆ ಒದಗಿಸಲು, ವೇತನ ಪಡೆಯುವ ವರ್ಗಕ್ಕೆ ತೆರಿಗೆ ವಿನಾಯಿತಿ, ಮನೆ ಬಾಡಿಗೆ ಭತ್ತೆ ಹೆಚ್ಚಳ, ಉಳಿತಾಯ ಮತ್ತು ಹೂಡಿಕೆ ಹೆಚ್ಚಳಕ್ಕಾಗಿ ಸೆಕ್ಷನ್ 80 ಸಿ ಡಿಡಕ್ಷನ್‌ಗಿರುವ ಮಿತಿಯನ್ನು (ಈಗಿರುವುದು 1.50 ಲಕ್ಷ ರೂ.) ಏರಿಕೆ ಮಾಡಲು ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.